ಬ್ರಹ್ಮ ಗಂಟು ಧಾರಾವಾಹಿಯ ನಟಿ ಸ್ವಾತಿ ರವರ ಕುಟುಂಬ ಎಷ್ಟು ಮುದ್ದಾಗಿದೆ ಗೊತ್ತಾ?? ನೀವೇ ವಿಡಿಯೋ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಮನರಂಜನೆಯ ಕ್ಷೇತ್ರದಲ್ಲಿ ಈಗಾಗಲೇ ಸಿನಿಮಾಗಳನ್ನು ಹಿಂದಿಕ್ಕಿ ದಾರವಾಹಿಗಳು ಮುಂದೆ ಸಾಗಿದೆ. ಎಲ್ಲಿ ನೋಡಿದರೂ ಕನ್ನಡ ಪ್ರೇಕ್ಷಕರನ್ನು ಮನ ಗೆಲ್ಲುತ್ತಿರುವುದು ಕಿರುತೆರೆಯ ಸೂಪರ್ ಹಿಟ್ ದಾರವಾಹಿಗಳು. ಇತ್ತೀಚಿಗೆ ಈ ಧಾರವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ನಟಿ ಎಂದರೆ ಅದು ಸ್ವಾತಿ ಅವರು. ಇನ್ನು ಸ್ವಾತಿ ಅವರು ಅಂದಾಗ ಕೆಲವರಿಗೆ ಅವರ ಪರಿಚಯ ಆಗದೆ ಇರಬಹುದು, ಅವರು ಇನ್ಯಾರೂ ಅಲ್ಲ ನಟಿ ಮೈನಾವತಿ ಅವರ ಪುತ್ರ ಗುರುದತ್ ರವರ ಹೆಂಡತಿ.

ಇನ್ನು ನಟಿ ಸ್ವಾತಿ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 1995 ರಲ್ಲಿ ರಾಘವೇಂದ್ರ ರಾಜಕುಮಾರ ನಟನೆಯ ಆಟ ಹುಡುಗಾಟ ಚಿತ್ರದ ಮೂಲಕ. ಇನ್ನು ಅವರು ಚಕ್ರವ್ಯೂಹ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ತಾಯಿಯ ಪಾತ್ರದಲ್ಲಿ ನಟಿಸಿದ್ದರು. ಅನಂತು ವರ್ಸಸ್ ನುಸ್ರತ್ ರಾಜವಿಷ್ಣು ತಾರಕ್ ಹರಿಶ್ಚಂದ್ರ ಪಡ್ಡೆಹುಲಿ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಚಿತ್ರಗಳಿಗಿಂತ ಹೆಚ್ಚಾಗಿ ಸ್ವಾತಿ ಅವರು ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಧಾರಾವಾಹಿಗಳ ಮೂಲಕ.

ನಟಿ ಸ್ವಾತಿ ಅವರು ಇಲ್ಲಿಯವರೆಗೆ ಸುಮಾರು 600ಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ನಟಿಸಿ ದಾಖಲೆ ನಿರ್ಮಿಸಿದ್ದಾರೆ. ಇನ್ನು ಇವರಿಗೆ ಉದಿತ್ ಕಷ್ಟ ಎಂಬ ಮಗನಿದ್ದು 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಇವರ ಮನೆಯಲ್ಲಿ ಕಾರ್ಯಕ್ರಮವೊಂದು ನಡೆದಿದ್ದು ಕುಟುಂಬಿಕರೆಲ್ಲರೂ ಒಂದಾಗಿ ಸೇರಿದ್ದಾರೆ. ಸ್ವಾತಿ ರವರ ಕುಟುಂಬ ಒಂದೇ ಕಡೆ ಸೇರಿ ಸಂತೋಷದ ಕ್ಷಣಗಳನ್ನು ಕಳೆದಿದ್ದಾರೆ. ಈ ಕುರಿತಂತೆ ವಿಡಿಯೋವನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ.