ನವರಸ ನಾಯಕ ಜಗ್ಗೇಶ್ ರವರು ದುಡ್ಡಿಲ್ಲದೆ 200 ರೂಪಾಯಿ ಕೇಳಿದ್ದಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಅಂದಿನ ಕಾಲದ ಕನ್ನಡ ಚಿತ್ರರಂಗದ ಸೊಗಸು ಇಂದಿನ ಕಾಲಕ್ಕೆ ಎಲ್ಲೂ ಕಂಡು ಬರುವುದಿಲ್ಲ. ಇಂದಿನ ಕಾಲಕ್ಕೆ ಚಿತ್ರರಂಗ ಮಿತಿಮೀರಿದ ಯಾಂತ್ರಿಕ ತನ ಕಂಡುಬಂದಿದೆ. ಇತ್ತೀಚಿಗಷ್ಟೇ ನವರಸ ನಾಯಕ ಜಗ್ಗೇಶ್ ಅವರು ರಂಗನಾಯಕ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಆಗಿದ್ದ ಸಂದರ್ಶನದಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡರು. ಹೌದು ಸ್ನೇಹಿತರೆ ರಂಗನಾಯಕ ಚಿತ್ರ ಮಠ ಕಾಂಬಿನೇಷನ್ ಗುರುಪ್ರಸಾದ್ ನಿರ್ದೇಶನ ಹಾಗೂ ನವರಸ ನಾಯಕ ಜಗ್ಗೇಶ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ಈ ಮಹಾಮಾರಿ ಹಾವಳಿಯಿಂದಾಗಿ ಕನ್ನಡ ಚಿತ್ರರಂಗ ಸ್ಥಗಿತಗೊಂಡಿರುವುದು ಕುರಿತಂತೆ ಬೇಸರವನ್ನು ವ್ಯಕ್ತಪಡಿಸಿದ್ದು ಈಗ ಮತ್ತೆ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಚೇತರಿಕೆ ಕಾಣುವ ಎಲ್ಲಾ ಸಾಧ್ಯ ಎಂಬುದಾಗಿ ಭರವಸೆ ಕೂಡ ಹೇಳಿದ್ದಾರೆ. ಇನ್ನು ಹಿಂದಿನ ಕಾಲದಲ್ಲಿ ಸ್ಟಾರ್ ನಟರು ಯಾವುದಾದರೂ ಚಿಕ್ಕಪುಟ್ಟ ಕಲಾವಿದರ ಹಾಗೂ ತಂತ್ರಜ್ಞರ ಸಂಭಾವನೆ ನಿರ್ಮಾಪಕ ಕೊಡಲಿಲ್ಲವೆಂದರೆ ನಿರ್ಮಾಪಕರಲ್ಲಿ ಅದನ್ನು ಕೊಡಿಸುವ ಕೆಲಸವನ್ನು ಕೂಡ ಮಾಡುತ್ತಿದ್ದರು. ಆದರೆ ಈಗಿನ ಚಿತ್ರರಂಗದಲ್ಲಿ ಅಷ್ಟು ಕಾಳಜಿ ವಹಿಸುವ ನಾಯಕನಟರು ಇಲ್ಲ ಎಂಬುದಾಗಿ ಕೂಡ ಹೇಳಿಕೊಂಡಿದ್ದಾರೆ.

ಇದೇ ವಿಚಾರವಾಗಿ ಅವರು ಕಷ್ಟಪಟ್ಟು ಚಿತ್ರರಂಗಕ್ಕೆ ಬಂದಂತಹ ಆರಂಭದ ದಿನಗಳಲ್ಲಿ ನಡೆದಂತಹ ಘಟನೆಯೊಂದನ್ನು ನೆನಪಿಸಿಕೊಂಡು ಸಂದರ್ಶನದಲ್ಲಿ ಎಲ್ಲರಮುಂದೆ ಹಂಚಿಕೊಂಡರು. ಹೌದು ಸ್ನೇಹಿತರೆ ಒಮ್ಮೆ ನವರಸನಾಯಕ ಜಗ್ಗೇಶ್ ರವರು ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಅವರ ಪತ್ನಿಯಲ್ಲಿ ಹಣವಿದೆಯಾ ಎಂದು ಕೇಳಿದರು. ಅದಕ್ಕೆ ಅವರ ಪತ್ನಿ ಹಣವಿಲ್ಲ ಎಂಬುದಾಗಿ ಹೇಳಿದ್ದಾರೆ. ಆಗ ನವರಸ ನಾಯಕ ಜಗ್ಗೇಶ್ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ರವರ ಬಳಿಗೆ ಹೋಗಿ 200 ರೂಪಾಯಿ ಸಾಲ ಕೇಳಿದ್ದಾರೆ. ಅದಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಕೇಳಿದ್ದ ₹200 ಬದಲಿಗೆ rs.500 ನೀಡಿದ್ದರು. ಇದರ ಮೂಲಕವೇ ತಿಳಿಯುತ್ತೆ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಎಂತಹ ವಿಶಾಲ ಹೃದಯ ಎಂಬುದು. ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.