ಅಂದು ವಿಷ್ಣು ದಾದಾ ವಿಚಾರದಲ್ಲಿ ದರ್ಶನ್ ರವರು ಮಾಡಿ ಆ ಒಂದು ತಪ್ಪು ಇಂದಿಗೂ ಅಭಿಮಾನಿಗಳಿಗೆ ಬೇಸರ ತರಿಸುತ್ತಿದೆ, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದ ದಿಗ್ಗಜರ ಹೆಸರುಗಳನ್ನು ನೀವು ನೆನಪಿಟ್ಟುಕೊಂಡೇ ಇರುತ್ತೀರಿ. ಅದರಲ್ಲಿ ವರನಟ ಡಾ. ರಾಜ್ ಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ಶಂಕರ್ ನಾಗ್ ಮೊದಲಾದವರು ತಾವು ಇಲ್ಲದಿದ್ದರೂ ತಮ್ಮ ನಟನೆಯ ಮೂಲಕ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಈ ನಟರ ವರ್ಚಸ್ಸು ಎಷ್ಟಿದೆ ಯೆಂದರೆ ಇವರುಗಳ ಬಗ್ಗೆ ಯಾರಾದರೂ ಕೆಮ್ಮಿದರೂ ಸಾಕು ಇಡೀ ಕನ್ನಡ ನಾಡೇ ಅವರ ವಿರುದ್ಧ ನಿಲ್ಲುತ್ತೆ. ಅಷ್ಟು ಅಭಿಮಾನ ಕನ್ನಡಿಗರಿಗೆ.

ಆದರೆ ಕೆಲವೊಮ್ಮೆ ಇಂಥ ಮೇರು ನಟರ ಬಗ್ಗೆ ಕೆಲವು ಅವಿವೇಕಿಗಳು ಕೊಡುವ ಸ್ಟೇಟ್ ಮೆಂಟ್ ಎಲ್ಲರ ಆಕ್ರೋಶಕ್ಕೆ ಕಾರಣವಾಗತ್ತೆ. ಆಗ ನಟರ ಅಭಿಮಾನಿಗಳು ಮಾತ್ರವಲ್ಲ ಚಿತ್ರರಂಗದ ಹಲವರು ಒಟ್ಟಾಗಿ ನಿಂತು ಬಿಡ್ತಾರೆ. ಯಾರು ಯಾರ ಬಗ್ಗೆ ಏನು ಹೇಳಿದ್ರು ಎಂಬ ಕುತೂಹಲನಾ? ಇಲ್ಲಿದೆ ಸಂಪೂರ್ಣ ವಿವರ.

ತೆಲಗು ನಟ ವಿಜಯ್ ರಂಗರಾಜು ಅವರ ಹೇಳಿಕೆ ಬಗ್ಗೆ ನಿಮಗೆಲ್ಲಾ ಗೊತ್ತಿರಬಹುದು. ಅವರು ಮಾತನಾಡಿರುವುದು ಸಾಹಸ ಸಿಂಹ, ’ದಾದಾ’ ವಿಷ್ಣುವರ್ಧನ್ ಅವರ ಬಗ್ಗೆ. ’ತಾವು ವಿಷ್ಣು ವರ್ಧನ್ ಅವರ ಜೊತೆಗೆ ಅಭಿನಯಿಸುವಾಗ ಅವರ ಕಾಲರ್ ಹಿಡಿದು ಜಗಳವಾಡಿದ್ದೆ. ಅವರ ನಡವಳಿಕೆ ಸರಿ ಇರಲಿಲ್ಲ ಎಂಬಂಥ ತಪ್ಪು ಹೇಳಿಕೆಯೊಂದನ್ನು ಸಂದರ್ಶನವೊಂದರಲ್ಲಿ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದವರು ಒಂದಿಬ್ಬರಲ್ಲ. ವಿಷ್ಣು ಅವರ ಅಭಿಮಾನಿಗಳು ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಹಲವಾರು ಕಲಾವಿದರು ರಂಗರಾಜು ಅವರ ಹೇಳಿಕೆಗೆ ತಿರುಗಿಬಿದ್ದಿದ್ದರು.

’ದಾದಾ’ ಹಲವಾರು ನಟರನ್ನು ಬೆಳೆಸಿದವರು, ನಟ ಸುದೀಪ್, ದರ್ಶನ್ ಮೊದಲಾದವರು ವಿಷ್ಣು ದಾದಾ ಅವರ ನೆರಳಿನಲ್ಲಿ ಬೆಳೆದವರೆ. ಹಾಗಾಗಿ ಎಲ್ಲರಿಗೂ ವಿಷ್ಣುವರ್ಧನ್ ಎಂದರೆ ಅಲ್ಲಿಲ್ಲದ ಪ್ರೀತಿ, ಅಭಿಮಾನ. ಆದರೆ ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ಪುನೀತ್ ರಾಜ ಕುಮಾರ್, ಕಿಚ್ಚ ಸುದೀಪ್ ರೂ ಸೇರಿ ಎಲ್ಲರೂ ರಂಗರಾಜು ಅವರನ್ನು ತರಾಟೆಗೆ ತೆಗೆದುಕೊಂಡರೂ, ಚಾಲೆಂಜುಂಗ್ ಸ್ಟಾರ್ ದರ್ಶನ್ ಮಾತ್ರ ಯಾವುದೇ ಪ್ರತಿಕ್ರಿಯೆ ಕೊಡದೆ ಸುಮ್ಮನೇ ಇರುವುದು ದರ್ಶನ್ ಅಭಿಮಾನಿಗಳಲ್ಲಿಯೂ ಬೇಸರ್ ಮೂಡಿಸಿದೆ.