ಕೇವಲ ಯೌಟ್ಯೂಬ್ ವಿಡಿಯೋ ಗಳಿಂದ ಎಷ್ಟು ದುಡ್ಡು ಗಳಿಸುತ್ತಾರೆ ಗೊತ್ತಾ? ಭಾರತದ ಟಾಪ್ -5 ಯುಟ್ಯೂಬರ್ ಗಳು ಯಾರು ಗೊತ್ತೇ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಯೂಟ್ಯೂಬ್ ಚಾನೆಲ್ ಗಳೆಂದರೇ ಕೆಲಸವಿಲ್ಲದವರು ನೋಡುವುದು ಎಂಬಂತಾಗಿತ್ತು. ಆದರೇ ಈಗ ಕಾಲ ಬದಲಾಗಿದೆ. ಅಡುಗೆ ಮನೆಯಿಂದ ಹಿಡಿದು ಐಟಿ, ಬಾಹ್ಯಾಕಾಶದವರೆಗೂ ಯೂಟ್ಯೂಬ್ ಮಾಹಿತಿಯ ಕಣಜವಾಗಿದೆ. ಕೇವಲ ಮಾಹಿತಿ ಕಣಜ ಮಾತ್ರವಲ್ಲದೇ, ಉತ್ತಮ ಮಾಹಿತಿಗಳನ್ನ ತಿಳಿಸುವ ಯೂಟ್ಯೂಬ್ ಚಾನೆಲ್ ಗಳ ಓನರ್ ಗಳಿಗೆ ಕೈ ತುಂಬಾ ಹಣ ಸಹ ಸಿಗುತ್ತಿದೆ. ಉತ್ತಮ ಚಂದಾದಾರನ್ನ ಹೊಂದಿದ್ದು, ನೀವು ಪೋಸ್ಟ್ ಮಾಡುವ ವಿಡಿಯೋಗಳು ಹೆಚ್ಚು ಭಾರಿ ನೋಡಿದರೇ, ನಿಮ್ಮ ಬ್ಯಾಂಕ್ ಖಾತೆಗೆ ದಂಡಿಗಟ್ಟಲೇ ಹಣ ಬರುವುದು ಖಚಿತವಾಗುತ್ತದೆ. ಬನ್ನಿ ಭಾರತದಲ್ಲಿ ವರ್ಷಕ್ಕೆ ಅತಿ ಹೆಚ್ಚು ಸಂಪಾದಿಸುವ ಟಾಪ್ -5 ಯೂಟ್ಯೂಬರ್ ಗಳು ಯಾರು ಎಂಬುದನ್ನ ತಿಳಿಯೋಣ.

ಟಾಪ್ 5 – ಭುವನ್ ಬ್ಯಾಮ್ – ಬಿಬಿ ಕಿ ವೈನ್ಸ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಸ್ಥಾಪಿಸಿರುವ ಭುವನ್ ಬ್ಯಾಮ್ ಐದನೇ ಸ್ಥಾನದಲ್ಲಿದ್ದಾರೆ. ಇವರ ಚಾನೆಲ್ ಗೆ ಬರೋಬ್ಬರಿ 21.1 ಮಿಲಿಯನ್ ಸಬ್ಸ್ಕೈಬರ್ ಗಳಿದ್ದಾರೆ. ಹೆಚ್ಚಾಗಿ ಕಾಮಿಡಿ ಕಂಟೆಂಟ್ ಮಾಡುವ ಇವರು ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಅತ್ಯಂತ ಜನಪ್ರಿಯ ಯೂಟ್ಯೂಬರ್ ಆಗಿದ್ದಾರೆ. ಇವರು ಪ್ರತಿ ತಿಂಗಳು 90 ಲಕ್ಷ ರೂಪಾಯಿಯನ್ನ ಯೂಟ್ಯೂಬ್ ಸಂಪಾದಿಸುತ್ತಿದ್ದಾರೆ.

ಟಾಪ್ 4 – ಸನಮ್ ಪುರಿ – ಮೂಲತಃ ಗಾಯಕರಾದ ಇವರು ಸನಮ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ. ಇವರ ಚಾನೆಲ್ ಗೆ 9.37 ಮಿಲಿಯನ್ ಸಬ್ಸ್ಕ್ರೈಬರ್ ಇದ್ದಾರೆ. ಇವರು ತಿಂಗಳಿಗೆ ಯೂಟ್ಯೂಬ್ ನಿಂದ 1.2 ಕೋಟಿ ರೂಪಾಯಿ ಸಂಪಾದಿಸುತ್ತಿದ್ದಾರೆ.

ಟಾಪ್ 3 – ವಿದ್ಯಾ ಅಯ್ಯರ್ : ವಿದ್ಯಾ ವೋಕ್ಸ್ ಎಂಬ ಚಾನೆಲ್ ತೆರೆದಿರುವ ಇವರು ಒರ್ವ ಗಾಯಕಿ ಕಮ್ ಸಂಗೀತ ನಿರ್ದೇಶಕಿ. ರಮಣೀಯ ಸ್ಥಳಗಳಲ್ಲಿ ತಮ್ಮ ಸುಮಧುರ ಗಾಯನಗಳ ವಿಡೀಯೋಗಳನ್ನ ಪೋಸ್ಟ್ ಮಾಡುತ್ತಾರೆ. ಇವರು 7.43 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಇವರು ಪ್ರತಿ ತಿಂಗಳು 1.3 ಕೋಟಿ ರೂಪಾಯಿಯನ್ನು ಯೂಟ್ಯೂಬ್ ನಿಂದ ಸಂಪಾದಿಸುತ್ತಿದ್ದಾರೆ.

ಟಾಪ್ 2 – ನಿಶಾ ಮಧುಲಿಕಾ : ಯೂಟ್ಯೂಬ್ ನ ಖ್ಯಾತ ಅಡುಗೆ ಚಾನೆಲ್ ಹೊಂದಿದ್ದಾರೆ. ನಿಶಾ ಮಧುಲಿಕಾ ಎಂಬ ಹೆಸರಿನಲ್ಲೇ ಇರುವ ಚಾನೆಲ್ ನಲ್ಲಿ ಥರಥರವಾದ ಅಡುಗೆ ಮಾಡುವುದನ್ನ ಹೇಳಿಕೊಡುತ್ತಾರೆ. ಇವರು ಚಾನೆಲ್ ಗೆ ಬರೋಬ್ಬರಿ 11.9 ಮಿಲಿಯನ್ ಸಬ್ಸ್ಕ್ರೈಬರ್ ಇದ್ದಾರೆ. ಇವರು ಪ್ರತಿ ತಿಂಗಳಿಗೆ 1.4 ಕೋಟಿ ರೂಪಾಯಿಯನ್ನು ಸಂಪಾದಿಸುತ್ತಿದ್ದಾರೆ.

ಟಾಪ್ 1 – ಗೌರವ್ ಚೌಧರಿ : ಗೌರವ್ ಚೌಧರಿ ಎಂಬ ಹೆಸರಿನಲ್ಲೇ ಯೂಟ್ಯೂಬ್ ಚಾನೆಲ್ ಹೊಂದಿರುವ ಇವರ ಚಾನೆಲ್ ಗೆ ಬರೋಬ್ಬರಿ 5.14 ಮಿಲಿಯನ್ ಸಬ್ಸ್ಕ್ರೈಬರ್ ಹೊಂದಿದ್ದಾರೆ. ಶಾಪಿಂಗ್, ವರ್ಕೌಟ್, ಟ್ರಾವೆಲಿಂಗ್ ಹೀಗೆ ಎಲ್ಲಾ ಮಾದರಿಯ ವಿಡಿಯೋಗಳನ್ನ ಪೋಸ್ಟ್ ಮಾಡುತ್ತಾರೆ. ಇವರು ಪ್ರತಿ ತಿಂಗಳು 1.35 ಕೋಟಿ ರೂಪಾಯಿ ಸಂಪಾದಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.