ಟಾಪ್ ಕಿರುತೆರೆ ನಟಿಗೆ ಒಲಿದು ಬಂದ ಅದೃಷ್ಟ, ಜಗ್ಗೇಶ್ ಸಿನೆಮಾಗೆ ಆಯ್ಕೆಯಾಗಿರುವ ನಾಯಕಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಜಗ್ಗೇಶ್ ನಟನೆಯ ‘ರಂಗನಾಯಕ’ ಚಿತ್ರ ಚಿತ್ರೀಕರಣವನ್ನು ಆರಂಭಿಸಿದೆ. ನಟ ಜಗ್ಗೇಶ್ ಅಭಿನಯದ ‘ಮಠ’ ಸಿನಿಮಾವನ್ನು ನಿರ್ದೇಶಿಸಿದ ಗುರುಪ್ರಸಾದ್ ಮತ್ತೆ ಜಗ್ಗೇಶ್ ಅವರೊಂದಿಗೆ ರಂಗನಾಯಕ ನಿರ್ದೇಶಿಸುತ್ತಿದ್ದಾರೆ. ರಂಗನಾಯಕ ಚಿತ್ರಕ್ಕೆ ಜಗ್ಗೇಶ್ ಅವರಿಗೆ ಜೋಡಿಯಾಗಿ ಯಾರು ನಟಿಸುತ್ತಾರೆ ಎಂಬ ಚರ್ಚೆ ನಡೆಯುತ್ತಲೇ ಇತ್ತು. ಇದೀಗ ನಟಿ ಯರೆಂಬುದನ್ನು ರಿವೀಲ್ ಮಾಡಿದೆ ಚಿತ್ರತಂಡ. ರಂಗನಾಯಕ ಸಿನಿಮಾದ ಫಸ್ಟ್ ಲುಕ್ ಹಾಗೂ ಟೀಸರ್ ಈ ಮೊದಲೇ ಬಿಡುಗಡೆಯಾಗಿತ್ತು. ಇದೀಗ ಚಿತ್ರದ ಮುಂದಿನ ಭಾಗ ನಿರ್ಮಾಣವಾಗುತ್ತಿದೆ.

ಅಂದಹಾಗೆ ರಂಗನಾಯಕನಿಗೆ ಜೋಡಿ ಯಾಗ್ತಇರೋದು ರಚಿತಾ ಮಹಾಲಕ್ಷ್ಮಿ. ಕನ್ನಡದವರೆ ಆದರೂ ಈ ನಟಿ ವೃತ್ತಿ ಮಾಡುತ್ತಿರುವುದು ಮಾತ್ರ ತಮಿಳು ನೆಲದಲ್ಲೇ. ರಚಿತಾ ಉತ್ತಮ ನಟನಾ ಸಾಮರ್ಥ್ಯ ಹೊಂದಿದ್ದು ತಮಿಳು ಕಿರುತೆರೆಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ತೆಲುಗು, ಮಲಯಾಳಂ, ಹಿಂದಿ ಭಾಷೆಗಳನ್ನೂ ಬಲ್ಲವರು ಈಕೆ. ರಚಿತಾ 2012ರಲ್ಲಿ ಕನ್ನಡದಲ್ಲಿ ತೆರೆಕಂಡ, ದಿಗಂತ್ ಹಾಗೂ ಅಂದ್ರಿತಾ ರೇ ನಟಿಸಿದ್ದ ‘ಪಾರಿಜಾತ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ 9 ವರ್ಷದ ಬಳಿಕ ಮತ್ತೆ ಚಂದನವನಕ್ಕೆ ಕಾಲಿಟ್ಟಿದ್ದಾರೆ ರಚಿತಾ ಮಹಾಲಕ್ಷ್ಮಿ.

ತಮಿಳಿನ ‘ಸರವಣನ್ ಮೀನಾಕ್ಷಿ’ ಎಂಬ ಹಿಟ್ ಧಾರಾವಾಹಿ ರಚಿತಾ ಅವರಿಗೆ ಒಳ್ಳೆಯ ಬ್ರೇಕ್ ಕೊಟ್ಟಿತ್ತು. ಕನ್ನಡದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗೀತಾಂಜಲಿ’ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ ರಚಿತಾ. ಮೂಲತಃ ಬೆಂಗಳೂರಿನವರಾದ ರಚಿತಾ ತಮಿಳಿನ ‘ಉಪ್ಪು ಕರುವಾಡು’ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಇದೀಗ ರಂಗನಾಯಕ ದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ರಚಿತಾಅವರದ್ದು. ಜಗ್ಗೇಶ್, ರಚಿತಾ ಹಾಗೂ ಇನ್ನಿತರರು ಚಿತ್ರೀಕರಣದಲ್ಲಿರುವ ಫೋಟೋ ಸೋಶಿಯಲ್ ಮಿಡಿಯಾಗಳಲ್ಲಿ ಕಾಣಬಹುದು. ಇನ್ನು ರಂಗನಾಯಕ ವಿಖ್ಯಾತ ಪ್ರೊಡಕ್ಷನ್ ನಿರ್ಮಾಣವಾಗಿದೆ. ಜೊತೆಗೆ ಅನುವ್ ಸೀಳಿನ್ ಅವರ ಸಂಗೀತ ಈ ಚಿತ್ರಕ್ಕಿದೆ. ಇನ್ನು ಈ ಚಿತ್ರ ತೆರೆ ಕಾಣುವುದನ್ನು ಸಿನಿ ಪ್ರಿಯರು ನಿರೀಕ್ಷಿಸುತ್ತಿದ್ದಾರೆ.