ನಟಿ ನಿವೇದಿತಾ ಶಿವಣ್ಣ ಶಶಿಕುಮಾರ್ ರವರಂತಹ ಟಾಪ್ ನಟರೊಂದಿಗೆ ನಟಿಸಿ ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅದ್ಭುತ ಕಲಾವಿದರು ಅತೀ ಸಣ್ಣ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ’ಇವತ್ತಿಗೂ ಅವರಿದ್ದಿದ್ದರೆ ತಮ್ಮ ನಟನೆಯ ಮೂಲಕ ಸ್ಯಾಂಡಲ್ ವುಡ್ ನ್ನೇ ಆಳುತ್ತಿದ್ದರು’ ಎಂದು ಪ್ರತಿಯೊಬ್ಬ ಚಿತ್ರಪ್ರೇಮಿಯೂ ಮಾತನಾಡಿಕೊಳ್ಳುತ್ತಾನೆ. ಅಂಥವರಲ್ಲಿ, ನಟ ಸುನೀಲ್, ಶಂಕರ್ ನಾಗ್, ಮಂಜುಳಾ, ಕಲ್ಪನಾ ಹಾಗೆಯೇ ನಿವೇದಿತಾ ಜೈನ್ ಕೂಡ ಅಕಾಲಿಕ ಮರ’ಣವನ್ನು ಕಂಡವರೆ. ಅತ್ಯಂತ ಸುಂದರವಾಗಿದ್ದ ನಟಿ ನಿವೇದಿತಾ ಜೈನ್ ಸಾವು ಮಾತ್ರ ಚಿತ್ರರಂಗ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.

ನಿವೇದಿತಾ ಜೈನ್ ಅವರು ಬೆಂಗಳೂರಿನಲ್ಲಿ, ಜೂನ್ 9, 1979ರಲ್ಲಿ ಹುಟ್ಟಿದ್ದು. ತಮ್ಮ 18 ವರ್ಷ ವಯಸ್ಸಿನಲ್ಲಿಯೇ ಕೊನೆ’ಯುಸಿರೆಳೆದರು. ಇವರ ತಂದೆ ರಾಜೇಂದ್ರ ಜೈನ್ ಮತ್ತು ತಾಯಿ ಗೌರಿ ಪ್ರಿಯ. ನಿವೇದಿತಾ ಜೈನ್ 1996 ರಂದು ಶಿವರಂಜಿನಿ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಕನ್ನಡದ ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಿ, ತಮ್ಮ ಮುಗ್ಧ ಮುಖದಿಂದ ಜನ ಮನ ಗೆದ್ದಿದ್ದರು. ಅಮೃತವರ್ಷಿಣಿ, ಶಿವಸೈನ್ಯ, ಪ್ರೇಮ ರಾಗ ಹಾಡು ಗೆಳತಿ, ನೀ ಮುಡಿದ ಮಲ್ಲಿಗೆ, ಬಾಳಿದ ಮನೆ, ಬಾಳಿನ ದಾರಿ, ಸೂತ್ರಧಾರ ಹೀಗೆ ಅತ್ಯುತ್ತಮ ಚಿತ್ರಗಳನ್ನು ನೀಡಿದ್ದಾರೆ.

ಇನ್ನು ತೆಲಗು ಹಾಗೂ ತಮಿಳು ಚಿತ್ರಗಳಲ್ಲಿಯೂ ಕೂಡ ನಿವೇದಿತಾ ತಮ್ಮ ಅಭಿನಯವನ್ನು ಪ್ರದರ್ಶಿಸಿದ್ದಾರೆ. ಇಷ್ಟು ಅತ್ಯುತ್ತಮ ನಟಿಯನ್ನು ಚಿತ್ರರಂಗ ಕಳೆದುಕೊಂಡಿದ್ದು,1998ರಲ್ಲಿ. ತಮ್ಮ ಆರ್.ಆರ್.ನಗರದಲ್ಲಿರುವ ಅಪಾರ್ಟ್ ಮೆಂಟ್ ಒಂದರ ಎರಡನೇ ಮಹಡಿಯಿಂದ ಬಿದ್ದು ನಿವೇದಿತಾ ಜೈನ್ ಸಾವನ್ನಪ್ಪಿ’ದ್ದರು. ಆಸ್ಪತ್ರೆಯಲ್ಲಿ ಕೆಲವು ಕಾಲ ಕೋಮಾದಲ್ಲಿದ್ದು ನಂತರ ಜೂನ್ 10 1998ರಂದು ಕೊನೆಯುಸಿರೆಳೆದರು.

ನಿವೇದಿತಾ ಅವರ ಈ ಸಾವು ಇಂದಿಗೂ ನಿಗೂಢ. ಯಾಕೆಂದರೆ ಅವರು ಬಿದ್ದು ಸತ್ತಿದ್ದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಮಾತುಗಳಾನ್ನಾಡುತ್ತಾರೆ. ನಿವೇದಿತಾ ಮನೆಯವರು ಅವರು ಕ್ಯಾಟ್ ವಾಕ್ ಪ್ರಾಕ್ಟಿಸ್ ಮಾಡುವಾಗ ಕಾಲು ಜಾರಿ ಬಿ’ದ್ದಳು ಎಂದರೆ ಇನ್ನು ಕೆಲವರು ಸಿನಿಮಾ ಬೇಸತ್ತು ತಾವೇ ಕಹಿ ನಿರ್ಧಾರ ಮಾಡಿಕೊಂಡು ತಮ್ಮ ಕೈಯಾರೆ ತಾವೇ ಪ್ರಾ’ಣ ಕಳೆದುಕೊಂಡರು ಎಂದು ಹೇಳುತ್ತಾರೆ.

ನಿವೇದಿತಾ ಜೈನ್ ಮಿಸ್ ಇಂಡಿಯಾ ಸ್ಪರ್ಧೆಯ ತಯಾರಿಯನ್ನೂ ಮಾಡಿಕೊಂಡಿದ್ದರಂತೆ. ಇನ್ನು ನಿವೇದಿತಾ ಜೈನ್ ರವರ ನಿರ್ಧಾರ ವಲ್ಲ ಇದೊಂದು ಕೊ’ಲೆ ಎಂದು ಕೂಡ ಹೇಳುವವರಿದ್ದಾರೆ. ಅವರು ಸಾ’ಯುವ ವೇಳೆ ಲಕ್ಷ್ಸುರಿ ಕಾರೊಂದು ಅವರ ಮನೆಯ ಮುಂದೆ ಹಾದು ಹೋಗಿತ್ತಂತೆ. ಇದು ಮುಖ್ಯಮಂತ್ರಿಯೊಬ್ಬರಿಗೆ ಸಂಬಂಧಿಸಿದ ಕಾರು ಎಂದು ಹೇಳಲಾಗುತ್ತದೆ. ಈ ಬಗ್ಗೆ ವರದಿ ಮಾಡಲು ಹೋದ ಪತ್ರಕರ್ತರಿಗೆ ಬೆದರಿ’ಕೆ ಒಡ್ಡಿದ್ದರಂತೆ! ಒಟ್ಟಿನಲ್ಲಿ ನಿವೇದಿತಾ ಜೈನ್ ಸತ್ತಿ’ದ್ದು ಸಹಜ ಸಾ’ವೋ ಅಲ್ಲವೋ ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದುಹೋಗಿದೆ.