ಸದ್ದಿಲ್ಲದೆ ರಿಜಿಸ್ಟರ್ ಆಫೀಸ್ ನಲ್ಲಿ ಮದುವೆಯಾಗಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಕಿರುತೆರೆಯ ಖ್ಯಾತ ನಟಿ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಲಾಕ್ಡೌನ್ ಸಂದರ್ಭದಲ್ಲಿ ಹಲವಾರು ನಟ-ನಟಿಯರು ಮದುವೆಯಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ಮೊದಲಿನಿಂದಲೇ ಗೊತ್ತು ಮಾಡಿಕೊಂಡಿದ್ದ ಮದುವೆಗಳು ಇನ್ನು ಕಾಯಲಾಗದು ಎಂದು ಲಾಕ್ ಡೌನ್ ಸಮಯದಲ್ಲೇ ಸರಳವಾಗಿ ಮಾಡಿದ್ದಾರೆ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಚಂದನ್ ಗೌಡ ಹಾಗೂ ಕವಿತಾ ಗೌಡ ಪ್ರಣಿತ ಸುಭಾಷ್ ಯಾಮಿ ಗೌತಮ್ ಹೀಗೆ ಹಲವಾರು ನಟ-ನಟಿಯರ ಸೆಲೆಬ್ರಿಟಿಗಳು ಲಾಕ್ಡೌನ್ ಸಂದರ್ಭದಲ್ಲೇ ಮದುವೆಯಾಗಿ ಬಿಟ್ಟಿದ್ದಾರೆ.

ಈಗ ನಾವು ಹೇಳಲು ಹೊರಟಿರುವುದು ಕೂಡ ಒಬ್ಬ ನಟಿಯೊಬ್ಬರ ಕುರಿತಂತೆ. ಹೌದು ಸ್ನೇಹಿತರೆ ಈ ನಟಿ ಸದ್ದಿಲ್ಲದೆ ಮದುವೆಯಾಗಿರುವುದು ಈಗಾಗಲೇ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದೆ. ಇವರು ಇನ್ಯಾರೂ ಅಲ್ಲ ಹರಹರಮಹದೇವ ದಾರವಾಹಿಯಲ್ಲಿ ಪಾರ್ವತಿ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ಅಂತಹ ನಟಿ ಪ್ರಿಯಾಂಕಾ ಚಿಂಚೋಳಿ. ಪಾರ್ವತಿ ಪಾತ್ರದಲ್ಲಿ ನಿಜವಾದ ದೇವತೆಯ ಧರೆಗಿಳಿದು ಬಂದಂತೆ ಕಾಣಿಸುತ್ತಿದ್ದ ಇವರು ಸಾಕಷ್ಟು ಜನರ ನೆಚ್ಚಿನ ನಟಿಯಾಗಿದ್ದರು. ಇನ್ನು ಕೇವಲ ಹರಹರಮಹದೇವ ಧಾರವಾಹಿಯಲ್ಲಿ ಮಾತ್ರವಲ್ಲದೆ ಮನಸಾರೆ ಹಾಗೂ ಮನಸೆಲ್ಲಾ ನೀನೆ ಎಂಬ ಧಾರವಾಹಿಗಳಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆ ವಾಹಿನಿ ವೀಕ್ಷಕರ ಮನ ಗೆದ್ದಿದ್ದರು.

ಇನ್ನು ಪ್ರಿಯಾಂಕ ಚಿಂಚೋಳಿ ಅವರು ಮದುವೆಯಾಗಿರುವುದು ಯಾರನ್ನು ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಪ್ರಿಯಂಕ ಚಿಂಚೋಳಿ ಅವರು ಮದುವೆಯಾಗಿರುವುದು ರಾಕೇಶ್ ಎಂಬುವವರನ್ನು. ರಾಕೇಶ್ ಅವರನ್ನು ಪ್ರಿಯಾಂಕಾ ಚಿಂಚೋಳಿ ಅವರು ಕಳೆದ ಒಂದು ವರ್ಷದಿಂದ ಪರಿಚಯವಾಗಿದ್ದರು. ರಾಕೇಶ್ ಅವರು ಅಮೆರಿಕದ ಬ್ಯಾಂಕೊಂದರಲ್ಲಿ ಉಪಾಧ್ಯಕ್ಷರಾಗಿದ್ದಾರೆ. ಇನ್ನು ಇದೇ ವರ್ಷದ ಪ್ರೇಮಿಗಳ ದಿನದಂದು ಇವರಿಬ್ಬರು ಎಂಗೇಜ್ಮೆಂಟ್ ಕೂಡ ಆಗಿದ್ದರು. ನಂತರ ಇತ್ತೀಚಿಗಷ್ಟೇ ರಿಜಿಸ್ಟರ್ ಆಫೀಸ್ ನಲ್ಲಿ ಹೋಗಿ ಇವರಿಬ್ಬರು ಸಹಿ ಮಾಡುವ ಮೂಲಕ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಇನ್ನು ಇವರಿಬ್ಬರ ಅದ್ದೂರಿ ಮದುವೆ ಸ್ನೇಹಿತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಇದೆ ಡಿಸೆಂಬರ್ ನಲ್ಲಿ ನಡೆಯುವ ಸಾಧ್ಯತೆಗಳಿವೆ. ಇನ್ನು ಇವರಿಬ್ಬರೂ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಶುಭಾಶಯವನ್ನು ಇಬ್ಬರಿಗೂ ಕೋರಿದ್ದಾರೆ.