ನಾಗರಹಾವು ಚಿತ್ರದ ಮೊದಲ ದಿನದ ಕಲೆಕ್ಷನ್ ಕೇಳಿದರೆ ನೀವು ಬೆಚ್ಚಿ ಬೀಳುವುದು ಗ್ಯಾರಂಟಿ?? ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಸಿನಿಮಾ ಅಂದರೆ ಆ ಕಾಲದಲ್ಲಿ ಬರುತ್ತಿತ್ತಲ್ಲ ಅದು ಸಿನಿಮಾ ಅಂದರೆ, ಇವಾಗ ಎಲ್ಲಾ ಡ್ಯಾನ್ಸ್ ಕಾಮಿಡಿ ಸಾಹಸ ದೃಶ್ಯಗಳು ಇಷ್ಟೇ ಆಗೋಯ್ತು ಸರ್ ಎಂದು ಸುಖಾಸುಮ್ಮನೆ ಹೇಳುತ್ತಿಲ್ಲ. ಅದಕ್ಕೆ ಕಾರಣ ಕೂಡ ಇದೆ. ಹೌದು ಸ್ನೇಹಿತರೆ ಅಂದಿನ ಕಾಲದಲ್ಲಿ ಬರುತ್ತಿದ್ದ ಅಂತಹ ಚಿತ್ರಗಳು ಇಂದಿಗೂ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಸದಾ ಹಚ್ಚ ಹಸಿರಾಗಿ ಉಳಿದುಕೊಂಡಿವೆ. ಅವುಗಳಲ್ಲಿ ಒಂದು ಎವರ್ಗ್ರೀನ್ ಚಿತ್ರವೆಂದರೆ ಅದು ನಾಗರಹಾವು. ಹೌದು ಸ್ನೇಹಿತರೆ ಪುಟ್ಟಣ್ಣ ಕಣಗಾಲ್ ರವರ ಸಿನಿ ಜೀವನದ ಅದ್ಭುತವೆಂದೇ ಹೇಳಲಾಗುವ ಚಿತ್ರ ನಾಗರಹಾವು.

ವೀರ ಸ್ವಾಮಿಯವರ ನಿರ್ಮಾಣದ ಮೂಲಕ ಮೂಡಿ ಬಂದಂತಹ ಈ ಚಿತ್ರ, ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನ ಕೂಡ ಈ ಚಿತ್ರಕ್ಕಿತ್ತು. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಇಬ್ಬರು ದಿಗ್ಗಜರು ಕಾಲಿಟ್ಟರು. ಹೌದು ಒಂದು ಮೈಸೂರಿನ ಸಂಪತ್ ಕುಮಾರ್ ಅಲಿಯಾಸ್ ವಿಷ್ಣುವರ್ಧನ್. ಮತ್ತೊಬ್ಬರು ಮಂಡ್ಯದ ಗಂಡು ಎಂದೇ ಖ್ಯಾತರಾಗಿರುವ ಅಮರನಾಥ್ ಅಲಿಯಾಸ್ ಅಂಬರೀಷ್. ಒಬ್ಬ ರೋಷಾವೇಶದ ರಾಮಚಾರಿಯಾಗಿ ಮರೆದರೆ ಇನ್ನೊಬ್ಬರು ಖತರ್ನಾಕ್ ವಿಲನ್ ಜಲೀಲನಾಗಿ ಮಿಂಚಿದರು.

ಈ ಚಿತ್ರದಲ್ಲಿ ಬರುವಂತಹ ರಾಮಾಚಾರಿ ಜಲೀಲ ಮಾರ್ಗರೇಟ್ ಚಾಮಯ್ಯ ಮೇಷ್ಟ್ರು ಹೀಗೆ ಎಲ್ಲ ಪಾತ್ರಗಳು ಕೂಡ ಇಂದಿನವರೆಗೂ ಚಿರಪರಿಚಿತವಾಗಿವೆ. ಇನ್ನು ಈ ಚಿತ್ರ ಮೊದಲ ದಿನ ಮಾಡಿದಂತಹ ಕಲೆಕ್ಷನ್ ಎಷ್ಟು ಗೊತ್ತಾ ಸ್ನೇಹಿತರೆ. ನಾಗರಹಾವು ಚಿತ್ರ ಬಿಡುಗಡೆಯಾಗಿ ಅದೆಷ್ಟೋ ದಶಕಗಳೇ ಕಳೆದು ಹೋದರೂ ಸಹ ಇದೆ ಎರಡು ವರ್ಷಗಳ ಹಿಂದಷ್ಟೇ ಮರುಬಿಡುಗಡೆ ಆದಂತಹ ಸಂದರ್ಭದಲ್ಲಿ ನಾಗರಹಾವು ಚಿತ್ರ ಬರೋಬ್ಬರಿ ಮೊದಲ ದಿನ ಒಂದು ಕೋಟಿ ರೂಪಾಯಿಯಷ್ಟು ಬಾಕ್ಸಾಫೀಸ್ ಕಲೆಕ್ಷನ್ ಮಾಡಿತ್ತು. ಚಿತ್ರ ಬಿಡುಗಡೆಯಾಗಿ ಎಷ್ಟೇ ವರ್ಷಗಳು ಕಳೆದರೂ ಸಹ ಇಂದಿಗೂ ಅದೇ ಕ್ರೇಜ್ ನ್ನು ಕನ್ನಡಿಗರಲ್ಲಿ ಉಳಿಸಿಕೊಳ್ಳಲು ಯಶಸ್ವಿಯಾಗಿದೆ.