ಸುರೇಶ್ ರೈನಾ ಬೆನ್ನಲ್ಲೇ ಜಾತಿ ಕಾರಣಕ್ಕೆ ಅಭಿಮಾನಿಗಳಿಂದ ಹುಗಿಸಿಕೊಳ್ಳುತ್ತಿರುವ ಮತ್ತೊಬ್ಬ ಭಾರತೀಯ ಕ್ರಿಕೇಟರ್ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸುರೇಶ್ ರೈನಾ ನಿವೃತ್ತಿಯ ನಂತರ ಬಹಳ ವಿವಾದಾತ್ಮಕ ಕ್ರಿಕೇಟರ್ ಆಗಿ ಬದಲಾಗಿದ್ದಾರೆ. ಈ ಹಿಂದೆ ವಿವಾದಾತ್ಮಕ ಕೋಚ್ ಗ್ರೇಗ್ ಚಾಪೆಲ್ ರನ್ನ ಮನತುಂಬಿ ಹೊಗಳಿದ್ದ ರೈನಾಗೆ ಅಭಿಮಾನಿಗಳು ಬಕೆಟ್ ರೈನಾ ಎಂದು ಟ್ರೋಲ್ ಮಾಡಿದ್ದರು. ಇತ್ತೀಚಿಗೆ ತಮಿಳುನಾಡು ಪ್ರೀಮಿಯರ್ ಲೀಗ್ ಕ್ರಿಕೇಟ್ ನಲ್ಲಿ ಕಾಮೆಂಟರಿ ಮಾಡುವಾಗ ನಾನು ಬ್ರಾಹ್ಮಣನಾಗಿ ಕಾರಣ ನನಗೆ ಚೆನ್ನೈ ಸಂಸ್ಕೃತಿ ಬಹುಬೇಗ ಹೊಂದಿ ಕೊಂಡಿತು. ಆ ಕಾರಣಕ್ಕೆ ನಾನು ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ಬಹು ವರ್ಷಗಳ ಕಾಲ ಆಡಲು ಸಾಧ್ಯವಾಯಿತು ಎಂಬ ಹೇಳಿಕೆ ನೀಡಿದ್ದರು.

ಆದರೇ ಇದೇ ಸೋಶಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ವೈರಲ್ ಆಯಿತು. ನಾವು ನಿಮ್ಮ ಜಾತಿ ನೋಡಿ ನಿಮ್ಮ ಅಭಿಮಾನಿಗಳಾಗಿಲ್ಲ, ನಿಮ್ಮ ಕ್ರಿಕೇಟ್ ಕೌಶಲ್ಯಗಳನ್ನ ನೋಡಿ ನಿಮ್ಮ ಅಭಿಮಾನಿಗಳಾಗಿದ್ದೆವೆ ಎಂದು ಹಲವಾರು ಟ್ರೋಲ್ ಗಳು ಶುರುವಾಗಿವೆ. ಅದಲ್ಲದೇ ಟ್ವಿಟರ್ ನಲ್ಲಿ ರೈನಾ ಪರವಾಗಿ #ISupportSureshRaina ಎಂಬ ಹ್ಯಾಶ್ ಟ್ಯಾಗ್ ಸಹ ಟ್ರೆಂಡ್ ಆಗಿತ್ತು. ಇದನ್ನ ಗಮನಿಸಿದ ಭಾರತೀಯ ಕ್ರಿಕೇಟರ್ ರೈನಾ ನೆರವಿಗೆ ಆಗಮಿಸಿದ್ದರು. ಅಷ್ಟಕ್ಕೂ ಆ ಆಟಗಾರ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಬೇರಾರೂ ಅಲ್ಲ, ಸದಾ ಸಾಮಾಜಿಕ ಜಾಲತಾಣಗಳಾದ ಟ್ವಿಟರ್ , ಫೇಸ್ಬುಕ್ ಗಳಲ್ಲಿ ಸಕ್ರೀಯರಾಗಿರುವ ಆಲ್ ರೌಂಡರ್ ಸರ್ ರವೀಂದ್ರ ಜಡೇಜಾ.

ಗೆಳೆಯ ರೈನಾ ನೆರವಿಗೆ ಆಗಮಿಸಿದ್ದ ರವೀಂದ್ರ ಜಡೇಜಾ ರಜಪೂತ್ ಬಾಯ್ ಫಾರೆವರ್ ಎಂದು ಟ್ವೀಟ್ ಮಾಡಿದ್ದರು. ಈಗ ಆ ಟ್ವೀಟ್ ಸಹ ಟ್ವೀಟಿಗರ ಕೆಂಗಣ್ಣಿಗೆ ಬಿದ್ದಿದ್ದು #RAJAPUTBOY ಅಂತ ಹ್ಯಾಷ್ ಟ್ಯಾಗ್ ಎಂಬ ಟ್ವಿಟರ್ ಸಹ ಸದ್ಯ ಟ್ರೆಂಡ್ ಆಗಿದೆ. ದೇಶಕ್ಕಾಗಿ ಆಡುವ ಕ್ರಿಕೇಟಿಗರು ಈ ಜಾತಿ ಹಾಗೂ ಧರ್ಮಗಳನ್ನ ಏಕೆ ಅಡ್ಡತರುತ್ತಾರೆ ಎಂದು ಹಲವರು ಪ್ರಶ್ನಿಸಿದ್ದಾರೆ. ಮುಂದುವರೆದು ನಾವು ನಿಮ್ಮನ್ನ ಭಾರತೀಯರು ಎಂದು ಪ್ರೀತಿಸಿದ್ದೆವು, ನೀವು ಜಾತಿಪ್ರಿಯರು ಎಂದು ಈಗ ತಿಳಿಯಿತು ಎಂದು ಹೇಳಿದ್ದಾರೆ. ಈ ಮಧ್ಯೆ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾಗೆ ಬೆಂಬಲ ಸೂಚಿಸಿರುವ ಕೆಲವರು, ಭಾರತದ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರಕ್ಕೂ ಸ್ವಲ್ಪ ಬೆಲೆ ಕೊಡೋಣ. ಅವರೇನು ಮಹಾಪರಾಧ ಮಾಡಿಲ್ಲ. ಅವರ ಜಾತಿಯನ್ನ ಹೇಳಿಕೊಂಡಿದ್ದಾರೆ, ಅದರಲ್ಲೇನು ತಪ್ಪಿದೆ ಎಂದು ಪ್ರಶ್ನಿಸಿದ್ದಾರೆ. ನೀವು ಅಭಿಮಾನಿಗಳಾಗಿರಬಹುದು, ಆದರೇ ಅವರ ವೈಯುಕ್ತಿಕ ಬದುಕಿಗೂ ಬೆಲೆ ಕೊಡಿ ಎಂದು ಹೇಳಿದ್ದಾರೆ. ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾರವರ ಈ ಹೇಳಿಕೆಗಳು ಹಾಗೂ ಅದರಿಂದ ಉಂಟಾಗಿರುವ ವಿವಾದಗಳ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.