ಟಾಪ್ ನಟರು ಅಳಿಸಲಾಗದಂತಹ ಅಣ್ಣಾವ್ರ ದಾಖಲೆಯನ್ನು ಮುರಿದ ನಟಿ ಯಾರು ಗೊತ್ತೇ?? ಆ ದಾಖಲೆಯಾದರೂ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿಸಿನಿಮಾ ಎಂದರೆ ಮೊದಲಿಗೆ ನೆನಪಿಗೆ ಬರುವ ಹೆಸರು ಡಾ. ರಾಜಕುಮಾರ್ ಅವರದ್ದೇ ಹೊರತು ಮತ್ಯಾರದ್ದೂ ಅಲ್ಲ. ಕನ್ನಡ ಚಿತ್ರರಂಗದಲ್ಲೇ ಅದ್ಭುತ ನಟನೆಯ ಮೂಲಕ ಬಹಳಷ್ಟು ವರ್ಷ ಚಿತ್ರರಂಗವನ್ನು ಆಳಿದ ನಾಯಕರೆಂದರೆ ಅದು ನಮ್ಮ ಅಣ್ಣಾವ್ರು. ಒಬ್ಬ ನಾಯಕರಾಗಿ ಒಬ್ಬ ಗಾಯಕರಾಗಿ ವರನಟ ಡಾ. ರಾಜಕುಮಾರ್ ಅವರಿಗೆ ಅವರೇ ಸಾಟಿ.

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಡಾ. ರಾಜ್ ಕುಮಾರ್ ಅವರು ಮಾಡದೇ ಇರುವ ಪಾತ್ರಗಳಿಲ್ಲ. ಚಂದನವನದಲ್ಲಿ ಯಾವುದೇ ನಿರ್ದೇಶಕರು ಬಂದರೂ ಎಲ್ಲರ ಕನಸು ಒಂದೇ ಆಗಿತ್ತು, ಡಾ. ರಾಜ ಕುಮಾರ್ ಅವರ ಚಿತ್ರಕ್ಕೆ ನಿರ್ದೇಶನ ಮಾಡಬೇಕು ಎನ್ನುವುದು. ಅಂಥ ಅದ್ಭುತ ನಟ ಡಾ. ರಾಜ್ ಕುಮಾರ್. 60-70 ರ ದಶಕದಲ್ಲಿ ರಾಜ ಕುಮಾರ್ ಅವರ ಕಲಾ ಸೇವೆಯನ್ನು ಮರೆಯುವಂತಿಲ್ಲ. ಆ ಸಮಯದಲ್ಲಿ ಅದೆಷ್ಟು ಚಿತ್ರಗಳಲ್ಲಿ ಅಣ್ಣಾವ್ರು ನಟಿಸಿದ್ದಾರೆ ಎಂದರೆ ಇದಿನ ಯಾವ ನಟರೂ ಕೂಡ ಅಷ್ಟು ತಮ್ಮನ್ನು ತಾವು ಚಿತ್ರರಂಗಕ್ಕೆ ಸಮರ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಒಬ್ಬ ನಟ ವರ್ಷದಲ್ಲಿ ಎಷ್ಟು ಚಿತ್ರಗಳಲ್ಲಿ ನಟಿಸಬಹುದು? ಇಂದಿನ ಅಂಕಿ ಅಂಶಗಳನ್ನೇ ಗಮನಿಸಿದರೆ ಅದ್ಭುತ ನಟ ಎನಿಸಿಕೊಂಡವರೂ ಕೂಡ ವರ್ಷಕ್ಕೆ 5-6 ಚಿತ್ರಗಳಲ್ಲಿ ನಟಿಸುವುದು ಕೂಡ ಕಷ್ಟವೇ. ಆದರೆ ಡಾ. ರಾಜ್ ಕುಮಾರ್ ಅವರ ವಿಷಯ ಹಾಗಲ್ಲ. ಅವರು ವರ್ಷದಲ್ಲಿ ಯಾವ ನಟರೂ ನಟಿಸದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಹೌದು ಸ್ನೇಹಿತರೆ, 1968ರಲ್ಲಿ ಅಂದರೆ ಆ ವರ್ಷದಲ್ಲಿ ರಾಜ ಕುಮಾರ್ ಅವರು ನಟಿಸಿರುವ ಸಿನಿಮಾದ ಸಂಖ್ಯೆ 16. ಈ ದಾಖಲೆಯನ್ನು ಇದುವರೆಗೂ ಯಾವ ನಟರೂ ಕೂಡ ಮೀರಲ್ಲಿಲ್ಲ. ಆದರೆ ಈ ದಾಖಲೆಯನ್ನು ಮುರಿದಿದ್ದು ಒಬ್ಬರೇ ಬಬ್ಬ ನಟಿ. ಅವರೇ ಮಾಲಾಶ್ರೀ! ಡಾ. ರಾಜ ಕುಮಾರ್ ಅವರೇ ಚಿತ್ರರಂಗಕ್ಕೆ ಪರಿಚಯಿಸಿದ ನಟಿ ಮಾಲಾಶ್ರೀ 70-80 ದಶಕದ ಮನೋಜ್ಞ ನಟಿ. ಇವರ ಮನಮೋಹಕ ಅಭಿನಯವನ್ನು ಮೆಚ್ಚಿಕೊಳ್ಳದವರೇ ಇಲ್ಲ. 1992 ರಲ್ಲಿ ಸುಮಾರು 19 ಚಿತ್ರಗಳಲ್ಲಿ ನಟಿಸುವುದರ ಮೂಲಕ ಡಾ. ರಾಜಕುಮಾರ್ ದಾಖಲೆಯನ್ನು ನಟಿ ಮಾಲಾಶ್ರೀ ಮುರಿದಿದ್ದರು. ಇವರು ವರ್ಷವೊಂದಕ್ಕೆ ಅತೀ ಹೆಚ್ಚು ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಅಣ್ಣಾವ್ರ ಈ ದಾಖಲೆ ಮುರಿದಿಯುವುದಕ್ಕೆ ಬರೋಬ್ಬರಿ 24 ವರ್ಷಗಳೇ ಸಂದಿತು ಎಂಬುದೇ ಆಶ್ಚರ್ಯದ ವಿಚಾರ.