ಬಿಗ್ ಬಾಸ್ ಕುರಿತು ಪ್ರಶ್ನೆ ಮಾಡಿದಕ್ಕೆ ಕನ್ನಡಿಗರ ಕುರಿತು ಪರಮೇಶ್ವರ್ ಗುಂಡ್ಕಲ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಭಾಷೆಯ ಮನೋರಂಜನೆಯ ವಿಷಯಕ್ಕೆ ಬಂದ್ರೆ ಬಿಗ್ ಬಾಸ್ ಶೋ ಟಾಪ್ ಎನಿಸಿಕೊಳ್ಳುತ್ತೇ. ಇತ್ತೀಚಿಗೆ ಬಿಗ್ ಬಾಸ್ ಸೀಸನ್ 8 ಕೂಡ ಮುಕ್ತಾಯವಾಗಿದೆ. ಹಾಗೆಯೇ ಬಿಗ್ ಬಾಸ್ ಮನೆಯನ್ನು ಖಾಲಿ ಬಿಡದೆ ಸೀರಿಯಲ್ ನಟ ನಟಿಯರನ್ನ ಬಿಗ್ ಬಾಸ್ ಮನೆಗೆ ಕಳುಹಿಸಿ ಮಿನಿ ಸೀಸನ್ ಕೂಡ ಶುರು ಮಾಡಲಾಗಿದೆ. ಜೊತೆಗೆ ಬಿಗ್ ಬಾಸ್ 9 ಸೀಸನ್ ರೆಡಿ ಆಗ್ತಾ ಇದೆ ಅನ್ನೋ ಮಾತುಗಳೂ ಕೂಡ ಕೇಳಿ ಬರ್ತಿದೆ. ಆದ್ರೆ ಈ ಎಲ್ಲದರ ನಡುವೆ ಬಿಗ್ ಬಾಸ್ ಶೋ ನಡಿಸ್ತಾ ಇರೋ ಪರಮೇಶ್ವರ್ ಗುಂಡ್ಕಲ್ ನೀಡಿರೋ ಹೇಳಿಕೆ ಮಾತ್ರ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಪರಮೇಶ್ವರ್ ಗುಂಡ್ಕಲ್ ಅವರು ಈಗಾಗಲೇ ಬಿಗ್ ಬಾಸ್ ನ 8 ಶೋಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಶೋ ಬಗ್ಗೆ ಇದರಲ್ಲಿನ ಸ್ಪರ್ಧಿಗಳು, ಎಲಿಮಿನೇಷನ್ ಗಳು ನಮಿನೇಷನ್ ಗಳು ಹಾಗೂ ವಿನ್ನರ್ ಬಗ್ಗೆ ಸಾಕಷ್ಟು ಜನ ಸಾಕಷ್ಟು ಮಾತನಾಡಿದ್ದಾರೆ. ಎಷ್ಟೋ ಬಾರಿ ಗುಂಡ್ಕಲ್ ಅವರು ನೇರವಾಗಿ ಜನರ ಟೀಕೆಗೆ ಗುರಿಯಾಗಿದ್ದಾರೆ. ಆದರೆ ಈ ಬಾರಿ ಅದ್ಯಾಕೋ ಗೊತ್ತಿಲ್ಲ ಗುಂಡ್ಕಲ್ ಜನರ ಈ ಮಾತುಗಳಿಗೆ ಸಿಟ್ಟಿನಿಂದ ಉತ್ತರ ನೀಡಿದಂತಿದೆ. ನಾನು ಇಷ್ಟು ಸೀಸನ್ ನಡೆಸಿದ್ದೇನೆ ಎಲ್ಲದರಲ್ಲೂ ಒಂದಿಲ್ಲೊಂದು ಮಾತುಗಳನ್ನ ಕೇಳಿಸಿಕೊಂಡಿದ್ದೇನೆ. ಪ್ರತಿ ಬಾರಿಯೂ ಇಂಥವರು ಗೆಲ್ಲಬೇಕು ಎನ್ನುವುದು ಅವರವರ ಅಭಿಪ್ರಾಯ ವಾಗಿರುತ್ತದೆ. ಅದಕ್ಕಾಗಿ ಜನ ಮಾತನಾಡುತ್ತಾರೆ. ನಿಮಗೆ ಬಿಗ್ ಬಾಸ್ ಇಷ್ಟವಾಗದಿದ್ದರೆ ಶೋ ನೋಡಬೇಡಿ ಎಂದಿದ್ದಾರೆ.

ಖಾಸಗಿ ವಾಹಿನಿ ಒಂದರಲ್ಲಿ ಸಂದರ್ಶನ ನೀಡಿದ ಪರಮೇಶ್ವರ್ ಗುಂಡ್ಕಲ್, ಇದು ನನ್ನ ಶೋ ನಿಮಗೆ ಇಷ್ಟವಾಗದಿದ್ದರೆ ಕನ್ನಡಿಗರು ಈ ಶೋ ನೋಡುವ ಅಗತ್ಯವಿಲ್ಲ ಎಂದಿದ್ದಾರೆ. ಗುಂಡ್ಕಲ್ ಅವರ ಈ ಹೇಳಿಕೆ ತುಂಬಾನೇ ಕಾಂಟ್ರವರ್ಸಿ ಯಾಗಿರುವುದಂತೂ ಸುಳ್ಳಲ್ಲ. ಸೀಸನ್ 8 ರ ಟಾಪ್ 5ನಲ್ಲಿದ್ದ ಸ್ಪರ್ಧಿಗಳಲ್ಲಿ ಅರವಿಂದ ಕೆ ಪಿ ಗೆಲ್ಲಬೇಕಿತ್ತು, ವೈಷ್ಣವಿ ಟಾಪ್ 3 ಯಲ್ಲಿ ಬರಬೇಕಿತ್ತು ಹಾಗೆಯೇ ವೋಟ್ ಸಂಖ್ಯೆಯನ್ನಷ್ಟೇ ರಿವಿಲ್ ಮಾಡಿದ್ದಾರೆ ಆದರೆ ವೂಟ್ ನಲ್ಲಿ ಅಂಕಿ ಅಂಶಗಳನ್ನು ಹಾಕಬೇಕಿತ್ತು ಎಂದು ಬಿಗ್ ಬಾಸ್ ವೀಕ್ಷಕರು ಪರಮೇಶ್ವರ್ ಅವರನ್ನು ನೇರವಾಗಿ ತರಾಟೆಗೆ ತೆಗೆದು ಕೊಂಡಿದ್ದರು. ಇದಕ್ಕೆಲ್ಲ ಈಗ ಪ್ರತಿಕ್ರಿಯಿಸಿದ ಪರಮೇಶ್ವರ್, ಸಿಟ್ಟಿನಿಂದಲೇ ಉತ್ತರಿಸಿದಂತೆ ಕಾಣಿಸುತ್ತಿದೆ.

ಒಂದು ಶೋ ನಡೆಸುವುದು ವಾಹಿನಿ ಹಾಗೂ ಅದರ ಮುಖ್ಯಸ್ಥರಾದರೂ ಕೂಡ ಅದನ್ನು ನೋಡಿ ಹರಸುವುದು ವೀಕ್ಷಕರು. ಇನ್ನು ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಶೋವನ್ನು ಕನ್ನಡಿಗರೇ ನೋಡುವುದು. ಇದನ್ನು ಗುಂಡ್ಕಲ್ ಎಲ್ಲೋ ಮರೆತಂತಿದೆ. ಇನ್ನು ಇಷ್ಟು ವರ್ಷ ಜನರ ಭಿನ್ನಾಭಿಪ್ರಾಯಗಳಿಗೆ ಸ್ಪಂದಿಸದ ಪರಮೇಶ್ವರ್ ಇದೀಗ ಹೀಗೆ ಪ್ರತಿಕ್ರಿಯೆ ನೀಡಿದ್ದು ಸರಿಯಲ್ಲ ಎಂಬುದು ಜನರ ಅಭಿಪ್ರಾಯ. ಇನ್ನು ಬಿಗ್ ಬಾಸ್ ವೀಕ್ಷಕರನ್ನು ಪರಮೇಶ್ವರ್ ಗುಂಡ್ಕಲ್ ಹೇಗೆ ಎದುರಿಸುತ್ತಾರೆ ಎಂಬುದೇ ಮುಂದಿರುವ ಪ್ರಶ್ನೆ.