ಮುಂದಿನ ಒಲಂಪಿಕ್ಸ್ ಗೆ ಮಹತ್ವದ ಹೆಜ್ಜೆ ಇಟ್ಟ ಕರ್ನಾಟಕ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೂಳೆಬ್ಬಿಸಲು ಮಾಡಿರುವ ಪ್ಲಾನ್ ಏನು ಗೊತ್ತೇ??

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದರಂತೆ ಎಂಬುದು ನಮ್ಮ ಹಿರೀಯರು ಹಲವಾರು ವರ್ಷಗಳಿಂದ ಬಳಸುತ್ತಿರುವ ಗಾದೆ. ಇನ್ನು ಪ್ರತಿ ನಾಲ್ಕು ವರ್ಷಗೊಳಿಗೊಮ್ಮೆ ನಡೆಯಲಿರುವ ಒಲಂಪಿಕ್ಸ್ ನಲ್ಲಿ ಯಾರಾದರೊಬ್ಬ ಸ್ಪರ್ಧಿ ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕವನ್ನ ಗೆದ್ದಾಗ ಮಾತ್ರ ಜನ ಓಲಂಪಿಕ್ಸ್ ನಲ್ಲಿ ನಾವು ಸಹ ಮೊದಲಿನಿಂದಲೂ ಪ್ರಯತ್ನ ಪಟ್ಟಿದ್ಧರೇ, ನಾವು ಸಹ ಚೀನಾ, ಅಮೇರಿಕಾಗೆ ಪೈಪೋಟಿ ನೀಡಿ ಪದಕ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯುತ್ತಿದ್ದೆವೆಂದು ಹೇಳುತ್ತಿರುತ್ತಾರೆ. ಆದರೇ ಒಲಂಪಿಕ್ಸ್ ಮುಗಿದ ನಂತರ ಈ ಪದಕದ ಆಸೆಗಳನ್ನ ಸಂಪೂರ್ಣ ಮರೆತು ಬಿಡುತ್ತಾರೆ. ಆದರೇ ಇದಕ್ಕೆ ಈಗ ಕರ್ನಾಟಕ ಸರ್ಕಾರ ತನ್ನ ಹೊಸ ಚಿಂತನೆಯೊಂದಿಗೆ ಒಂದು ಪೂರ್ಣ ವಿರಾಮ ನೀಡಿದೆ.

ಇತ್ತಿಚೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ಸ್ವಾತಂತ್ರ ದಿನಾಚರಣೆಯ ಭಾಷಣದಲ್ಲಿ ಅಮೃತ ಕ್ರೀಡಾ ದತ್ತು ಎಂಬ ಯೋಜನೆಯನ್ನು ಘೋಷಿಸಿದ್ದರು. ಅದರ ಪ್ರಕಾರ ಕ್ರೀಡೆಯ ಆಯ್ಕೆಗೆ ಸಮಿತಿಯೊಂದನ್ನ ರಚಿಸಿ, ಅದರಲ್ಲಿ ಆಯ್ಕೆಯಾಗುವ ಕ್ರೀಡಾಪಟುಗಳಿಗೆ, ಕ್ರೀಡೆಯ ಸಾಮಗ್ರಿ, ಕಿಟ್, ತರಬೇತಿಗೆಂದು ಐದು ಲಕ್ಷ ರೂಪಾಯಿ ನೀಡುವ ಯೋಜನೆಯಾಗಿತ್ತು.

ಈಗ ಆ ಯೋಜನೆ ಪರ ಕಾರ್ಯ ನಿರ್ವಹಿಸುತ್ತಿರುವ ಕ್ರೀಡಾ ಸಚಿವ ನಾರಾಯಣಗೌಡ , ಮುಂಬರುವ ಪ್ಯಾರಿಸ್ ಒಲಂಪಿಕ್ಸ್ ಗೆ ಕರ್ನಾಟಕದಿಂದ ಕನಿಷ್ಠ 75 ಕ್ರೀಡಾಪಟುಗಳು ಭಾಗವಹಿಸಬೇಕೆಂಬ ಮಹಾತ್ವಾಕಾಂಕ್ಷೆಯೊಂದಿಗೆ ಎಂಟು ಜನ ತಜ್ಞರ ಒಂದು ಸಮಿತಿಯನ್ನ ರಚಿಸಿದ್ದಾರೆ. ಈ ಸಮಿತಿಯ ಅಧ್ಯಕ್ಷರಾಗಿ ನಾರಾಯಣಗೌಡ ಇರಲಿದ್ದು, ಸದಸ್ಯರಾಗಿ ಅರ್ಜುನ ಪ್ರಶಸ್ತಿ ಪುರಸ್ಕೃತ ಶ್ರೀಧರ್, ರಘುನಾಥ್ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಅಮೀನ್ ಇದ್ದಾರೆ. ಈ ಮೂವರು ತಜ್ಞ ಹಾಗೂ ಅರ್ಹ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿಯನ್ನು ನೀಡುವ ಗುರುತರ ಜವಾಬ್ದಾರಿಯನ್ನು ಹೊಂದಿದ್ದಾರೆ. ಈ ಮೂಲಕ ಮುಂಬರುವ ಒಲಂಪಿಕ್ಸ್ ನಲ್ಲಿ ಕನಿಷ್ಠ ಕರ್ನಾಟಕದ ಕ್ರೀಡಾಪಟುಗಳು ಒಂದಾದರೂ ಪದಕ ಗೆಲ್ಲುವ ಆಶಾವಾದವನ್ನು ಹೊಂದಬಹುದು ಎಂದು ಹೇಳಲಾಗುತ್ತದೆ. ಕೊನೆ ಕ್ಷಣದಲ್ಲಿ ಪ್ರಯತ್ನ ಪಡುವ ಬದಲು, ಇಂದಿನಿಂದಲೇ ಒಲಂಪಿಕ್ಸ್ ನ ಪದಕಗಳ ಮೇಲೆ ಕಣ್ಣಿಟ್ಟು ಪ್ರಯತ್ನಿಸುವ ಹಾಗೂ ಅದಕ್ಕೆ ಪ್ರೋತ್ಸಾಹ ನೀಡುವ ಬಸವರಾಜ ಬೊಮ್ಮಾಯಿರವರ ಸರ್ಕಾರದ ನಡೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಕಾರಣವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.