ಅರವಿಂದ್ ವಿಡಿಯೋ ಇದೆ, ಅಂದು ರಾತ್ರಿ ಬಿಗ್ ಬಾಸ್ ಗೆ ಕ್ವಾರಂಟೈನ್ ನಲ್ಲಿ ಇರುವಾಗ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 8 ಮುಗಿದ್ರೂ ಅದರ ಕಾವು ಮಾತ್ರ ಇನ್ನು ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣ ಪ್ರಶಾಂತ್ ಸಂಭರ್ಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಅವರ ನಡುವಿನ ವಾಗ್ವಾದ. ಬಿಗ್ ಬಾಸ್ ನಲ್ಲಿ ಟಾಪ್ 5 ನಲ್ಲಿದ್ದ ಬಹುತೇಕ ಎಲ್ಲರೂ ಮಾದ್ಯಮಗಳ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಟೈಟಲ್ ಗೆದ್ದ ಮಂಜು ಪಾವಗಡ ಜಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ನಂತರ ದೇವಸ್ಥಾನಗಳ ವಿಸಿಟ್ ಮಾಡಿದ್ರೆ, ದಿವ್ಯಾ ಸುರೇಶ್ ತಾವೇ ಗೆದ್ದಷ್ಟು ಸಂತೋಷದಿಂದ ಮಂಜು ಗೆಲುವನ್ನು ಮಾಧ್ಯಮಗಳ ಮುಂದೆ ಹೇಳಿಕೊಳ್ಳುತ್ತಿದ್ದಾರೆ. ಇನ್ನು ದಿವ್ಯಾ ಉರುಡುಗ ಕೂಡ ಮಾಧ್ಯಮಗಳಲ್ಲಿ ಅರವಿಂದ್ ಸೋತಿದ್ದಕ್ಕೆ ಬ್ಜಾರನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪ್ರಶಾಂತ್ ಹಾಗೂ ಚಕ್ರವರ್ತಿ ಒಬ್ಬರ ಮೇಲೆ ಒಬ್ಬರ ಕೆಸರೆರೆಚಾಟವನ್ನು ಮುಂದುವರಿಸಿದ್ದಾರೆ.

ಪ್ರಶಾಂತ್ ಸಂಭರ್ಗಿ ಬಿಗ್ ಬಾಸ್ ಮನೆಯಲ್ಲಿಯೇ ಕೂತು ದಿವ್ಯಾ ಉರುಡುಗ ಅವರ ಖಾಸಗಿ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದರು ಚಕ್ರವರ್ತಿ. ಆದರೆ ಈ ಮಾತನ್ನು ತಳ್ಳಿ ಹಾಕಿದ ಪ್ರಶಾಂತ್ ದಿವ್ಯಾ ಅವರ ಫೋಟೋವನ್ನು ಬಿಡುಗಡೆ ಮಾಡಿದವನೇ ದಿವ್ಯಾ ಅವರ ಅಮ್ಮನ ಬಳಿ ತಪ್ಪೊಪಿಕೊಂಡು ಕ್ಷಮೆ ಯಾಚಿಸಿದ್ದಾರೆ ಎಂದಿದ್ದಾರೆ.

ಈ ಎಲ್ಲದರ ನಡುವೆ ಚಕ್ರವರ್ತಿ ಇನ್ನೊಂದು ವಿಷಯವನ್ನು ಬಹಿರಂಗವಾಗಿ ಹೇಳಿದ್ದಾರೆ. ನಾವು ಬಿಗ್ ಬಾಸ್ 2 ಇನ್ನಿಂಗ್ಸ್ ಬರುವ ಮೊದಲು ನಮ್ಮನ್ನು ಕ್ವಾರಟೈನ್ ನಲ್ಲಿ ಇದಲಾಗಿತ್ತು. ಆಗ ಪ್ರಶಾಂತ್ ಬೇಕಾಗಿದ್ದೆಲ್ಲವನ್ನು ತರಿಸಿಕೊಂಡು ನಾನು ಹಾಗೂ ಅರವಿಂದ್ ಕೆ.ಪಿ ಜೊತೆಗಿದ್ದ ವಿಡಿಯೋವನ್ನು ತೆಗೆದಿದ್ದಾನೆ. ಇದು ಅರವಿಂದ್ ಗೆ ಗೊತ್ತಿರಲಿಲ್ಲ ನಾನೇ ನಂತರ ಹೇಳಿದ್ದೇನೆ. ಕಿಚ್ಚ ಸುದೀಪ್ ಅನುಮತಿ ಕೊಟ್ಟರೆ ಪ್ರಶಾಂತ್ ಬಗ್ಗೆ ಕಂಪ್ಲೆಂಟ್ ಕೊಡುತ್ತೇನೆ ಎಂದು ಹೇಳಿದ್ದಾರೆ ಚಕ್ರವರ್ತಿ. ಇವರಿಬ್ಬರ ಈ ಆರೋಪ-ಪ್ರತ್ಯಾರೋಪಗಳು ಯಾವ ಹಂತ ತಲುಪುತ್ತದೋ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಅರವಿಂದ ಕೆ. ಪಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಯಾಕೆ ಎಂಬುದು ಹಲವರ ಕುತೂಹಲ.