ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿರುವ ಸ್ಪರ್ಧೆಗಳಲ್ಲಿ ಅತ್ಯಂತ 5 ಸ್ಟೈಲಿಶ್ ಕ್ರೀಡಾಪಟುಗಳು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಈ ಬಾರಿ ಟೋಕ್ಯೋ ಒಲಂಪಿಕ್ಸ್ 2020 ಬಹಳಷ್ಟು ವಿಶೇಷವಾಗಿ ಆರಂಭವಾಗಿದೆ. ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಪಡೆಯಲು ಅದೆಷ್ಟು ಕ್ರೀಡಾಪಟುಗಳು ಹಗಲು-ರಾತ್ರಿಯೆನ್ನದೆ ಬೆವರುಹರಿಸಿ ಪರಿಶ್ರಮಪಟ್ಟು ಅಭ್ಯಾಸ ನಡೆಸುತ್ತಿದ್ದಾರೆ. ಈಗಾಗಲೇ ಭಾರತ ಒಲಿಂಪಿಕ್ಸ್ನಲ್ಲಿ ಮೀರಾಬಾಯಿ ಚಾನು ರವರ ಮೂಲಕ ಬೆಳ್ಳಿಯ ಪದಕವನ್ನು ವೈಟ್ಲಿಫ್ತಿಂಗ್ ನಲ್ಲಿ ಪಡೆದುಕೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಸಾಕಷ್ಟು ಪದಕಗಳನ್ನು ಪಡೆಯುವ ಭರವಸೆ ಹಾಗೂ ನಿರೀಕ್ಷೆ ಭಾರತೀಯರಿಗೆ ಇದೆ. ಕ್ರೀಡಾಪಟುಗಳು ಕೂಡ ಸಾಕಷ್ಟು ತಯಾರಿ ಮಾಡಿಕೊಂಡು ಪದಕವನ್ನು ಗೆಲ್ಲಲೇಬೇಕೆಂಬ ಆದಮ್ಯ ಹಠವನ್ನು ಹಿಡಿದುಕೊಂಡಿದ್ದಾರೆ. 18 ವಿವಿಧ ಕ್ರೀಡೆಯಲ್ಲಿ ಸ್ಪರ್ಧಿಸಲು 127 ಮಂದಿ ಭಾರತೀಯರು ಈಗಾಗಲೇ ಟೋಕಿಯೋದಲ್ಲಿ ಸೇರಿದ್ದಾರೆ. ಇಂದು ನಾವು ಈ 127 ಸ್ಪರ್ಧಿಗಳಲ್ಲಿ ಯಾರು ಅತ್ಯಂತ 5 ಸ್ಟೈಲಿಸ್ಟ್ ಹಾಗೂ ಸುಂದರ ಕ್ರೀಡಾ ಪಟುಗಳು ಎಂಬುದನ್ನು ಹೇಳಲು ಹೊರಟಿದ್ದೇವೆ.

ಸಾನಿಯಾ ಮಿರ್ಜಾ ಟೆನಿಸ್ ತಾರೆಯಾಗಿರುವ ಸಾನಿಯಾ ಮಿರ್ಜಾ ಅವರ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಈ ಬಾರಿಯ ಒಲಿಂಪಿಕ್ಸ್ನಲ್ಲಿ ಟೆನಿಸ್ ನಲ್ಲಿ ಡಬಲ್ಸ್ ವಿಭಾಗದಲ್ಲಿ ಅವರ ಜೊತೆಗಾರ್ತಿ ಅಂಕಿತ ರೈನ ರವರ ಜೊತೆಗೂಡಿ ಭಾರತಕ್ಕಾಗಿ ಪದಕ ಗೆಲ್ಲುವ ಆಶಾಕಿರಣ ಮೂಡಿಸಿದ್ದಾರೆ. ಇನ್ನು 34 ವರ್ಷವಾದರೂ ಸಹ ಚಿರ ಯುವತಿಯಂತೆ ಕಾಣುವ ಸಾನಿಯಾ ಮಿರ್ಜಾರವರು ಫ್ಯಾಷನ್ ನಲ್ಲಿ ಎತ್ತಿದ ಕೈ. ಯಾವುದೇ ಬಾಲಿವುಡ್ ಹೀರೋಯಿನ್ ಗಿಂತ ಕಮ್ಮಿ ಇಲ್ಲದಂತೆ ಸೌಂದರ್ಯವತಿ ಆಗಿದ್ದಾರೆ. ಈ ಬಾರಿ ಭಾರತಕ್ಕಾಗಿ ಪದಕ ಗೆಲ್ಲಲು ಸಾಕಷ್ಟು ತಯಾರಿ ಮಾಡಿಕೊಂಡಿರುವ ಸಾನಿಯಾ ಮಿರ್ಜಾ ಭಾರತಕ್ಕಾಗಿ ಪದಕ ಗೆಲ್ಲುತ್ತಾರ ಎಂಬುದನ್ನು ಕಾದುನೋಡಬೇಕಾಗಿದೆ.

ಪಿವಿ ಸಿಂಧು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿರುವ ಏಕೈಕ ಮಹಿಳಾ ಸೆಟಲ್ ಆಟಗಾರ್ತಿ. ಈಗಾಗಲೇ ಶಟಲ್ ವೃತ್ತಿಯಲ್ಲಿ ಮಾಡಿದಂತಹ ಸಾಧನೆಗಾಗಿ ಪಿವಿ ಸಿಂಧು ಅವರು ಪದ್ಮಭೂಷಣ ಆಗು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕೇವಲ ಆಟದಲ್ಲಿ ಮಾತ್ರವಲ್ಲದೆ ಸ್ಟೈಲ್ ಕೂಡಾ ಕಮ್ಮಿ ಇಲ್ಲದಂತೆ ಪಿವಿ ಸಿಂಧು ಅವರು ಈಗಾಗಲೇ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಶಟಲ್ ವಿಭಾಗದಲ್ಲಿ ಭಾರತಕ್ಕೆ ಪದಕದ ಆಸೆಯನ್ನು ತೋರಿಸುವ ಪ್ರಬಲ ಅಭ್ಯರ್ಥಿಗಳಲ್ಲಿ ಪಿವಿ ಸಿಂಧು ರವರು ಕೂಡ ಒಬ್ಬರು ಎಂದು ಹೇಳಬಹುದು.

ಮಾನ ಪಟೇಲ್ ಈಗಾಗಲೇ ಈಗಿನ ವಿಭಾಗದಲ್ಲಿ ಮಾನ ಪಟೇಲ್ ರವರು 10 ಚಿನ್ನ ಐದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಬೇರೆಬೇರೆ ಸ್ಪರ್ಧೆಗಳಲ್ಲಿ ಗಳಿಸಿದ್ದಾರೆ. ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಆಸೆಯನ್ನು ಹೊತ್ತು ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿದ್ದಾರೆ ಇವರು ಕೂಡ ವಿಚಾರದಲ್ಲಿ ಯಾವುದೇ ಮಾಡೆಲ್ ಅಥವಾ ನಟಿ ಗಿಂತಲೂ ಕಡಿಮೆ ಇಲ್ಲದಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಸ್ವಿಮ್ಮಿಂಗ್ ಸೂಟ್ ಅನ್ನು ಹಾಕಿಕೊಂಡರೆ 21 ವರ್ಷದ ಯುವತಿ ಜಲಕನ್ನಿಕೆ ಯಂತೆ ಕಾಣುವುದಂತೂ ಸುಳ್ಳಲ್ಲ.

ಮನಪ್ರೀತ್ ಸಿಂಗ್ ಈ ಲಿಸ್ಟಿನಲ್ಲಿ ಒಬ್ಬ ಹುಡುಗ ಇದ್ದಾನೆ ಎಂದರೆ ಅದು ಹಾಕಿ ಆಟಗಾರ ಮನಪ್ರೀತ್ ಸಿಂಗ್ ಕೂಡ ಒಬ್ಬರು. ಮನಪ್ರೀತ್ ಸಿಂಗ್ ಟೋಕಿಯೋ ಒಲಿಂಪಿಕ್ ನಲ್ಲಿ ಭಾರತೀಯ ಹಾಕಿ ತಂಡವನ್ನು ಮುನ್ನಡೆಸುತ್ತಿರುವ ಕಪ್ತಾನ. ಈಗಾಗಲೇ ಭಾರತೀಯ ಹಾಕಿ ತಂಡ ಸ್ಪೇನ್ ಹಾಗೂ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ದು ಈ ಒಲಿಂಪಿಕ್ಸ್ನಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾಗಿ ಕಾಣಿಸಿಕೊಂಡಿದೆ. ಇನ್ನು ಮನಪ್ರೀತ್ ಸಿಂಗ್ ಅವರು ಕೂಡ ಸ್ಟೈಲಿಶ್ ಪ್ರಿಯ. ಹಾಕಿ ಉಡುಪುಗಳನ್ನು ಧರಿಸಿರಲಿ ಅಥವಾ ಸೂಟು-ಬೂಟು ಗಳನ್ನು ಧರಿಸಿ ರಲಿ ಮನಪ್ರೀತ್ ಸಿಂಗ್ ರವರು ಸಕ್ಕತ್ ಹೀರೋ ಆಗಿ ಕಾಣಿಸಿಕೊಳ್ಳುತ್ತಾರೆ.

ಮಣಿಕಾ ಭತ್ರಾ 26 ವರ್ಷದ ಮಣಿಕಾ ಭಾತ್ರ ರವರಿಗೆ ಇದು ಎರಡನೆಯ ಒಲಿಂಪಿಕ್ಸ್. ಈಗಾಗಲೇ ಕ್ರೀಡಾಪಟುಗಳಿಗೆ ಕೊಡಲಾಗುವ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿರುವ ಕ್ರೀಡಾಪಟು. ಈ ಬಾರಿ ಭಾರತವನ್ನು ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ಪದಕವನ್ನು ಗಳಿಸಲು ಇರುವ ಏಕೈಕ ಆಶಾಕಿರಣವೆಂದೇ ಹೇಳಬಹುದು. ಇನ್ನು ಇವರು ಕೂಡ ಮಾಡರ್ನ್ ಡ್ರೆಸ್ ಹಾಕಿಕೊಂಡು ಎಂದರೆ ಹೀರೋಯಿನ್ ಗೂ ಮೀರಿದ ಸೌಂದರ್ಯವತಿಯಾಗಿ ಕಾಣಿಸಿಕೊಳ್ಳುತ್ತಾರೆ. ನೋಡಿದ್ರಲ್ಲ ಸ್ನೇಹಿತರೆ ಈ ಬಾರಿ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿರುವ 127ನೇ ಸ್ಪರ್ಧಿಗಳ ಪೈಕಿ ಯಲ್ಲಿ ಯಾವೆಲ್ಲಾ ಐದು ಕ್ರೀಡಾಪಟುಗಳು ಸಕ್ಕತ್ತಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದನ್ನು.