ಕನ್ನಡದ ಖ್ಯಾತ ಖಳನಾಯಕ ಸುಂದರಕೃಷ್ಣ ಅರಸ್ ರವರ ಮಗ ಕೂಡ ಜನಪ್ರಿಯ ನಟ ಯಾರು ಗೊತ್ತಾ??

106

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಅಂದಿನ ಕನ್ನಡ ಚಿತ್ರರಂಗದಲ್ಲಿ ಕೇವಲ ನಾಯಕನಟರಿಗೆ ಮಾತ್ರವಲ್ಲದೆ ಖಳನಾಯಕ ನಟರಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆ ಇತ್ತು. ಅತ್ಯಂತ ಬೇಡಿಕೆಯುಳ್ಳ ಅಂತಹ ಖಳನಾಯಕರಲ್ಲಿ ನಾವು ಇಂದು ಮಾತನಾಡಲು ಹೊರಟಿರುವ ಖಳನಾಯಕ ಕೂಡ ಅಗ್ರಗಣ್ಯ ಸ್ಥಾನದಲ್ಲಿ ಕಾಣುತ್ತಾರೆ. ಹೌದು ಸ್ನೇಹಿತರೆ ನಾವಿಂದು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ಖಳ ನಾಯಕರಾದಂತಹ ಸುಂದರಕೃಷ್ಣ ಅರಸ್ ರವರ ಕುರಿತಂತೆ. ಕೇವಲ 52 ವರ್ಷಗಳು ಮಾತ್ರ ಜೀವಂತವಾಗಿ ಇದ್ದ ಅವರು ಜೀವನಕ್ಕಿಂತ ಹೆಚ್ಚಾಗಿ ಸಿನಿಮಾ ಜೀವನದಲ್ಲಿ ಮಾಡಿದಂತಹ ಸಾಧನೆ ಹೆಮ್ಮರವಾದದ್ದು.

ತಮ್ಮ ವಿಭಿನ್ನ ನಟನಾ ಶೈಲಿ ಹಾಗೂ ವಿಶೇಷವಾದಂತಹ ಸಂಭಾಷಣಾ ಶೈಲಿಯಿಂದ ಖಳನಾಯಕ ನಟರಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದರು. ನಂದಿನಿ ಎಲ್ಲಾ ಸೂಪರ್ ಸ್ಟಾರ್ ನಟರ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡರು ತಮ್ಮ ನಟನಾ ಶೈಲಿಯ ವಿರಾಟ್ ರೂಪವನ್ನು ಅನಾವರಣ ಮಾಡಿದಂತಹ ಅದ್ಭುತ ನಟ. ಇನ್ನು ಅವರಿಗೆ ಒಬ್ಬ ಮಗ ಕೂಡ ಇದ್ದು ಅವರು ಕೂಡ ಈಗ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಚಿತ್ರರಂಗ ಕಂಡಂತಹ ಅಪರೂಪದ ಖಳನಟ ಸುಂದರಕೃಷ್ಣ ಅರಸ್ ರವರ ಮಗ ಯಾರು ಎಂಬುದನ್ನು ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇವೆ ಬನ್ನಿ.

ಹೌದು ಸ್ನೇಹಿತರೆ ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಖಳ ನಾಯಕ ನಟನಾಗಿ ಪ್ರಸಿದ್ಧರಾಗಿದ್ದ ಅಂತಹ ಸುಂದರ ಕೃಷ್ಣ ಅರಸ್ ಅವರ ಮಗ ನಾಗೇಂದ್ರ ಅರಸ್. ಹೌದು ಸ್ನೇಹಿತರೆ ನಾಗೇಂದ್ರ ಅರಸ್ ರವರು ನಿಮಗೆ ಪರಿಚಯ ಇಲ್ಲದೆ ಇರಬಹುದು ಆದರೆ ಅವರ ಒಂದು ಚಿತ್ರವನ್ನು ನಿಮಗೆ ಖಂಡಿತವಾಗಿಯೂ ಸದಾಕಾಲ ಚಿರಪರಿಚಿತ ವಾಗಿರುತ್ತದೆ. ಹೌದು ನಾಗೇಂದ್ರ ಅರಸ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸೂಪರ್ ಹಿಟ್ ಚಿತ್ರ ನವಗ್ರಹ ಚಿತ್ರದಲ್ಲಿ ಶೆಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಅವರು ಕನ್ನಡ ಚಿತ್ರರಂಗದಲ್ಲಿ ಈಗ ಸಂಕಲನಕಾರರಾಗಿ ಸಾಕಷ್ಟು ಹೆಸರನ್ನು ಗಳಿಸಿದ್ದಾರೆ. ಕನ್ನಡ ಚಿತ್ರರಂಗದ ಸೂಪರ್ ಹಿಟ್ ಚಿತ್ರಗಳಾದ ಗುನ್ನ ರಾಮಶಾಮಭಾಮ ಹೀಗೆ ಹಲವಾರು ಚಿತ್ರಗಳಲ್ಲಿ ಸಂಕಲನಕಾರರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಅದ್ಭುತ ಪ್ರತಿಭೆಯಾಗಿರುವ ನಾಗೇಂದ್ರ ಅರಸ್ ಅವರು ನಟನೆ ನಿರ್ದೇಶನ ಯಾವುದೇ ಕಾರ್ಯವನ್ನು ಆಗಲಿ ಸಂಪೂರ್ಣ ಪರಿಪೂರ್ಣವಾಗಿ ನಿರ್ವಹಿಸಬಲ್ಲ ಅಂತಹ ವ್ಯಕ್ತಿ. ಕನ್ನಡ ಚಿತ್ರರಂಗದಲ್ಲಿ ಅವರಿಗೆ ಇನ್ನಷ್ಟು ಅವಕಾಶ ದೊರೆಯಲಿ ಎಂದು ನಾವು ಹಾರೈಸೋಣ ಸ್ನೇಹಿತರೆ.

Get real time updates directly on you device, subscribe now.