ಕನ್ನಡ ಚಿತ್ರ ರಂಗದ ಟಾಪ್ ನಟಿ ಲಕ್ಷ್ಮಿ ಅವರ ದತ್ತು ಪುತ್ರಿ ಹೇಗಿದ್ದಾರೆ ನೋಡಿ?? ಕ್ಯೂಟ್ ಕುಟುಂಬ ಹೇಗಿದೆ ಗೊತ್ತಾ??

33

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿ ಪಂಚಭಾಷಾ ತಾರೆ ಚಿತ್ರನಟಿಯಾಗಿ ಮೆರೆದವರು ನಮ್ಮ ಹೆಮ್ಮೆಯ ಲಕ್ಷ್ಮಿ ಅಮ್ಮನವರು. ಹೌದು ಸ್ನೇಹಿತರೆ ಸಿನಿಮಾ ಹಿನ್ನೆಲೆ ಕುಟುಂಬದಿಂದ ಬಂದವರು. ಅವರ ತಂದೆ-ತಾಯಿ ಇಬ್ಬರೂ ಕೂಡ ಚಿತ್ರರಂಗಕ್ಕೆ ಸಂಬಂಧಪಟ್ಟವರು. ತಮ್ಮ 15ನೇ ವಯಸ್ಸಿನಲ್ಲಿ ತಮಿಳು ಚಿತ್ರರಂಗದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಂತರ ತೆಲುಗು ಹಾಗೂ ಕನ್ನಡ ಚಿತ್ರಗಳಿಗೆ ಕೂಡ ನಟಿಸಲು ಪ್ರಾರಂಭಿಸಿದರು.

ಕನ್ನಡ ಚಿತ್ರರಂಗದಲ್ಲಿ ಕೂಡ ರಾಜಕುಮಾರ್ ಅಂತಹ ಮೇರು ನಟರೊಂದಿಗೆ ನಟಿಸಿದ ಅನುಭವ ಲಕ್ಷ್ಮಿಯವರಿಗೆ ಇದೆ. ಇನ್ನು ಲಕ್ಷ್ಮಿಯವರು ಕನ್ನಡ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಚಿತ್ರಗಳ ಪಂಚಭಾಷಾ ತಾರೆಯಾಗಿ ಮಿಂಚಿದಂತಹ ಅನುಭವವಿದೆ. ಇನ್ನು ಲಕ್ಷ್ಮಿ ಅವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಭಾಸ್ಕರ ನವರೊಂದಿಗೆ ಮದುವೆಯಾಗುತ್ತಾರೆ. ನಂತರ ಇವರಿಗೆ ಐಶ್ವರ್ಯ ಮಗಳು ಜನಿಸುತ್ತಾರೆ. ನಂತರ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿಂದಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ.

ನಂತರ ನಟಿ ಲಕ್ಷ್ಮಿಯವರು ಮಲಯಾಳಂ ಚಿತ್ರದ ಖ್ಯಾತ ನಟ ಮೋಹನ್ ಎಂಬವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಈ ಮದುವೆ ಕೂಡ ಹೆಚ್ಚು ಕಾಲ ಉಳಿಯುವುದಿಲ್ಲ. ನಂತರ ನಟ ನಿರ್ದೇಶಕ ಶಿವಚಂದ್ರನ್ ರವರನ್ನು ಮಗಳ ವಿರೋಧದ ನಡುವೆ ಕೂಡ ಮದುವೆಯಾಗುತ್ತಾರೆ. ಇನ್ನು ಇವರಿಬ್ಬರು ನಂತರ 2000 ಇಸ್ವಿಯಲ್ಲಿ ಸಂಯುಕ್ತ ಎಂಬ ಹೆಣ್ಣು ಮಗುವನ್ನು ದತ್ತು ಪಡೆಯುತ್ತಾರೆ. ಇವರಿಬ್ಬರ ಆರೈಕೆಯಲ್ಲಿ ಸಹಿತ ಅವರು ಒಳ್ಳೆ ಜೀವನವನ್ನು ಪಡೆದರೆ ಎಂದರೆ ತಪ್ಪಾಗಲಾರದು. ಮುಂದಿನ ದಿನಗಳಲ್ಲಿ ಸಂಯುಕ್ತ ರವರು ಚಿತ್ರರಂಗಕ್ಕೆ ಕಾಲಿಡುತ್ತಾರ ಎನ್ನುವುದನ್ನು ಕಾದು ನೋಡಬೇಕಾಗಿದೆ.

Get real time updates directly on you device, subscribe now.