ದರ್ಶನ್ ವಿರುದ್ಧ ಮಾತನಾಡಿದ್ದ ಇಂದ್ರಜಿತ್ ಲಂಕೇಶ್ ರವರ ಮೊದಲ ಶಾಕ್ ನೀಡಿದ ಸೃಜನ್ ಲೋಕೇಶ್. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕಳೆದ ಕೆಲವು ದಿನಗಳ ಹಿಂದೆ ಇಂದ್ರಜಿತ್ ಲಂಕೇಶ್ ಹಾಗೂ ಕನ್ನಡ ಚಲನಚಿತ್ರ ರಂಗದ ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದು ಕೊಂಡಿರುವ ದರ್ಶನ್ ರವರ ನಡುವೆ ನಡೆದ ವಿಚಾರಗಳ ಕುರಿತು ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆಯಿಲ್ಲ ಅನಿಸುತ್ತದೆ ಯಾಕೆಂದರೆ ನಾಲ್ಕೈದು ದಿನಗಳ ಕಾಲ ನೀವು ಯಾವ ಚಾನಲ್ ಅನ್ನು ಹಾಕಿದರೂ ಕೂಡ ಈ ವಿಷಯಗಳ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿತ್ತು. ಇನ್ನು ಈ ಚರ್ಚೆಗಳು ಇನ್ನೂ ಕೂಡ ಸಾಕಷ್ಟು ನಡೆಯುತ್ತಿವೆ.

ಅದರಲ್ಲಿಯೂ ಪ್ರಮುಖವಾಗಿ ಇಂದ್ರಜಿತ್ ಲಂಕೇಶ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕುರಿತು ಮಾತನಾಡಿರುವ ಕಾರಣ ಅಭಿಮಾನಿಗಳು ಸಾಕಷ್ಟು ಬೇಸರ ಗೊಂಡಿದ್ದಾರೆ, ಇತರ ಯಾವುದೇ ನಟರಿಗೆ ಹೋಲಿಸಿ ಕೊಂಡರು ಕೂಡ ದರ್ಶನ್ ರವರಿಗೆ ಅಭಿಮಾನಿಗಳ ಸಂಖ್ಯೆ ಕೊಂಚ ಹೆಚ್ಚಾಗಿರುವ ಕಾರಣ ಈಗಲೂ ಕೂಡ ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಅದೇ ಸಮಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತ ಸ್ನೇಹಿತ ಸೃಜನ್ ಲೋಕೇಶ್ ರವರ ಇದೀಗ ಮತ್ತೊಂದು ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಇನ್ನೂ ಅಧಿಕೃತವಾಗಿ ಯಾವುದೇ ಆದೇಶ ಬಂದಿಲ್ಲವಾದರೂ ಕೂಡ ಕಿರುತೆರೆಯ ಮೂಲಗಳಿಂದ ಸೃಜನ್ ಲೋಕೇಶ್ ರವರ ನೇತೃತ್ವದಲ್ಲಿ ನಿರ್ಮಾಣವಾಗುವ ಕನ್ನಡ ಪ್ರಖ್ಯಾತ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಮಜಾ ಟಾಕೀಸ್ನಲ್ಲಿ ಇಂದ್ರಜಿತ್ ಲಂಕೇಶ್ ರವರ ಇಷ್ಟು ದಿವಸ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಸೃಜನ್ ಲೋಕೇಶ್ ರವರು ಇಂದ್ರಜಿತ್ ಲಂಕೇಶ್ ರವರ ಸ್ಥಾನಕ್ಕೆ ಮತ್ತೊಬ್ಬರನ್ನು ಕರೆತರುವ ಕುರಿತು ಆಲೋಚನೆ ನಡೆಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ ಇನ್ನು ಇವರ ಸ್ಥಾನಕ್ಕೆ ಹಿರಿಯ ನಟ ಮಿಮಿಕ್ರಿ ದಯಾನಂದ್ ಅಥವಾ ಹಿರಿಯ ನಟಿ ತಾರಾ ರವರನ್ನು ಕರೆದು ತರಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಮಜಾ ಟಾಕೀಸ್ ನ ಮೂಲಗಳು ತಿಳಿಸಿವೆ. ಇನ್ನು ಈ ಕುರಿತು ಇಂದ್ರಜಿತ್ ಲಂಕೇಶ್ ಅವರ ಸ್ಥಾನದಲ್ಲಿ ಯಾರು ಬರಬೇಕು ಅಥವಾ ಇಂದ್ರಜಿತ್ ಲಂಕೇಶ್ ಅವರ ಮುಂದುವರಿಯಬೇಕೆ ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.