ಯಾವುದೇ ಹೀರೊಯಿನ್ ಗಿಂತ ಕಡಿಮೆ ಇಲ್ಲದೇ, ಯಂಗ್ ಆಗಿ ಕಾಣಿಸುವ ಹರಿಣಿ ರವರ ಕುಟುಂಬ ಹೇಗಿದೆ ಗೊತ್ತೇ?? ಮುದ್ದಾದ ವಿಡಿಯೋ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕನ್ನಡ ಕಿರುತೆರೆ ನಟಿಯರು ಕೂಡ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆದ್ದವರಾಗಿದ್ದಾರೆ. ಅದರಲ್ಲೂ ಇಂದಿಗೂ ಪೋಷಕ ನಟಿಯ ಪಾತ್ರವನ್ನು ವಹಿಸಿದರು ಕೂಡ ಯಾವ ನಟಿಗೂ ಕಮ್ಮಿ ಇಲ್ಲದಂತೆ ಕಾಣಿಸಿಕೊಳ್ಳುವವರು ಇದ್ದಾರೆ. ಹೌದು ಸರಿ ನಾವು ಮಾತನಾಡಲು ಹೊರಟಿರುವುದು ಕಿರುತೆರೆಯ ಖ್ಯಾತ ನಟಿ ಹರಿಣಿಯವರ ಬಗ್ಗೆ. ಹರಿಣಿ ಅವರು ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಥುನ ರಾಶಿ ಧಾರವಾಹಿ ಮೂಲಕ ಕನ್ನಡ ಪ್ರೇಕ್ಷಕರ ಮನವನು ಗೆದ್ದಿದ್ದಾರೆ.

ಧಾರವಾಹಿಯಲ್ಲಿ ನಾಯಕನಟನ ತಾಯಿಯ ಪಾತ್ರವನ್ನು ನಿರ್ವಹಿಸಿದರು ನಿಜಜೀವನದಲ್ಲಿ ನೋಡಲು ಚಿರ ಯುವತಿಯಂತೆ ಕಾಣುತ್ತಾರೆ. ಹಲವಾರು ಧಾರಾವಾಹಿಗಳಲ್ಲಿ ಮಾತ್ರವಲ್ಲದೆ ಚಿತ್ರಗಳಲ್ಲಿ ಕೂಡ ಪೋಷಕರ ಪಾತ್ರ ವನ್ನು ಮಾಡಿರುವಂತಹ ಪ್ರತಿಭಾವಂತ ನಟಿಯಾಗಿದ್ದಾರೆ. ಇನ್ನು ಇವರು ಕೇವಲ ನಟಿ ಮಾತ್ರವಲ್ಲದೆ ಭರತನಾಟ್ಯ ಮತ್ತು ಹಾಡುವುದರಲ್ಲೂ ಕೂಡ ಪ್ರವೀಣರು. ಕೊಟ್ಟಂತಹ ಯಾವುದೇ ಪಾತ್ರವನ್ನು ಕೂಡ ಅದಕ್ಕೆ ನ್ಯಾಯ ತುಂಬುವಂತೆ ನಟಿಸುವಂತಹ ಅದ್ಭುತ ನಟಿ. ಕನ್ನಡ ಕಿರುತೆರೆ ಲೋಕದ ಅತ್ಯಂತ ಬಹುಬೇಡಿಕೆಯ ಪೋಷಕ ನಟಿ ಎಂದರೆ ತಪ್ಪಾಗಲಾರದು. ಯಾಕೆಂದರೆ ಇವರು ಇಲ್ಲಿಯವರೆಗೂ ಅಸಂಖ್ಯಾತ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಹರಿಣಿಯವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಇವರು ಶ್ರೀಕಾಂತ್ ಎಂಬುವರನ್ನು ಮದುವೆಯಾಗಿದ್ದಾರೆ. ಶ್ರೀಕಾಂತ್ ರವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಹರಿಣಿ ಹಾಗೂ ಶ್ರೀಕಾಂತ್ ದಂಪತಿಗಳಿಗೆ ಅಭಿಮನ್ಯು ಎಂಬ ಮುದ್ದಾದ ಮಗನಿದ್ದಾನೆ. ಹಲವಾರು ವರ್ಷಗಳಿಂದ ನಟಿಸಿಕೊಂಡು ಬಂದರು ಕೂಡ ಇಂದಿಗೂ ಕೂಡ ಹರಿಣಿಯವರ ಬೇಡಿಕೆ ಕಮ್ಮಿ ಆಗಿಲ್ಲ. ಯಾವುದೇ ಪಾತ್ರಕ್ಕಾದರೂ ನ್ಯಾಯವನ್ನು ಸಲ್ಲಿಸ ಬಲ್ಲಂತ ಅಮೋಘ ನಟಿ. ಇನ್ನು ಹರಿಣಿಯವರ ಮುದ್ದಾದ ಕುಟುಂಬದ ವಿಡಿಯೋವನ್ನು ನೋಡಲು ಈ ಕೆಳಗಿನ ವಿಡಿಯೋದಲ್ಲಿ ನೀವು ನೋಡಬಹುದು.