ಪ್ರತಿ ದಿನ ಪುರುಷರು ಹುರಿದ ಬೆಳ್ಳುಳ್ಳಿಯನ್ನು ತಿನ್ನಲೇಬೇಕು, ಯಾಕೆ ಗೊತ್ತಾ?? ತಿಳಿದರೇ ಏನೇ ಮಾಡಿದರೂ ಮಿಸ್ ಮಾಡುವಿದಿಲ್ಲ.

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈರುಳ್ಳಿ – ಬೆಳ್ಳುಳ್ಳಿ ಒಂದು ರೀತಿಯ ಅವಳಿ ಜವಳಿ ಇದ್ದ ಹಾಗೆ. ಅದರಲ್ಲೂ ಬೆಳ್ಳುಳ್ಳಿಯಲ್ಲಿ ಅನೇಕ ಆರೋಗ್ಯಕಾರಿ ಔಷಧೀಯ ಗುಣಗಳಿವೆ ಎಂಬುದು ಆಯುರ್ವೇದದ ಗ್ರಂಥಗಳಲ್ಲಿಯೂ ಸಾಬೀತಾಗಿದೆ. ಇನ್ನು ಬೆಳ್ಳುಳ್ಳಿಯನ್ನ ಹುರಿದು ಪ್ರತಿನಿತ್ಯ ಸೇವಿಸಿದರೇ ಪುರುಷರು ಹಲವಾರು ವ್ಯಾಧಿಗಳಿಂದ ಹೊರಬರಬಹುದಂತೆ. ಬನ್ನಿ ಪ್ರತಿದಿನ ಪುರುಷರು ಹುರಿದ ಬೆಳ್ಳುಳ್ಳಿಯನ್ನ ಸೇವಿಸಿದರೇ ದೇಹಕ್ಕೆ ಎಂತಹ ಪ್ರಯೋಜನಗಳು ಆಗುತ್ತವೆ ಎಂಬುದನ್ನ ತಿಳಿಯೋಣ ಬನ್ನಿ.

ನಿಮಗೆ ಕೆಮ್ಮು ಅಥವಾ ಶೀತ ಮುಂತಾದ ರೋಗಗಳು ಪದೇ ಪದೇ ಬರುತ್ತಿದೆ ಎಂದಾದರೇ ಅದಕ್ಕೆ ಹುರಿದ ಬೆಳ್ಳುಳ್ಳಿ ಸೇವನೆ ರಾಮಬಾಣ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆದಾಗ ಅಂತಹ ರೋಗಗಳು ಬರುತ್ತಿರುತ್ತವೆ. ಪ್ರತಿದಿನ ಹುರಿದ ಬೆಳ್ಳುಳ್ಳಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪುರುಷರು ಬಹುಬೇಗನೆ ದಣಿವು, ಆಯಾಸ ಆಗುತ್ತಿದ್ದರೇ ಅಥವಾ ನಿಶ್ಯಕ್ತಿಯಿಂದ ಬಳಲುತ್ತಿದ್ದರೇ, ಹುರಿದ ಬೆಳ್ಳುಳ್ಳಿಯನ್ನು ಹಾಲಿನ ಜೊತೆ ಸೇವಿಸಬೇಕು. ಆಗ ದೇಹದಲ್ಲಿನ ನಿಶ್ಯಕ್ತಿ ಹೊರಟು ಹೋಗಿ ಹೊಸ ಚೈತನ್ಯ ಬರುತ್ತದೆ. ಇದಲ್ಲದೇ ಮಧುಮೇಹಿಗಳು ಸಹ ಹುರಿದ ಬೆಳ್ಳುಳ್ಳಿಯನ್ನು ಸೇವಿಸಿದರೇ, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಇರುವಂತೆ ಮಾಡುತ್ತದೆ.

ಇನ್ನು ತೂಕ ಕರಗಿಸಬೇಕೆನ್ನುವವರು, ಡಯಟ್ ಮಾಡುವವರು ಸಹ ಹುರಿದ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೇ, ಶೀಘ್ರವಾಗಿ ಫಲಿತಾಂಶವನ್ನು ಪಡೆಯಬಹುದು. ಅದಲ್ಲದೇ ಹೃದಯ ಸಂಭಂದಿ ಖಾಯಿಲೆಗಳು ಅಥವಾ ಹೃದಯಾಘಾತಕ್ಕೆ ಒಳಗಾಗಿರುವವರು ಸಹ ಹುರಿದ ಬೆಳ್ಳುಳ್ಳಿ ಸೇವನೆಯಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಇನ್ನು ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿರುವ ಪುರುಷರು ನಿಯಮಿತವಾಗಿ ಬೆಳ್ಳುಳ್ಳಿಯನ್ನು ಸೇವಿಸಿದರೇ, ಆ ಸಮಸ್ಯೆಗಳಿಂದ ಹೊರಬರಬಹುದು. ಬೆಳ್ಳುಳ್ಳಿ ಸೇವನೆಯಿಂದ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಹೆಚ್ಚಾಗುವ ಕಾರಣ ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ಪುರುಷರು ಇದನ್ನು ಸೇವಿಸಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.