ಜಗತ್ತಿನ ಮೊದಲ ಚಿನ್ನದ ಹೋಟೆಲ್ ಎಲ್ಲಿ ನಿರ್ಮಾಣ ಮಾಡಲಾಗಿದೆ ಗೊತ್ತೇ? ಹೇಗಿದೆ ಹಾಗೂ ಒಂದು ದಿನದ ಬಾಡಿಗೆ ಎಷ್ಟು ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಜತ್ತಿನಲ್ಲಿ ತಮ್ಮ ಐಶಾರಾಮಿ ಜೀವನಕ್ಕಾಗಿ ಕೆಲವರು ಎಷ್ಟು ಖರ್ಚು ಮಾಡುತ್ತಾರೆ ಎಂಬುದಕ್ಕೆ ಲೆಕ್ಕವೇ ಇಲ್ಲ. ಬೆಳಿಗ್ಗೆ ಒಂದು ದೇಶದಲ್ಲಿ ಉಪಹಾರವಾದರೆ ರಾತ್ರಿ ಊಟಕ್ಕೆ ಇನ್ಯಾವುದೋ ದೇಶಕ್ಕೆ ಹಾರುವಷ್ಟು ಶ್ರೀಮಂತರೂ ಕೂಡ ಇದ್ದಾರೆ ಎಂದರೆ ಆಶ್ಚರ್ಯವಾಗಬಹುದು. ಇಂಥ ವಿ ವಿ ಐ ಪಿ ಗಳ ಬೇಡಿಕೆಯನ್ನು ಇಡೇರಿಸುವುದಕ್ಕಾಗಿಯೇ ಕೆಲವು ಐಷಾರಾಮಿ ಹೋಟೆಲ್ ಗಳು ನಿರ್ಮಾಣವಾಗಿವೆ. ಅವುಗಳಲ್ಲಿ ದುಬೈ ನಲ್ಲಿರುವ ಒಂದು ವಿಶ್ವವಿಖ್ಯಾತ ಹೋಟೆಲ್ ಬುರ್ಜ್ ಅಲ್ ಅರ್ಬ್.

ಈ ಹೋಟೆಲ್ ನಲ್ಲಿ ಮೇಲು ದರ್ಜೆಯ ರೋಮ್ ಗಳು ಎಷ್ಟು ಐಷಾರಾಮಿಯಾಗಿವೆ ಎಂದರೆ ಇಲ್ಲಿ ಇರುವ ರೂಮಿನ ಬೆಲೆ ಒಂದು ದಿನಕ್ಕೆ 24 ಸಾವಿರ ಡಾಲರ್ ಗಳು! ಇಲ್ಲಿರುವ ಕನ್ನಡ ಫ್ರೇಮ್ ಗಳು ಚಿನ್ನದ ಲೇಪನ ಮಾಡಿ ಮಾಡಲಾಗಿರುವಂಥದ್ದು. ಆದರೆ ಇದನ್ನು ಮೀರಿಸುವ ಇನ್ನೊಂದು ಐಷಾರಾಮಿ ಹೋಟೆಲ್ ಇವಾಗ ನಿರ್ಮಾಣವಾಗಿದ್ದು ವಿಶ್ವದಾಖಲೆಯಾಗಿದೆ. ಅದು ಯಾವ ಹೋಟೆಲ್? ಹೇಗಿದೆ? ಎಲ್ಲಿದೆ ಈ ಎಲ್ಲವನ್ನೂ ಹೇಳ್ತಿವಿ ಮುಂದೆ ಓದಿ..

ವಿಯೆಟ್ನಾಂ ನ ರಾಜಧಾನಿ ಹನೊಯಿಯಲ್ಲಿರುವ ಡೋಲ್ಸ್ ಹನೋಯಿ ಗೋಲ್ಡ್ ಲೇಕ್ ಹೊಟೆಲ್. ಇದು ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ನಿರ್ಮಿತವಾದ ಚಿನ್ನದ ಲೇಪನ ಮಾಡಿದ ಕಟ್ಟಡವಾಗಿದೆ. ಇದೇ ಕಳೆದ ಜುಲೈ 2 ರಂದು ಇದರ ಉದ್ಘಾಟನೆಯಾಗಿದೆ. ಈ ಹೋಟೆಲ್ ನ ಬಾಹ್ಯ ರಚನೆ ಶುದ್ಧ 24 ಕ್ಯಾರೇಟ್ ಚಿನ್ನದಿಂದ ಮಾಡಲ್ಪಟ್ಟಿದೆ. ಕಲ್ಲುಗಳ ಇಟ್ಟಿಗೆಯ ಮೇಲೆ ಬಂಗಾರದ ಸೆರಾಮಿಕ್ ನಿಂದ ಹೋಟೆಲ್ ನ ಮುಂಭಾಗವನ್ನು ರಚಿಸಲಾಗಿದೆ ಎನ್ನಲಾಗುತ್ತಿದೆ. ಈ ಹೋಟೆಲ್ ಒಂದು ಸರೋವರದ ದಂಡೆಯ ಮೇಲೆ ಭವ್ಯವಾಗಿ ತಲೆ ಎತ್ತಿ ನಿಂತಿದೆ.

ಇನ್ನು ಈ ಚಿನ್ನದ ಲೇಪನದ ಹೋಟೆಲ್ ನಲ್ಲಿ ಉಳಿದುಕೊಳ್ಳಲು ಕೊಡಬೇಕಾಗಿದ್ದು 250 ಡಾಲರ್ ನಿಂದ 20,000 ಡಾಲರ್ ವರೆಗೆ ಅಂದರೆ ನಮ್ಮರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ 15 ಲಕ್ಷ ರೂಪಾಯಿಗಳು. ಇನ್ನು ಪ್ರವಾಸೋದ್ಯಮವೇ ಹೆಚ್ಚಾಗಿ ಆರ್ಥಿಕತೆಯ ಮೂಲವಾಗಿರುವ ವಿಯೆಟ್ನಾಂ ನಲ್ಲಿ ಪ್ರವಾಸಿಗರನ್ನು ರಂಚಿಸಲು ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದೆ ಈ ಹೋಟೆಲ್ ತಂಡ.

ಹಾಗೆಯೇ ಚಿನ್ನದ ಲೇಪನವನ್ನು ಹೊಂದಿರುವ ಈ ಹೋಟೆಲನಲ್ಲಿ ಬಾಗಿಲು ಕಿಟಕಿ, ಬಾತ್ ರೂಮ್, ಟಾಯ್ಲೆಟ್, ಶವರ್ ಎಲ್ಲವೂ ಚಿನ್ನದ್ದೇ! ಇವುಗಳ ಜೊತೆಗೆ ಪ್ರವಾಸಿಗರನ್ನು ರಂಜಿಸಲು ಬೇಕಾಗಿರುವ ಎನ್ನಾ ವ್ಯವಸ್ಥೆಯ ಜೊತೆಗೆ ಭದ್ರತೆಯನ್ನು ಒದಗಿಸುವ ಭರವಸೆ ನೀಡಿದೆ ಹೋಟೆಲ್ ತಂಡ. ಇಂಥ ಐಶಾರಾಮಿ ಹೋಟೆಲ್ ನಲ್ಲಿ ನಮ್ಮ ಭಾರತೀಯರಲ್ಲಿ ಯಾರು ಮೊದಲು ಹೋಗುತ್ತಾರೆ ಎಂದೂ ಕುಡ ಸಾಕಷ್ತು ಕುತೂಹಲಕಾರಿ ವಿಷಯವಾಗಿದೆ.

Get real time updates directly on you device, subscribe now.