ರಶ್ಮಿಕಾ ಮಂದಣ್ಣ ರವರ ನಂತರ ಬಾಲಿವುಡ್ ಗೆ ಎಂಟ್ರಿ ಕೊಡಲು ಸಿದ್ದವಾದ ಮತ್ತೊಬ್ಬರು ಕನ್ನಡತಿ, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದ ನಟಿಯರು ಈಗಾಗಲೇ ಪರಭಾಷೆಗಳಲ್ಲಿ ಸಾಕಷ್ಟು ಮಿಂಚುತ್ತಿದ್ದಾರೆ. ಇನ್ನು ಕೆಲವು ನಟಿಯರು ಕನ್ನಡದಲ್ಲಿ ಒಮ್ಮೆಯೂ ಕೂಡ ಅವಕಾಶವನ್ನು ಪಡೆಯದೇ ಇದ್ದರೂ ಇತರ ಚಿತ್ರರಂಗಗಳಲ್ಲಿ ಹೋದ ಮೇಲೆ ಭಾರಿ ಯಶಸ್ಸು ಗಳಿಸಿದ್ದಾರೆ. ಇನ್ನು ಕೆಲವರು ಕನ್ನಡ ಚಿತ್ರರಂಗದಲ್ಲಿ ಅವಕಾಶ ಪಡೆದು ಉತ್ತಮ ಹೆಸರು ಪಡೆದುಕೊಂಡು ಅದೇ ಹೆಸರನ್ನು ಬಳಸಿಕೊಂಡು ಇತರ ಚಿತ್ರರಂಗಗಳಿಗೆ ಪಾದಾರ್ಪಣೆ ಮಾಡಿ ಅಲ್ಲಿಯೂ ಕೂಡ ಭರ್ಜರಿ ಯಶಸ್ಸು ಕಂಡುಕೊಳ್ಳುತ್ತಿದ್ದಾರೆ.

ಇತ್ತೀಚಿಗಷ್ಟೇ ರಶ್ಮಿಕ ಮಂದನ್ನ ರವರು ಕನ್ನಡ ಚಿತ್ರರಂಗದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಂತರ ತೆಲುಗು ತಮಿಳು ‌ ಚಿತ್ರರಂಗಗಳಲ್ಲಿ ಸಾಕಷ್ಟು ಹೆಸರು ಗಳಿಸಿ ಇದೀಗ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಮಿಂಚಲು ಆರಂಭಿಸಿದ್ದಾರೆ. ಈಗಾಗಲೇ ಮೊದಲನೇ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಬಾಲಿವುಡ್ ಚಿತ್ರರಂಗದಲ್ಲಿ ಎರಡನೇ ಅವಕಾಶವನ್ನು ಕೂಡ ಪಡೆದು ಕೊಂಡಿರುವ ರಶ್ಮಿಕ ಮಂದನ್ನ ರವರು ಆಲ್ಬಮ್ ಸಾಂಗ್ ಗಳಿಗೆ ಕೂಡ ಹೆಜ್ಜೆ ಹಾಕುತ್ತಿದ್ದಾರೆ. ಇಷ್ಟೇ ಅಲ್ಲದೆ ವೆಬ್ಸಿರೆಸ್ ಗಳಲ್ಲಿ ನಟನೆ ಮಾಡಲು ಕೂಡ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ ಎಂಬುದು ತಿಳಿದು ಬಂದಿದೆ.

ಇನ್ನು ಕನ್ನಡ ಚಿತ್ರರಂಗದಲ್ಲಿ ನಟಿಸಿ ಇದೀಗ ತೆಲುಗು ಚಿತ್ರರಂಗದಲ್ಲಿ ಕಳೆದ ಕೆಲವು ವರ್ಷಗಳಿಂದ ಮೋಡಿ ಮಾಡುತ್ತಿರುವ ನಟಿಯೊಬ್ಬರು ಇದೀಗ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಿದ್ಧವಾಗಿದ್ದು, ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಭಾ ನಟೇಶ್ ರವರು ಇದೀಗ ತೆಲುಗು ಚಿತ್ರರಂಗದಲ್ಲಿ ಯಶಸ್ಸು ಗಳಿಸಿ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಿದ್ಧವಾಗಿದ್ದಾರೆ, ಮೂಲಗಳ ಪ್ರಕಾರ ಬಾಲಿವುಡ್ ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರಾಗಿರುವ ಹೃತಿಕ್ ರೋಷನ್ ರವರ ಜೊತೆ ನಾಯಕಿಯಾಗಿ ಆಯ್ಕೆಯಾಗುವ ಕುರಿತು ಸುದ್ದಿ ಕೇಳಿ ಬಂದಿದೆ. ಇವರು ಹೀಗೆ ಮತ್ತಷ್ಟು ಯಶಸ್ಸು ಗಳಿಸಲಿ ಎಂದು ನಮ್ಮ ತಂಡದ ಪರವಾಗಿ ಹಾರೈಸುತ್ತೇವೆ.