ಕಿರುತೆರೆ ನಟಿ ಅಮೃತಮೂರ್ತಿ ಅವರ ಸೀಮಂತ ಶಾಸ್ತ್ರದ ಎಸ್ಕ್ಯೂಸಿವೆ ಫೋಟೋಗಳನ್ನು ನೋಡಿದ್ದೀರಾ ಇಲ್ಲಿದೆ ನೋಡಿ.

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಿರುತೆರೆಯ ಹಾಗೂ ಹಿರಿತೆರೆಯ ಜೋಡಿಗಳು ಮದುವೆಯಾಗುವುದು ನಿಮಗೆಲ್ಲ ಗೊತ್ತೇ ಇದೆ‌ ಅದರಲ್ಲಿ ಈ ಬಾರಿಯ ಲಾಕ್ಡೌನ್ ಸಮಯದಲ್ಲಿ ಹಲವಾರು ಹಿರಿತೆರೆಯ ಹಾಗೂ ಕಿರುತೆರೆಯ ಜೋಡಿಗಳು ಸರಳವಾಗಿ ವಿವಾಹವಾಗಿರುವ ಸುದ್ದಿ ನಿಮಗೆಲ್ಲ ತಿಳಿದಿದೆ. ಈಗ ನಾವು ಮಾತನಾಡಲು ಹೊರಟಿರುವುದು ಮದುವೆಯ ಸುದ್ದಿಯಲ್ಲ ಬದಲಾಗಿ ಸೀಮಂತ ಶಾಸ್ತ್ರದ ಸುದ್ದಿ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಕಿರುತೆರೆಯ ಸೂಪರ್ ಹಿಟ್ ಜೋಡಿಗಳಾದಂತಹ ಅಮೃತಮೂರ್ತಿ ಹಾಗೂ ರಘು ಗೌಡರವರ ಕುರಿತಂತೆ. ಇವರಿಬ್ಬರು ಜೊತೆಗೆ ನಟಿಸಿದ್ದಂತಹ ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ ಸಾಕಷ್ಟು ಯಶಸ್ವಿಯಾಗಿ ಎಲ್ಲರ ಮನಗೆದ್ದಿತ್ತು. ಇನ್ನು ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು.

ಇನ್ನು ಇತ್ತೀಚಿಗಷ್ಟೇ ಇವರಿಬ್ಬರು ಮದುವೆಯಾಗಿ ಎರಡು ವರ್ಷದ ವಾರ್ಷಿಕೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಅಮೃತಮೂರ್ತಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಎರಡನೇ ವರ್ಷದ ವಾರ್ಷಿಕೋತ್ಸವದಲ್ಲಿ ನಾವೀಗ ಮೂವರು ಆಗುತ್ತಿದ್ದೇವೆ ಎಂಬ ಸಂತೋಷದ ಸುದ್ದಿಯನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದರು. ಈ ಸಂತೋಷದ ಸುದ್ದಿಯನ್ನು ಕೇಳಿ ಇವರಿಬ್ಬರ ಅಭಿಮಾನಿಗಳು ಸಾಕಷ್ಟು ಸಂತೋಷ ಪಟ್ಟುಕೊಂಡಿದ್ದರು.

ಇನ್ನು ಇತ್ತೀಚಿಗಷ್ಟೇ ಅಮೃತಮೂರ್ತಿ ಅವರ ಸೀಮಂತ ಶಾಸ್ತ್ರವನ್ನು ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಅವರ ಪತಿ ರಘು ಗೌಡರವರು ಮಾಡಿದ್ದಾರೆ. ಈ ಕುರಿತಂತೆ ಅಮೃತ ಮೂರ್ತಿಯವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸೀಮಂತ ಶಾಸ್ತ್ರದ ಫೋಟೋಗಳನ್ನು ಪೋಸ್ಟ್ ಮಾಡಿಕೊಂಡಿದ್ದು ನೀವು ಆ ಪೋಸ್ಟುಗಳನ್ನು ಈ ಕೆಳಗಡೆ ನೋಡಬಹುದಾಗಿದೆ. ಇನ್ನು ರಘು ಗೌಡರವರು ಈಗಲೂ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರವಾಹಿಯ ಮೂಲಕ ಸಾಕೇತ್ ಎಂಬ ಪಾತ್ರದಲ್ಲಿ ಎಲ್ಲರ ಮನವನ್ನು ಗೆಲ್ಲುತ್ತಿದ್ದರು.

Get real time updates directly on you device, subscribe now.