ಕ್ರಿಕೆಟಿಗ ದಿನೇಶ್ ರವರ ಹೆಂಡತಿಯನ್ನು ಲವ್ ಮಾಡಿ, ನಂಬಿಕೆ ದ್ರೋಹ ಮಾಡಿ ಮತ್ತೊಬ್ಬ ಕ್ರಿಕೆಟಿಗ ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ಒಮ್ಮೆ ಬಾಂಗ್ಲಾದೇಶಿ ಕ್ರಿಕೆಟಿಗರಿಗೆ ಹಾಗೂ ಅಭಿಮಾನಿಗಳಿಗೆ ನಾಗಿಣಿ ಡ್ಯಾನ್ಸ್ ರುಚಿ ತೋರಿಸಿದಂತಹ ಕ್ರಿಕೆಟಿಗ ಯಾರು ಎಂದು ಕೇಳಿದರೆ ಖಂಡಿತವಾಗಿ ಎಲ್ಲರೂ ತಪ್ಪದೇ ಉತ್ತರ ಕೊಡುವುದು ದಿನೇಶ್ ಕಾರ್ತಿಕ್ ಎಂದು. ಹೌದು ಸ್ನೇಹಿತರೆ ಬಾಂಗ್ಲಾದೇಶದ ವಿರುದ್ಧ ಕೊನೆಯ ಎಸೆತದಲ್ಲಿ 6ರನ್ನು ಗಳು ಬೇಕಾಗಿದ್ದಾಗ ದಿನೇಶ್ ಕಾರ್ತಿಕ್ ರವರು ಹೊಡೆದ ಆ ಸಿಕ್ಸ್ ಭಾರತದ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಯಿತು. ಭಾರತೀಯ ಕ್ರಿಕೆಟ್ ತಂಡದ ಪ್ರತಿಭಾನ್ವಿತ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿರುವ ದಿನೇಶ್ ಕಾರ್ತಿಕ್ ರವರಿಗೆ

ಭಾರತ ಕ್ರಿಕೆಟ್ ತಂಡದಲ್ಲಿ ಅವಕಾಶ ಸಿಕ್ಕಿದ್ದು ಕಡಿಮೆಯಾದರೂ ಕೂಡ ಸಿಕ್ಕಿದ ಅವಕಾಶವನ್ನು ತಂಡದ ಗೆಲುವಿಗಾಗಿ ಉಪಯೋಗಿಸಿಕೊಂಡವರು ನಮ್ಮ ದಿನೇಶ್ ಕಾರ್ತಿಕ್. ಇನ್ನು ಇವರು ತಮಿಳುನಾಡು ಮೂಲದ ಕ್ರಿಕೆಟಿಗರು. ದಿನೇಶ್ ಕಾರ್ತಿಕ್ ರವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಇವರು 2007 ರಲ್ಲಿ ನಿಖಿತಾ ವಂಜ ಅವರನ್ನು ಮದುವೆಯಾಗಿದ್ದರು. ಇನ್ನು ಸುಖವಾಗಿದ್ದ ಇವರ ಸಂಸಾರವನ್ನು ಬೇರೆ ಮಾಡುವಂತೆ ಮಾಡಿದ್ದ ಖ್ಯಾತ ಕ್ರಿಕೆಟಿಗ ಯಾರು ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ಹೇಳುತ್ತೇನೆ.

ಹೌದು ಸ್ನೇಹಿತರೆ ಇವರಿಬ್ಬರು ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವಂತೆ ಮಾಡಿದ್ದು ಭಾರತೀಯ ಕ್ರಿಕೆಟ್ ತಂಡದ ಇನ್ನೊಬ್ಬ ಆಟಗಾರ ಹಾಗೂ ಅವರ ಸಹ ಕ್ರಿಕೆಟಿಗ ಮುರಳಿ ವಿಜಯ್ ಅವರು. ಹೌದು ಸ್ನೇಹಿತರೆ ದಿನೇಶ್ ಕಾರ್ತಿಕ್ ರವರ ಪತ್ನಿ ನಿಕಿತಾ ರವರೊಂದಿಗೆ ಮುರಳಿ ವಿಜಯ್ ಮೊದಲಿನಿಂದಲೂ ಕೂಡ ತುಂಬಾನೇ ಕ್ಲೋಸ್ ಆಗಿದ್ದರು. ಈ ವಿಷಯವನ್ನು ತಿಳಿದ ದಿನೇಶ್ ಕಾರ್ತಿಕ್ ರವರು ತಮ್ಮ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿ ಕೆಲಕಾಲ ಗಳನ್ನು ನಂತರ ಅಂದರೆ 2017 ರಲ್ಲಿ ಭಾರತದ ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ರವರನ್ನು ಮದುವೆಯಾಗುತ್ತಾರೆ. ಇನ್ನು ಇತ್ತ ದಿನೇಶ್ ಕಾರ್ತಿಕ್ ಅವರ ಮಡದಿ ನಿಖಿತಾ ಮುರಳಿ ವಿಜಯ್ ಅವರನ್ನು ವಿವಾಹವಾಗುತ್ತಾರೆ. ಇಂದಿಗೂ ಕೂಡ ದಿನೇಶ್ ಕಾರ್ತಿಕ್ ಹಾಗೂ ಮುರಳಿ ವಿಜಯ್ ಒಂದೇ ತಂಡಕ್ಕಾಗಿ ಆಡುತ್ತಿದ್ದರು ಕೂಡ ತಮ್ಮ ಕ್ರಿಕೆಟ್ನಲ್ಲಿ ವೈಯಕ್ತಿಕ ಜಗಳವನ್ನು ತಂದುಕೊಂಡಿಲ್ಲ.