ಅತ್ಯದ್ಭುತ ಟ್ಯಾಲೆಂಟ್ ಇದ್ದರೂ ಕೂಡ ಸಾಕಷ್ಟು ಕಷ್ಟ ಪಟ್ಟು ಮಾಸ್ಟರ್ ಆನಂದ್ ರವರು ಕಟ್ಟಿರುವ ಮನೆ ಹೇಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ಹಲವಾರು ಮಂದಿ ನಟರು ಅಂದಿನ ಕಾಲದಲ್ಲಿ ನಟಿಸಿದ್ದು ಆದರೆ ಇಂದಿನ ಕಾಲದಲ್ಲಿ ಅವಕಾಶವಿಲ್ಲದ ಅವರು ಚಿತ್ರರಂಗದ ಮುನ್ನೆಲೆಗೆ ಬರಲು ವಿಫಲರಾಗಿದ್ದಾರೆ. ಆದರೆ ನಾವು ಇಂದು ಹೇಳಲು ಹೊರಟಿರುವ ವ್ಯಕ್ತಿ ಚಿತ್ರಗಳ ಮೂಲಕ ಯಶಸ್ವಿಯಾಗಲು ವಿಫಲರಾದರೂ ಕೂಡ ರಿಯಾಲಿಟಿ ಶೋಗಳ ನಿರೂಪಕನಾಗಿ ನಿರೀಕ್ಷೆಗಿಂತಲೂ ಹೆಚ್ಚಿನ ಯಶಸ್ಸನ್ನು ಪಡೆದವರು.

ಹೌದು ಸ್ನೇಹಿತರ ನಾವು ಮಾತನಾಡಲು ಹೊರಟಿರುವುದು ಮಾಸ್ಟರ್ ಆನಂದ್ ರವರ ಕುರಿತಂತೆ. ಇನ್ನು ಮಾಸ್ಟರ್ ಆನಂದ್ ರವರು ಅನಂತನಾಗ್ ನಾಯಕ ನಟನಾಗಿ ನಟಿಸಿರುವ ಗೌರಿ-ಗಣೇಶ ಚಿತ್ರದ ಮೂಲಕ ಬಾಲನಟನಾಗಿ ಸಾಕಷ್ಟು ಪ್ರಖ್ಯಾತಿಯನ್ನು ಪಡೆದಿದ್ದಾರೆ. ರವಿಚಂದ್ರನ್ ನಟನೆಯ ಕಿಂದರಿ ಜೋಗಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಾಲನಟನಾಗಿ ಪಾದರ್ಪಣೆ ಮಾಡಿದ ಮಾಸ್ಟರ್ ಆನಂದ್ ರವರು, ನಂತರ 2002 ರಲ್ಲಿ ಬಿಡುಗಡೆಯಾದಂತಹ ಫ್ರೆಂಡ್ಸ್ ಚಿತ್ರದ ಮೂಲಕ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. ಹಲವಾರು ಚಿತ್ರಗಳಲ್ಲಿ ನಟಿಸಿದರು ಕೂಡ ಅವರಿಗೆ ಅಷ್ಟೊಂದು ಯಶಸ್ಸು ಸಿಗಲಿಲ್ಲ.

ಅವರಿಗೆ ಯಶಸ್ಸು ಸಿಕ್ಕಿದ್ದು ಕಿರುತೆರೆಯ ವಾಹಿನಿಯಲ್ಲಿ. ಹೌದು ಸ್ನೇಹಿತರೆ ಡ್ಯಾನ್ಸಿಂಗ್ ಸ್ಟಾರ್ ಡ್ರಾಮಾ ಜೂನಿಯರ್ಸ್ ಕಾಮಿಡಿ ಕಿಲಾಡಿಗಳು ಬಿಗ್ ಬಾಸ್ ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಸ್ಪರ್ಧಿಯಾಗಿ ನಿರೂಪಕರಾಗಿ ಮತ್ತೊಮ್ಮೆ ಮಾಸ್ಟರ್ ಆನಂದ್ ರವರು ಜನಪ್ರಿಯರಾದರು. ಇನ್ನು ಮಾಸ್ಟರ್ ಆನಂದ್ ರವರು ಯಶಸ್ವಿನಿ ಎಂಬುವರನ್ನು 2010 ರಲ್ಲಿ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ಇವರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ. ಇನ್ನು ತಾವು ದುಡಿದಂತಹ ಹಣದಲ್ಲಿ ಬೆಂಗಳೂರಿನಲ್ಲಿ ಒಂದು ಸುಂದರವಾದ ಮನೆಯನ್ನು ಕಟ್ಟಿದ್ದು ಇದು ಸುಂದರವಾಗಿ ಮೂಡಿಬಂದಿದೆ. ಮಾಸ್ಟರ್ ಆನಂದ್ ರವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಒಳಗೊಂಡ ಸುಂದರ ಕುಟುಂಬದೊಂದಿಗೆ ಈ ಸುಂದರವಾದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನು ಮಾಸ್ಟರ್ ಆನಂದ್ ಅವರ ಮನೆಯನ್ನು ನೀವು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ.