ವಿಡಿಯೋ: ಅಂದಿನಿಂದ ಇಂದಿನ ವರೆಗೂ ಟಾಪ್ ನಟಿಯಾಗಿರುವ ಜಯಪ್ರದ ರವರ ಮನೆಯನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೆ ಎಪ್ಪತ್ತು-ಎಂಬತ್ತು ಹಾಗೂ ತೊಂಬತ್ತರ ದಶಕದಲ್ಲಿ ಇಡೀ ಭಾರತೀಯ ಚಿತ್ರವನ್ನು ಆಳಿದ ನಟಿಯೆಂದರೆ ನಮಗೆ ನೆನಪಾಗುವುದು ಅದು ಖಂಡಿತವಾಗಿಯೂ ಜಯಪ್ರದಾರವರು. ಜಯಪ್ರದಾ ರವರು ಸಿನಿಮಾಗೆ ಆಯ್ಕೆಯಾಗಿದ್ದು ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅವರು ಡ್ಯಾನ್ಸ್ ಮಾಡುತ್ತಿದ್ದುದನ್ನು ನೋಡಿ ನಿರ್ದೇಶಕರು ಅವರಿಗೆ ಭೂಮಿಕೋಸಂ ಎಂಬ ತೆಲುಗು ಚಿತ್ರಕ್ಕೆ ಮೊದಲ ಅವಕಾಶ ನೀಡಿದ್ದರು.

ಅದಾದ ನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಕನ್ನಡ ತಮಿಳು ಹಿಂದಿ ತೆಲುಗು ಮಲಯಾಳಂ ಬಂಗಾಳಿ ಮರಾಠಿ ಹೀಗೆ ಹಲವಾರು ಭಾಷೆಗಳಲ್ಲಿ ನಾಯಕ ನಟಿಯಾಗಿ ನಟಿಸುತ್ತ ಅತ್ಯಂತ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡರು. ಕನ್ನಡದಲ್ಲಿ ಕೂಡ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಜಯಪ್ರದಾರವರ ಕನ್ನಡಿಗರ ಮನ ಗೆದ್ದವರು. ಇನ್ನು ಜಯಪ್ರದಾ ರವರು 3 ಸೌತ್ ಫಿಲಂ ಫೇರ್ ಅವಾರ್ಡ್ ಗಳನ್ನು ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಹಲವಾರು ಪ್ರಮುಖ ಅವಾರ್ಡ್ ಗಳನ್ನು ಕೂಡ ಇವರು ಗೆದ್ದುಕೊಂಡಿದ್ದಾರೆ. ಕೇವಲ ನಟಿಯಾಗಿ ಮಾತ್ರವಲ್ಲದೆ ರಾಜಕಾರಣದಲ್ಲಿ ಕೂಡ ಸಕ್ರಿಯರಾಗಿರುವವರು ಜನಸೇವೆಯಲ್ಲಿ ಕೂಡ ತೊಡಗಿಕೊಂಡಿದ್ದಾರೆ. ಇನ್ನು ಜಯಪ್ರದಾರವರ ವೈವಾಹಿಕ ಜೀವನದ ಬಗ್ಗೆ ಬರುವುದಾದರೆ ಇವರು ಶ್ರೀಕಾಂತ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ಶ್ರೀಕಾಂತ್ ಅವರಿಗೆ ಮೊದಲೇ ಮದುವೆಯಾಗಿದೆ ಎಂಬುದನ್ನು ತಿಳಿದ ಮೇಲೂ ಕೂಡ ಜಯಪ್ರದಾ ರವರು ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇನ್ನು ಜಯಪ್ರದಾ ಅವರು ಮುಂಬೈನಲ್ಲಿ ಮನೆಕಟ್ಟಿಕೊಂಡು ವಾಸವಾಗಿದ್ದಾರೆ. ಅವರ ಮನೆ ಹೇಗಿದೆ ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ಮುಂಬೈಯಲ್ಲಿ ಜಯಪ್ರದಾರವರ ಮನೆಯನ್ನು ಕಟ್ಟಿಕೊಂಡು ವಾಸವಾಗುತ್ತಿದ್ದು ಈ ಮನೆ ನೋಡಲು ಸಾಕಷ್ಟು ವೈಭವೋಪೇತವಾಗಿದ್ದು ಐಷಾರಾಮಿ ಸೌಕರ್ಯಗಳನ್ನು ಹೊಂದಿದೆ. ಮನೆಯಲ್ಲಿ ಸಕಾಲ ಅತ್ಯಾಧುನಿಕ ಸೌಕರ್ಯಗಳ ಉಪಕರಣಗಳನ್ನು ಅಳವಡಿಸಲಾಗಿದ್ದು ಯಾವುದೇ ಬಂಗಲೆಗೂ ಕಡಿಮೆ ಇಲ್ಲದಂತೆ ಸೌಂದರ್ಯ ಭರಿತವಾಗಿ ಮೂಡಿಬಂದಿದೆ. ಇನ್ನು ಜಯಪ್ರದಾರವರ ಈ ಬಂಗಲೆಯಂತಿರುವ ಮನೆಯನ್ನು ನೀವು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ.