ತೆಲುಗು ಕಲಿಯುತ್ತಿದ್ದಾರೆ ಗಟ್ಟಿಮೇಲೆ ಖ್ಯಾತಿಯ ಅಮೂಲ್ಯ , ತೆಲುಗು ಭಾಷೆಗೆ ಹೋದಮೇಲೆ ಕನ್ನಡ ಬಿಡುತ್ತಾರಾ??

ನಮಸ್ಕಾರ ಸ್ನೇಹಿತರೇ ಧಾರಾವಾಹಿಗಳು ಕಿರುತೆರೆಯ ಬೆಸ್ಟ್ ಎಂಟರ್ ಟೈನಿಂಗ್ ವಿಷಯ. ಅದರಲ್ಲಿ ಕೆಲವು ನಟಿಯರು ನಟರು ಹಲವರ ಕ್ರಶ್ ಕೂಡ. ಅಂಥವರಲ್ಲಿ ಒಬ್ಬರು ನಟಿ ನಿಶಾ ರವಿಕೃಷ್ಣನ್. ಪಟ ಪಟಾ ಅಂಥ ಮಾತನಾಡೋ ಹುಡುಗಿ, ರೌಡಿ ಬೇಬಿ ಎಂದೇ ಖ್ಯಾತರಾದ ಹುಡುಗಿ ಈ ಗಟ್ಟಿಮೇಳ ಧಾರಾವಾಹಿಯ ನಟಿ ಅಮೂಲ್ಯ. ಗಟ್ಟಿಮೇಳದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಅಮೂಲ್ಯ ಕನ್ನಡಿಗರ ಮೆಚ್ಚಿನ ನಟಿ.

ನಟಿ ನಿಶಾ ರವಿಕೃಷ್ಣನ್ ಇತ್ತೀಚಿಗೆ ತೆಲಗು ಕಿರುತೆರೆಯಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ತೆಲಗು ಧಾರಾವಾಹಿಯಲ್ಲಿ ನಟಿಸುವ ನಿಶಾ ರವಿಕೃಷ್ಣನ್ ಗಟ್ಟಿಮೇಳ ಧಾರಾವಾಹಿಯನ್ನು ಬಿಡುತ್ತಾರೆ ಎನ್ನುವ ರೂಮರ್ ಹರಿದಾಡುತ್ತಿತ್ತು. ಆದರೆ ಇದಕ್ಕೆಲ್ಲಾ ತೆರೆ ಎಳೆದಿದ್ದಾರೆ. ನಿಶಾ. ತಾನು ತೆಲಗಿನಲ್ಲಿ ನಟಿಸುತ್ತಿರುವುದು ನಿಜ, ಆದರೆ ಗಟ್ಟಿಮೇಳ ಧಾರಾವಾಹಿ ಬಿಡುವುದಿಲ್ಲ. ಕನ್ನದ ಧಾರಾವಾಹಿ ನನ್ನ ಮೊದಲ ಆದ್ಯತೆ ಎಂದಿದ್ದಾರೆ. ಅಲ್ಲದೇ ತಾವು ತೆಲಗು ಭಾಷೆಯನ್ನು ಕಲಿಯುತ್ತಿರುವ ನಿಶಾ ಅಲ್ಲಿ ತನ್ನ ಕೋ ಆರ್ಟಿಸ್ಟ್ ಗಳಿಗೂ ಕೂಡ ಕನ್ನಡವನ್ನು ಕಲಿಸುತ್ತಿದ್ದಾರಂತೆ.

ನಟಿ ನಿಶಾ ರವಿಕೃಶ್ಣನ್ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದ್ದು, ’ಅಂದೊಂದಿತ್ತು ಕಾಲ’ ಚಿತ್ರದಲ್ಲಿ ನಟಿಸಿದ್ದಾರೆ. ನಟ ವಿನಯ್ ರಾಜ್‌ಕುಮಾರ್ ಹಾಗೂ ನಟಿ ಅದಿತಿ ಪ್ರಭುದೇವ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ ನಟಿ ನಿಶಾ. ಇನ್ನು ಕನ್ನಡ ಹಾಗೂ ತೆಲಗೂ ಎರಡೂ ಭಾಷೆಗಳಲ್ಲಿ ಧಾರಾವಾಹಿ ಅಭಿನಯದಲ್ಲಿ ಬ್ಯುಸಿಯಾಗಿದ್ದಾರೆ ನಿಶಾ. ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ ಪಾತ್ರವನ್ನೇ ಹೋಲುವ ತೆಲಗು ಪಾತ್ರ ನಿರ್ವಹಿಸಲು ನಟಿ ನಿಶಾ ರವಿಕೃಷ್ಣನ್ ಅವರಿಗೆ ಸುಲಭವಾಗುತ್ತಿದೆಯಂತೆ.