ಈ ನಟಿಯರು ಹೀಗ್ಯಾಕೆ?? ಮದುವೆಯಾಗಿರುವ ಪುರುಷರೊಂದಿಗೆ ಪ್ರೀತಿ ಮಾಡಿ ಮದುವೆಯಾದ ನಟಿಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತೀಯ ಚಿತ್ರರಂಗದಲ್ಲಿ ಕೆಲವೊಂದು ವಿಚಾರಗಳು ನಮಗೆ ಅರ್ಥಾನೇ ಆಗೋದಿಲ್ಲ ಸ್ನೇಹಿತರೆ. ಕೆಲ ನಟಿಯರು ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯ ಮೂಲಕ ಎಷ್ಟೋ ಸಾಧನೆಗಳನ್ನು ಮಾಡಿರುತ್ತಾರೆ ಆದರೆ, ತಮ್ಮ ಮದುವೆ ವಿಚಾರದಲ್ಲಿ ಮಾತ್ರ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಾರೆ. ಹೌದು ಸ್ನೇಹಿತರೆ ಭಾರತೀಯ ಚಿತ್ರರಂಗದಲ್ಲಿ ನಟಿಯರು ತಮ್ಮ ನಟನೆ ಹಾಗೂ ಪ್ರತಿಭೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸುಗಳನ್ನು ಗೆಲ್ಲುತ್ತಾರೆ.

ಕೆಲವೊಮ್ಮೆ ನಟಿಯರ ಹೆಸರು ಕೆಲ ನಟ ಹಾಗೂ ಸೆಲೆಬ್ರಿಟಿಗಳ ಒಟ್ಟಿಗೆ ಕೇಳಿಬಂದರು ಸಹ ಕೊನೆಗೆ ಮದುವೆಯಾಗೋದು ಮಾತ್ರ ಅವರು ಬೇರೆಯವರನ್ನು. ಹೌದು ಸ್ನೇಹಿತರೆ ಹಿಂದಿನ ವಿಚಾರದಲ್ಲಿ ನಾವು ನಮ್ಮ ಭಾರತೀಯ ಚಿತ್ರರಂಗದ ಖ್ಯಾತ ನಟಿಯರು ಮದುವೆಯಾಗಿರುವ ಪುರುಷರೊಂದಿಗೆ ಮದುವೆಯಾಗಿರುವುದರ ಅಥವಾ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿರುವ ಕುರಿತಂತೆ ಹೇಳಲು ಹೊರಟಿದ್ದೇವೆ. ಯಾವೆಲ್ಲ ಭಾರತೀಯ ನಟಿಯರು ಮದುವೆಯಾದ ಪುರುಷರನ್ನು ಮದುವೆಯಾಗಿದ್ದಾರೆ ಅಥವಾ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬುದರ ಕುರಿತಂತೆ ನಿಮಗೆ ಸವಿವರವಾಗಿ ಹೇಳುತ್ತೇವೆ.

ಶಿಲ್ಪಾ ಶೆಟ್ಟಿ ಮಂಗಳೂರು ಮೂಲದ ಕರಾವಳಿ ಬೆಡಗಿ ಆಗಿರುವ ಶಿಲ್ಪಶೆಟ್ಟಿ ತಮ್ಮ ಅಭಿನಯದ ಚಾತುರ್ಯತೆ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ಖ್ಯಾತನಾಮ ರಾಗಿದ್ದಾರೆ. ಶಿಲ್ಪ ಶೆಟ್ಟಿ ಅವರು ಫಿಟ್ನೆಸ್ ಮೂಲಕ ಕೂಡ ತಮ್ಮ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಇನ್ನು ಇವರು ಖ್ಯಾತ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿದ್ದಾರೆ. ರಾಜ್ ಕುಂದ್ರಾ ರವರು ಈಗಾಗಲೇ ವಿವಾಹ ಆಗಿ ತಮ್ಮ ಮೊದಲನೇ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿ ಶಿಲ್ಪ ಶೆಟ್ಟಿ ಅವರನ್ನು ಮದುವೆಯಾಗಿದ್ದಾರೆ.

ಕಂಗನಾ ರಾಣಾವತ್ ಬಾಲಿವುಡ್ ನ ಖ್ಯಾತ ನಟಿ ಕಂಗನಾ ರಣಾವತ್ ಹೆಚ್ಚಿನ ಬಾರಿ ಜನಪ್ರಿಯರಾಗಿ ಕೇಳಿಸಿದ್ದು ಖ್ಯಾತ ನಟ ಹರಿತಿಕ್ ರೋಷನ್ ರವರ ಜೊತೆಗೆ. ಆದರೆ ಇಂದು ನಾವು ಔಟ್ ಆಫ್ ಸಿಲಬಸ್ ಮಾಹಿತಿಯನ್ನು ನಿಮಗೆ ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೇ ನಟಿ ಕಂಗನಾ ರಣಾವತ್ ನಟ ಆದಿತ್ಯ ಪಂಚೋಲಿ ಅವರ ಜೊತೆಗೆ ಕೂಡ ಅವರ ಹೆಸರು ಕೇಳಿಬಂದಿತ್ತು. ಹೌದು ಸ್ನೇಹಿತರೆ ಆದಿತ್ಯ ಪಂಚೋಲಿ ಅವರು ಜರೀನಾ ವಹಾಬ್ ರವರನ್ನು ಮದುವೆಯಾಗಿದ್ದರೂ ಕೂಡ ಕಂಗನಾ ರಣಾವತ್ ರವರೊಂದಿಗೆ ಸಂಬಂಧದಲ್ಲಿ ಇದ್ದರು. ನಂತರ 2019 ರಲ್ಲಿ ಇವರಿಬ್ಬರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡಿಬಂದು ಇವರಿಬ್ಬರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿ ಆಗಿತ್ತು.

ಶ್ರೀದೇವಿ ದಕ್ಷಿಣ ಭಾರತ ಚಿತ್ರರಂಗದಿಂದ ಬಾಲಿವುಡ್ ಚಿತ್ರರಂಗಕ್ಕೆ ಹಾರಿದ್ದ ನಟಿ ಶ್ರೀದೇವಿ ಅವರು ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರನ್ನು ತಮ್ಮ ಸೌಂದರ್ಯದಿಂದ ಸೆಳೆದುಕೊಂಡಿದ್ದರು. ಬೋನಿಕಪೂರ್ ರವರು ಕೂಡ ಶ್ರೀದೇವಿಯವರ ಮೇಲಿನ ಪ್ರೀತಿಯಿಂದಾಗಿ ತಮ್ಮ ಮೊದಲನೇ ಪತ್ನಿ ಮೋನ ಕಪೂರ್ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿದರು. ಈ ಹಿಂದೆ ಕೆಲವು ಸುದ್ದಿಮಾಧ್ಯಮಗಳಲ್ಲಿ ಶ್ರೀದೇವಿ ಹಾಗೂ ಮಿಥುನ್ ಚಕ್ರವರ್ತಿಯವರಿಗೆ ಗುಟ್ಟಾಗಿ ಮದುವೆಯಾಗಿದ್ದರೆ ಕುರಿತಂತೆ ಕೂಡ ಸುದ್ದಿಯಾಗಿತ್ತು.

ರಾಣಿ ಮುಖರ್ಜಿ ಭಾರತದ ಅತ್ಯಂತ ಶ್ರೀಮಂತ ಫಿಲಂ ನಿರ್ಮಾಣ ಸಂಸ್ಥೆ ಆದಂತಹ ಯಶ್ ರಾಜ್ ಫಿಲಂಸ್ ಆದಿತ್ಯ ಚೋಪ್ರಾ ರವರು ಮೊದಲ ಪತ್ನಿಗೆ ವಿವಾಹ ವಿಚ್ಛೇದನ ನೀಡಲು ರಾಣಿ ಮುಖರ್ಜಿ ಅವರೇ ಕಾರಣ ಎಂದು ಹೇಳಲಾಗುತ್ತದೆ. ಅದೇನೇ ಆಗಿರಲಿ ಸ್ನೇಹಿತರೆ ನಂತರ ಆದಿತ್ಯ ಚೋಪ್ರಾ ರವರು 2014 ರಲ್ಲಿ ರಾಣಿ ಮುಖರ್ಜಿ ಅವರನ್ನೇ ಮದುವೆಯಾದರು.

ಹೇಮಮಾಲಿನಿ ಬಾಲಿವುಡ್ ನ ಖ್ಯಾತ ಲೆಜೆಂಡರಿ ನಟ ಆದಂತಹ ಧರ್ಮೇಂದ್ರ ರವರು ಹೇಮಮಾಲಿನಿ ಅವರ ಮೇಲಿನ ಪ್ರೀತಿಗಾಗಿ ತಮ್ಮ ಮೊದಲನೇ ಪತ್ನಿಗೆ ವಿವಾಹ ವಿಚ್ಛೇದನ ನೀಡಲು ಪ್ರಯತ್ನಿಸಿದರು. ನಂತರ ವಿವಾಹ ವಿಚ್ಛೇದನಕ್ಕೆ ಧರ್ಮೇಂದ್ರ ರವರ ಮೊದಲ ಪತ್ನಿ ಒಪ್ಪದಿದ್ದ ಕಾರಣಕ್ಕಾಗಿ ಧರ್ಮೇಂದ್ರ ರವರು ಇಸ್ಲಾಂ ಧರ್ಮಕ್ಕೆ ಬದಲಾಗಿ ಹೇಮಮಾಲಿನಿ ಅವರನ್ನು ಪ್ರೀತಿಸಿ ವಿವಾಹವಾದರು.

ನಟಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಲು ಧರ್ಮೇಂದ್ರ ರವರಂತಹ ಸ್ಟಾರ್ ನಟರೇ ಇಷ್ಟೆಲ್ಲಾ ಸರ್ಕಸ್ ಮಾಡಿದರು ನೋಡಿ ಸ್ನೇಹಿತರೇ. ನೋಡಿದ್ರಲ್ಲಾ ಸ್ನೇಹಿತರೇ ಯಾವ ನಟ ನಟಿಯರು ಹೇಗೆಲ್ಲ ಮದುವೆಯಾಗಲು ಡ್ರಾಮಾ ಸರ್ಕಸ್ ಆಡಿದ್ದಾರೆ ಎಂಬುದನ್ನು. ಕೆಲ ಮದುವೆಗಳು ಎಲ್ಲರೂ ಒಪ್ಪುವಂತೆ ನಡೆದಿದ್ದರೂ ಕೆಲವೊಮ್ಮೆ ಕೆಲ ಮದುವೆಗಳು ಸಾಮಾಜಿಕವಾಗಿ ಅವರನ್ನು ಸೆಲೆಬ್ರಿಟಿ ಎಂದು ಕರೆಯಲು ನಾಚುವಂತೆ ಮಾಡುತ್ತದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.