ನನಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಬರೋದೇ ಇಲ್ಲ ಎಂದು ಹೇಳಿ, ಬರೋಬ್ಬರಿ 5 ಭಾಷೆಯಲ್ಲಿ ನಟಿಸಿ ಗೆದ್ದ ಕನ್ನಡತಿ ಇವರು, ಯಾರು ಗೊತ್ತೇ ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ನಟಿಯರು ಪರಭಾಷಾ ಚಿತ್ರಗಳಿಂದ ಬರುತ್ತಾರೆ ಹಾಗೂ ನಮ್ಮ ನೆಲದ ನಟಿಯರು ಪರಭಾಷೆ ಚಿತ್ರಗಳಲ್ಲಿ ಹೋಗಿ ನಟಿಸುತ್ತಾರೆ. ತಮ್ಮ ಪ್ರತಿಭೆಯ ಮೂಲಕ ಭಾಷೆಗೂ ಮೀರಿ ತಮ್ಮ ಪ್ರತಿಭೆಯ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಾರೆ. ಇಂದು ನಾವು ಹೇಳಹೊರಟಿರುವ ನಟಿ ನಮ್ಮ ಬೆಂಗಳೂರಿನವರೇ ಆಗಿದ್ದು ಪಂಚ ಭಾಷೆಗಳಲ್ಲಿಯೂ ಕೂಡ ತಮ್ಮ ನಟನೆಯ ಮೂಲಕ ಅದೆಷ್ಟೋ ಪ್ರೇಕ್ಷಕರ ಮನಗೆದ್ದ ಬಹುಭಾಷಾ ಹಾಗೂ ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಂಡಿದ್ದರು.

ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಮಲಯಾಳಂ ತಮಿಳು ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ನಟನೆಯನ್ನು ಪ್ರತಿಯೊಂದು ಭಾಷೆಯಲ್ಲೂ ಪ್ರತಿಯೊಂದು ಚಿತ್ರರಂಗದಲ್ಲಿ ಕೂಡ ಸಾಧಿಸಿಕೊಂಡಿರುವ ಅಮೋಘ ನಟಿಯಾಗಿದ್ದಾರೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಪಂಚ ಭಾಷೆಗಳಲ್ಲೂ ತಮ್ಮ ನಟನೆಯ ಮೂಲಕ ಜನಪ್ರಿಯತೆಯನ್ನು ಬೆಳೆಸಿಕೊಂಡಿರುವ ನಟಿ ನಿತ್ಯಾ ಮೆನನ್ ರವರ ಬಗ್ಗೆ.

ಹೌದು ಸ್ನೇಹಿತರೆ ಇವರು ಮಲಯಾಳಂ ಚಿತ್ರರಂಗದಲ್ಲಿ ಮೊದಲಿಗೆ ನಟಿಸಿದ್ದರು ಸಹ ಇವರು ಬೆಂಗಳೂರಿನಲ್ಲಿ ಜನಿಸಿದರು. ಹಾಗೂ ಇಲ್ಲಿಯೇ ಬೆಳೆದು ವಿದ್ಯಾಭ್ಯಾಸವನ್ನು ಕೂಡ ಪೂರ್ಣಗೊಳಿಸಿಕೊಂಡಿದ್ದಾರೆ. ಅವರು ಕನ್ನಡ ಚಿತ್ರರಂಗದಲ್ಲಿ ಚಿತ್ರದ ಮೂಲಕ ಪರಿಚಿತರಾಗಿ ನಂತರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ಚಿತ್ರ ಕೋಟಿಗೊಬ್ಬ 2 ಚಿತ್ರದಲ್ಲಿ ಕೂಡ ನಾಯಕಿಯಾಗಿ ನಟಿಸಿದ್ದಾರೆ. ನಿತ್ಯ ಮೆನನ್ ರವರು ಗ್ಲಾಮರಸ್ ಪಾತ್ರಗಳಿಗಿಂತ ಹೆಚ್ಚಾಗಿ ಒಳ್ಳೆಯ ನಟನೆಯನ್ನು ಹೊಂದಿರುವ ಪಾತ್ರಗಳನ್ನು ಆಯ್ಕೆ ಮಾಡುವಲ್ಲಿ ಪರಿಣಿತರು. ಇದಕ್ಕಾಗಿ ಅವರ ನಟನೆಯನ್ನು ಮೆಚ್ಚುವ ಒಂದು ದೊಡ್ಡ ಅಭಿಮಾನಿ ಬಳಗವಿದೆ. ನಿತ್ಯ ಮೆನನ್ ರವರು ಯಾವುದೇ ಭಾಷೆಯಲ್ಲಿ ನಟಿಸಿದರು ಕೂಡ ತಾನು ಕನ್ನಡತಿ ಎಂಬುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

Get real time updates directly on you device, subscribe now.