ಮಹಾನ್ ನಟರ ನಡುವೆ ಹಾಗೂ ಪ್ರೇಮ್-ರಕ್ಷಿತಾ ಲವ್ ವಿಚಾರದಲ್ಲಿ ತಂದಿಟ್ಟ ಆ ನಿರ್ದೇಶಕ ಯಾರು ಗೊತ್ತಾ?? ತಂದಿತ್ತು ತಮಾಷೆ ನೋಡಿದ್ದು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟ-ನಟಿಯರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಅದರಲ್ಲಿ ಇಂದಿಗೂ ಕೂಡ ಎವರ್ಗ್ರೀನ್ ಜೋಡಿಗಳು ಎಂದು ಅನಿಸಿಕೊಂಡಿರುವ ಪ್ರೇಮ್ ಹಾಗೂ ರಕ್ಷಿತ. ಒಬ್ಬರು ನಿರ್ದೇಶಕರಾಗಿ ಇನ್ನೊಬ್ಬರು ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ತಮ್ಮ ಹೆಸರನ್ನು ಗಳಿಸಿಕೊಂಡಿದ್ದಾರೆ.

ಆದರೆ ಇವರ ಮದುವೆ ಹಿಂದೆ ಹಲವಾರು ಕಥೆಗಳು ನಡೆದಿವೆ. ಹೌದು ಸ್ನೇಹಿತರೆ ಪ್ರೇಮ್ ರವರು ಕನ್ನಡ ಚಿತ್ರರಂಗದಲ್ಲಿ ಜೋಗಿ ಮೆಜೆಸ್ಟಿಕ್ ಹೀಗೆ ಹಲವಾರು ಚಿತ್ರಗಳನ್ನು ನೀಡಿದ ನಿರ್ದೇಶಕ. ಕನ್ನಡ ಚಿತ್ರರಂಗದ ಶೋಮ್ಯಾನ್ ಎಂದೇ ಖ್ಯಾತರಾಗಿರುವ ನಿರ್ದೇಶಕ ಎಂದರೆ ಅದು ಖಂಡಿತವಾಗಿಯೂ ಪ್ರೇಮ್. ಪ್ರೇಮ್ ರವರು ಹಳ್ಳಿಯಿಂದ ಬಂದಂತಹ ಮುಗ್ಧ ಮನಸ್ಸಿನ ಹುಡುಗ ಕನ್ನಡ ಚಿತ್ರರಂಗದಲ್ಲಿ ತನ್ನ ಪ್ರತಿಭೆ ಮೂಲಕ ಸ್ಟಾರ್ ನಿರ್ದೇಶಕರಾಗಿ ಹ್ಯಾಟ್ರಿಕ್ ನಿರ್ದೇಶಕನಾಗಿ ಮಿಂಚಿನಂತಹ ಪ್ರತಿಭೆ. ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಇವರ ಚಿತ್ರಗಳು ಬಿಡುಗಡೆಯಾಗುತ್ತವೆ ಎಂದರೆ ಬೇರೆ ಲೆವೆಲ್ ಕ್ರೇಜ್ ಖಂಡಿತ ಇರುತ್ತದೆ. ಇನ್ನು ಪ್ರೇಮ್ ಹಾಗೂ ರಕ್ಷಿತಾ ಪ್ರೀತಿ ನಡುವೆ ಒಮ್ಮೆ ಯಾವುದೋ ಒಬ್ಬ ನಿರ್ದೇಶಕ ಬಂದಿದ್ದನಂತೆ.

ಹೌದು ಸ್ನೇಹಿತರೆ ಬರಹಗಾರ ಹಾಗೂ ನಿರ್ದೇಶಕ ಪ್ರೇಮ್ ಅವರ ಆಪ್ತ ಮಳವಳ್ಳಿ ಸಾಯಿಕೃಷ್ಣ ರವರು ಹೇಳುವಂತೆ ಒಬ್ಬ ನಿರ್ದೇಶಕ ಪ್ರೇಮ್ ಹಾಗೂ ರಕ್ಷಿತಾ ರವರ ಲವ್ ಸ್ಟೋರಿಯನ್ನು ಎಲ್ಲೆಂದರಲ್ಲಿ ಹೇಳಿಕೊಂಡು ತಿರುಗುತ್ತಿದ್ದ ನಂತೆ. ಮಾತ್ರವಲ್ಲದೆ ಇಬ್ಬರು ಕನ್ನಡ ನಟರ ನಡುವೆ ತಂದಿಟ್ಟಿದ್ದನಂತೆ. ಇಂದಿಗೂ ಕೂಡ ಮಳವಳ್ಳಿ ಸಾಯಿಕೃಷ್ಣ ರವರು ನಿರ್ದೇಶಕ ಯಾರು ಎಂಬುದನ್ನು ಹೇಳುತ್ತಿಲ್ಲ. ಇದಿಷ್ಟೇ ಮಾತ್ರವಲ್ಲದೆ ಮಳವಳ್ಳಿ ಸಾಯಿಕೃಷ್ಣ ರವರ ಕೆಲಸಗಳನ್ನು ಕೂಡ ಆತ ಕಿತ್ತುಕೊಂಡಿದ್ದಾನೆ ಅಂತೆ. ಈಗಲೂ ಕೂಡ ಆ ನಿರ್ದೇಶಕ ಕನ್ನಡ ಚಿತ್ರರಂಗಗಳಲ್ಲಿ ಸಕ್ರಿಯರಾಗಿದ್ದಾರೆ ಅಂತೆ. ಆ ನಿರ್ದೇಶಕ ಯಾರಿರಬಹುದು ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಹಂಚಿಕೊಳ್ಳಿ.