ವಿಶ್ವೇಶ್ವರಯ್ಯನವರು ಕಟ್ಟಿದ ಈ ಡ್ಯಾಮ್ ನಲ್ಲಿ ಒಂದು ಕಲ್ಲು ತೆಗೆದ್ರೆ ಅಮೇರಿಕ ಕಥೆ ಏನಾಗುತ್ತೆ ಗೊತ್ತಾ??

47

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೆ ಅದೆಷ್ಟೋ ಜನರು ನೆಲೆಸಿ ಸಾಧನೆ ಮಾಡಿ ಇಂದಿನ ಜನರಿಗೆ ಸ್ಪೂರ್ತಿಯಾಗಿ ಅಳಿದು ಹೋಗಿದ್ದಾರೆ. ಆದರೆ ಇಂದಿಗೂ ಕೂಡ ನಮಗೆ ಸದಾ ನೆನಪಿರುವುದೆಂದರೆ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರು. ಹೌದು ಸ್ನೇಹಿತರೆ ಭಾರತ ಕಂಡಂತಹ ಅತ್ಯಂತ ನಿಪುಣ ಇಂಜಿನಿಯರಿಂಗ್ ಎಂದರೆ ತಪ್ಪಾಗಲಾರದು. ಕೆಆರ್ಎಸ್ ಡ್ಯಾಮ್ ಅಣೆಕಟ್ಟು ಅವರ ಅದ್ಭುತ ನಿರ್ಮಾಣಕ್ಕೆ ನಾವು ಕೊಡಬಹುದಾದಂತಹ ಜೀವಂತ ಉದಾಹರಣೆಯನ್ನಬಹುದು.

ಹೌದು ಸ್ನೇಹಿತರೆ ಸುದ್ದಿಗಳ ಪ್ರಕಾರ ಭಾರತದಲ್ಲಿರುವ ಹಲವಾರು ನೀರಾವರಿ ಕಾರ್ಯಗಳ ಇಲಾಖೆಯ ಮುಖ್ಯಸ್ಥರಾಗಿ ವಿಶ್ವೇಶ್ವರಯ್ಯನವರೇ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಭಾರತ ಕಂಡಂತಹ ಸಾರ್ವಕಾಲಿಕ ಶ್ರೇಷ್ಠ ಎಂಜಿನಿಯರ್ ಗಳಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವು ಕತೆಗಳ ಪ್ರಕಾರ ಅವರು ದೇಹಾಂತ್ಯವಾದ ಮೇಲೆ ಅವರ ಮೆದುಳನ್ನು ಪಡೆಯಲು ವಿದೇಶಿಗರು ಕೂಡ ಸಾಕಷ್ಟು ಹರಸಾಹಸ ಪಟ್ಟಿದ್ದರು ಎಂದು ಕೇಳಿ ಬರುತ್ತದೆ. ಅಷ್ಟೊಂದು ಮೇಧಾವಿ ಆಗಿದ್ದರು ನಮ್ಮ ಕನ್ನಡದ ಹೆಮ್ಮೆಯ ವಿಶ್ವೇಶ್ವರಯ್ಯನವರು. ಇನ್ನು ಇವರ ಬುದ್ಧಿವಂತಿಕೆಗೆ ಇನ್ನೊಂದು ಘಟನೆ ಇದೆ. ಹೌದು ಸ್ನೇಹಿತರೆ ಈ ಘಟನೆ ನಡೆದಿದ್ದು ಒಮ್ಮೆ ಅಮೆರಿಕನ್ನರು ಭಾರತಕ್ಕೆ ಬಂದಾಗ.

ಹೌದು ಸ್ನೇಹಿತರೆ ಒಂದಿಷ್ಟು ಜನ ಅಮೆರಿಕನ್ನರು ಭಾರತಕ್ಕೆ ಬಂದಾಗ ಸರ್ ಎಂ ವಿಶ್ವೇಶ್ವರಯ್ಯನವರು ಕಟ್ಟಿಸಿದ ಕೆಆರ್ಎಸ್ ಡ್ಯಾಮ್ ಅನ್ನು ನೋಡಿ ಸಾಕಷ್ಟು ಸಂತಸಪಟ್ಟು ಈ ರೀತಿಯ ಡ್ಯಾಮನ್ನು ನಮ್ಮ ದೇಶದಲ್ಲಿ ಕೂಡ ಕಟ್ಟಿಸಿ ಕೊಡಬೇಕು ಎಂದು ಹೇಳಿಕೊಳ್ಳುತ್ತಾರೆ. ಆಗ ಸರ್ ಎಂ ವಿಶ್ವೇಶ್ವರಯ್ಯನವರು ಡ್ಯಾಮ್ ಕಟ್ಟಿಕೊಡಲು ನನಗೆ ಏನು ಅಭ್ಯಂತರವಿಲ್ಲ ಆದರೆ ಡ್ಯಾಮ್ನ ಮೇಲೆ ನನ್ನ ದೇಶದ ಹೆಸರನ್ನು ಬರೆಯಬೇಕು ಎಂದಾಗ ಅಮೆರಿಕನ್ನರು ಮೊದಲು ಒಪ್ಪದಿದ್ದರು ನಂತರ ಒಪ್ಪಲೇಬೇಕಾಯಿತು. ನಂತರ ಡ್ಯಾಮ್ ಕಟ್ಟಿದ ಮೇಲೆ ಡ್ಯಾಮ್ನ ಗೋಡೆಯಲ್ಲಿ ವಿಶ್ವೇಶ್ವರಯ್ಯನವರು 5 ಇಟ್ಟಿಗೆಗಳಲ್ಲಿ ನಮ್ಮ ದೇಶದ ಹೆಸರು ಕಾಣುವಂತೆ ಬರೆದಿದ್ದರು. ಅವರು ಅದನ್ನು ಎಷ್ಟು ಬುದ್ದಿವಂತರಾಗಿ ಬರೆದಿದ್ದರು ಎಂದರೆ ನಮ್ಮ ದೇಶದ ಹೆಸರನ್ನು ಬರೆದಿದ್ದ ಇಟ್ಟೆಗೆಗಳನ್ನು ತೆಗೆದರೆ ಇಡೀ ಡ್ಯಾಮ್ ಕುಸಿದುಬೀಳುತ್ತದೆ ಎಂಬುದಾಗಿ ಅಮೆರಿಕನ್ನರಿಗೆ ಹೇಳಿದರು. ಇದು ಸರ್ ಎಂ ವಿಶ್ವೇಶ್ವರಯ್ಯನವರ ಬುದ್ಧಿವಂತಿಕೆಗೆ ನಾವು ಕೊಡಬಹುದಾದಂತಹ ಉದಾಹರಣೆ ಎಂದು ಹೇಳಬಹುದು. ಸ್ನೇಹಿತರೆ ಇದು ನಿಜವೋ ಸತ್ಯವೋ ಎಂಬುದು ನಮಗೆ ತಿಳಿದಿಲ್ಲವಾದರೂ ಕಥೆಗಳು ಸರ್ ಎಂ ವಿಶ್ವೇಶ್ವರಯ್ಯನವರ ಕುರಿತಂತೆ ಹರಡಿರುವುದು ಸತ್ಯ.

Get real time updates directly on you device, subscribe now.