ಸದ್ದಿಲ್ಲದೆ ಮದುವೆ ಆಗುವುದಕ್ಕೆ ಹೊರಟಿದ್ದಾರೆ ನೋಡಿ ಈ ಬಿಗ್ ಬಾಸ್ ಕನ್ನಡ ಸೀಸನ್ 8ರ ಅಭ್ಯರ್ಥಿ?? ಯಾರು ಗೊತ್ತೇ?

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡದ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಖಂಡಿತವಾಗಿಯೂ ಬಿಗ್ಬಾಸ್ ಎಂಬುದು ನಿಮಗೆಲ್ಲಾ ಗೊತ್ತಿರುವ ಸಂಗತಿ. ಇನ್ನು ಬಿಗ್ ಬಾಸ್ ಬಂದಮೇಲೆ ಖಂಡಿತವಾಗಿಯೂ ಬಿಗ್ ಬಾಸ್ ಕುರಿತಂತೆ ಸಾಕಷ್ಟು ಸುದ್ದಿ-ಸಮಾಚಾರಗಳು ಚರ್ಚೆಯಾಗುತ್ತಲೇ ಇರುತ್ತದೆ. ಅದರಲ್ಲಂತೂ ಈ ಬಾರಿಯ ಬಿಗ್ ಬಾಸ್ ನಲ್ಲಿ ಸಾಕಷ್ಟು ಜೋಡಿಗಳ ಮದುವೆ ಕುರಿತಂತೆ ಸಾಕಷ್ಟು ಚರ್ಚೆಯಾಗಿತ್ತು.

ಮೊದಲಿಗೆ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರ ಮದುವೆ ಸುದ್ದಿ ಜೋರಾಗಿ ನಡೆದಿತ್ತು. ನಂತರ ಅರವಿಂದ್ ಕೆಪಿ ಹಾಗೂ ದಿವ್ಯ ರವರ ನಡುವಿನ ಮದುವೆ ಸುದ್ದಿ ಜೋರಾಗಿ ಹರಿದಾಡಿತ್ತು. ಇನ್ನು ಶುಭಪೂಂಜಾ ರವರು ತಮ್ಮ ಬಹುಕಾಲದ ಗೆಳೆಯನನ್ನು ಮದುವೆಯಾಗುವುದರಲ್ಲಿ ಇದ್ದರು ಆದರೆ ಬಿಗ್ ಬಾಸ್ ಗೆ ಬಂದ ಕಾರಣ ಮದುವೆಯನ್ನು ಮುಂದೂಡಲಾಗಿತ್ತು ಬಿಗ್ ಬಾಸ್ ನಿಂದ ಹೊರಬಂದ ನಂತರ ಮದುವೆ ಎಂಬುದಾಗಿ ಹೇಳಿದ್ದರು. ಆದರೆ ಬಿಗ್ ಬಾಸ್ ನಿಂದ ಹೊರಬಂದ ನಂತರ ಈ ಮೂರು ಕಡೆಯವರು ಕೂಡ ಮದುವೆಯಾಗಿರಲಿಲ್ಲ. ಆದರೆ ಈಗ ಇವರನ್ನು ಹೊರತುಪಡಿಸಿ ಮತ್ತೊಬ್ಬ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಅಭ್ಯರ್ಥಿ ಮದುವೆಯಾಗುವತ್ತ ಒಂದು ಹೆಜ್ಜೆಯನ್ನು ಇಟ್ಟಿದ್ದಾರೆ. ಹೌದು ಸ್ನೇಹಿತರೆ ಅಭ್ಯರ್ಥಿ ಯಾರು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರ ಅವರು ಇನ್ನೂ ಯಾರು ಅಲ್ಲ ಸ್ನೇಹಿತರೆ ವೈಜಯಂತಿ ಅಡಿಗ. ಹೌದು ಸ್ನೇಹಿತರೆ ನಟಿ ಪ್ರಿಯಾಂಕ ತಿಮ್ಮೇಶ್ ರವರೊಂದಿಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದ ವೈಜಯಂತಿ ಅಡಿಗ ಅವರು ಇತ್ತೀಚೆಗಷ್ಟೇ ತಮ್ಮ ಪ್ರಿಯಕರ ಸೂರಜ್ ರೊಂದಿಗೆ ಆನ್ಲೈನ್ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಹೌದು ಸ್ನೇಹಿತರೆ ಈ ಕುರಿತಂತೆ ಬಿಗ್ ಬಾಸ್ ನಲ್ಲಿ ಕೂಡ ಸಾಕಷ್ಟು ಬಾರಿ ಮಾತನಾಡಿದ್ದರು. ಇನ್ನು ಸೂರಜ್ ಅಮೆರಿಕದಲ್ಲಿ ಇರುವುದರ ಕಾರಣದಿಂದಾಗಿ ಆನ್ಲೈನ್ನಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅವರು ಭಾರತಕ್ಕೆ ಬಂದಿಳಿಯಲಿದ್ದಾರೆ ನಂತರ ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ.

Get real time updates directly on you device, subscribe now.