ಅಸಲಿಗೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ರವರ ಪತ್ನಿ ಯಾರು ಗೊತ್ತೇ? ಹೇಗಿದೆ ನೋಡಿ ಕ್ಯೂಟ್ ಕುಟುಂಬ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಒಂದು ಚಿತ್ರಕ್ಕೆ ನಾಯಕನಟ ಹಾಗೂ ನಟಿ ನಿರ್ಮಾಪಕ-ನಿರ್ದೇಶಕರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸಾಹಸ ಸಂಯೋಜಕರು. ಹೌದು ಸ್ನೇಹಿತರೆ ಸಾಹಸ ನಿರ್ದೇಶಕರು ಚಿತ್ರಗಳಲ್ಲಿನ ಸಾಹಸ ದೃಶ್ಯಗಳನ್ನು ಸೊಗಸಾಗಿ ನಿರ್ದೇಶಿಸಿ ಪ್ರೇಕ್ಷಕರು ಇಷ್ಟ ಪಡುವಂತೆ ಮಾಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಸಾಹಸ ನಿರ್ದೇಶಕರಾಗಿ ಹಲವಾರು ದಶಕಗಳಿಂದ ಜನಪ್ರಿಯರಾಗಿರುವವರು ಥ್ರಿಲ್ಲರ್ರ್ ಮಂಜು. ಹೌದು ಸ್ನೇಹಿತರೆ ಕೇವಲ ಸಾಹಸ ನಿರ್ದೇಶಕರಾಗಿ ಮಾತ್ರವಲ್ಲದೆ ಮುಖ್ಯ ನಿರ್ದೇಶಕರಾಗಿಯೂ ಕೂಡ ಇವರು ಕಾರ್ಯನಿರ್ವಹಿಸಿದ್ದಾರೆ.

ಪರಭಾಷಾ ಸಾಹಸ ನಿರ್ದೇಶಕರ ಪಿಡುಗನ್ನು ದೂರಮಾಡಿದ್ದೇ ನಮ್ಮ ಜನಪ್ರಿಯ ಸಾಹಸ ನಿರ್ದೇಶಕರಾದ ಅಂತಹ ಥ್ರಿಲ್ಲರ್ ಮಂಜುರವರು. ಇವರು ಬಾಲ್ಯದಿಂದಲೂ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ರವರ ಅಭಿಮಾನಿಯಾಗಿದ್ದರು. ರಾಜಕುಮಾರ್ ರವರಂತೆ ಹಾಗೂ ಬ್ರೂಸ್ಲಿ ಅವರಂತೆ ಸಾಹಸಪಟ್ಟು ಗಳನ್ನು ಬಾಲ್ಯದಿಂದಲೇ ಕಲಿಯಲು ಆರಂಭಿಸಿದರು. ತವರುಮನೆ ಎಂಬ ಚಿತ್ರದ ಮೂಲಕ ಸಾಹಸ ಕಲಾವಿದನಾಗಿ ತಮ್ಮ ಸಿನಿಮಾ ಜರ್ನಿ ಯನ್ನು ಪ್ರಾರಂಭಿಸುತ್ತಾರೆ. ಅದಾದ ನಂತರ ಹಲವಾರು ಚಿತ್ರಗಳಲ್ಲಿ ಸಾಹಸ ಕಲಾವಿದನಾಗಿ ನಟಿಸುತ್ತಾರೆ. ಪೊಲೀಸ್ ಸ್ಟೋರಿ ಚಿತ್ರದ ಮೂಲಕ ನಿರ್ದೇಶಕನಾಗಿ ಕೂಡ ಪಾದಾರ್ಪಣೆ ಮಾಡುತ್ತಾರೆ.

ತಮ್ಮ ವೃತ್ತಿಜೀವನದಲ್ಲಿ ಥ್ರಿಲ್ಲರ್ ಮಂಜು ರವರು 550 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಸಾಹಸ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಇವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ, ಥ್ರಿಲ್ಲರ್ ಮಂಜುರವರು ಗೀತಾ ಎಂಬುವರನ್ನು ವಿವಾಹವಾಗಿದ್ದಾರೆ. ಇನ್ನು ಇವರಿಬ್ಬರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಮೊದಲ ಪುತ್ರಿಯ ಹೆಸರು ರಕ್ಷಿತಾ ಹಾಗೂ ಎರಡನೇ ಪುತ್ರಿ ಹೆಸರು ರಜತಾ. ಇವರ ಸುಂದರವಾದ ಕುಟುಂಬದ ಫೋಟೋವನ್ನು ಈ ಕೆಳಗಡೆ ನೀವು ನೋಡಬಹುದಾಗಿದೆ. ಕನ್ನಡ ಚಿತ್ರರಂಗದಲ್ಲಿ ಇನ್ನೂ ಕೂಡ ಥ್ರಿಲ್ಲರ್ರ್ ಮಂಜುರವರು ಸಕ್ರಿಯರಾಗಿದ್ದಾರೆ