ಕುರುಬನ ರಾಣಿ ವಿವಾಹವಾಗದೆ ಉಳಿಯಲು ಕಾರಣ ಈ ನಟ? ನಟಿ ನಗ್ಮಾಗೆ ಇದ್ದ ಬಾಯ್ ಫ್ರೆಂಡ್ ಎಷ್ಟು ಗೊತ್ತಾ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಅದೆಷ್ಟೋ ನಟಿಯರು ತಮ್ಮ ನಟನೆ ಹಾಗೂ ಮೋಹಕ ಸೌಂದರ್ಯದ ಮೂಲಕ ಇಂದಿಗೂ ಕೂಡಾ ಚಿತ್ರರಂಗದಲ್ಲಿ ಸಕ್ರಿಯರಾಗಿರದಿದ್ದರು ಸಹ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಕೂಡ ಹಚ್ಚಹಸಿರಾಗಿ ಉಳಿದುಕೊಂಡಿದ್ದಾರೆ. ಅಂಥವರಲ್ಲಿ ಒಬ್ಬರು ಅಗ್ರಗಣ್ಯ ರಾಗಿ ನಿಲ್ಲುತ್ತಾರೆ ಅವರ ಕುರಿತಂತೆ ನಾವು ಇಂದು ಮಾತನಾಡಲು ಹೊರಟಿದ್ದೇವೆ.
ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಭಾರತೀಯ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾದ ನಗ್ಮಾ ರವರ ಕುರಿತಂತೆ. ಹೌದು ಸ್ನೇಹಿತರೆ ಪಂಚ ಭಾಷೆಗಳಲ್ಲಿ ಅಲ್ಲಲ್ಲ ಅದಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಕೂಡ ನಟಿಸಿ ಕೋಟ್ಯಾಂತರ ಪ್ರೇಕ್ಷಕರ ನೆಚ್ಚಿನ ನಟಿಯಾಗಿದ್ದರು ಅವರು ಅಂದಿನ ಕಾಲದಲ್ಲಿ ಬಹುಬೇಡಿಕೆ ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯಾಗಿ ಮಿಂಚಿದ್ದರು.
ಹಿಂದಿ ತಮಿಳು ತೆಲುಗು ಕನ್ನಡ ಮರಾಠಿ ಭೋಜಪುರಿ ಮಲಯಾಳಂ ಹೀಗೆ ಹಲವಾರು ಭಾಷೆಗಳಲ್ಲಿ ಟಾಪ್ ನಟರೊಂದಿಗೆ ನಟಿಸಿ ಟಾಪ್ ನಟಿಯಾಗಿ ಮೆರೆದಿದ್ದಂತಹ ಸುಂದರಿ ನಗ್ಮಾ. ಈ ಟಾಪ್ ನಟರಲ್ಲಿ ಅಮಿತಾ ಬಚ್ಚನ್ ಶಿವರಾಜ್ ಕುಮಾರ್ ವಿಷ್ಣುವರ್ಧನ್ ಚಿರಂಜೀವಿ ಸಲ್ಮಾನ್ ಖಾನ್ ರಜನಿಕಾಂತ್ ಹೀಗೆ ಹಲವಾರು ಸ್ಟಾರ್ ನಟರುಗಳು ಕಾಣಸಿಗುತ್ತಾರೆ. 90ರ ದಶಕದಲ್ಲಿ ನಗ್ಮಾ ರವರನ್ನು ಮೀರಿಸುವ ನಟಿ ಇಡೀ ಭಾರತೀಯ ಚಿತ್ರರಂಗದಲ್ಲೇ ಇರಲಿಲ್ಲ. ಇವರು ನಟಿಸಿದ ಪ್ರತಿ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಭರ್ಜರಿ ಯಶಸ್ಸನ್ನು ಕಾಣುತ್ತಿತ್ತು.
ಅದಕ್ಕಾಗಿ ಇವರು ನಿರ್ಮಾಪಕರು ನಿರ್ದೇಶಕರ ಮೊದಲ ಆಯ್ಕೆಯ ನಟಿಯಾಗಿ ಇರುತ್ತಿದ್ದರು. ಆದರೆ ಇಷ್ಟೊಂದು ಯಶಸ್ವಿ ಜೀವನವನ್ನು ನಗ್ಮಾ ರವರು ನಡೆಸಿದ್ದರು ಕೂಡ ಅವರ ಜೀವನ ಅಪೂರ್ಣವಾಗಿಯೇ ಇಂದಿಗೂ ಕೂಡ ಉಳಿದುಕೊಂಡಿದೆ. ಹೌದು ಸ್ನೇಹಿತರೆ ಅದೇನೆಂದರೆ ನಗ್ಮಾ ರವರು ಇಂದಿಗೂ ಕೂಡ 46 ವರ್ಷ ವಯಸ್ಸಾದರೂ ಕೂಡ ಮದುವೆಯಾಗಿಲ್ಲ. ಹೌದು ಸ್ನೇಹಿತರೆ ಈ ಕುರಿತಂತೆ ನಿಮಗೆ ಯಾಕೆಂದು ಸಂಪೂರ್ಣ ವಿವರವಾಗಿ ಹೇಳುತ್ತೇವೆ.
90ರ ದಶಕದಲ್ಲಿ ಭಾರತ ಚಿತ್ರರಂಗದಾದ್ಯಂತ ಮಿಂಚಿದ್ದ ಮೋಹಕ ನಟಿ ಕನ್ನಡ ಚಿತ್ರರಂಗದಲ್ಲಿ ಕುರುಬನ ರಾಣಿ ಎಂದೇ ಖ್ಯಾತರಾಗಿದ್ದ ನಗರ ಅವರು ಇಂದಿಗೂ ಕೂಡ ಮದುವೆಯಾಗದೆ ಏಕಾಂಗಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೇನೆಂದರೆ ನಗ್ಮಾ ರವರು ತಮಿಳಿನ ಖ್ಯಾತ ನಟ ಶರತ್ ಕುಮಾರ್ ಅವರೊಂದಿಗೆ ಪ್ರೇಮ ಸಂಬಂಧವನ್ನು ಹೊಂದಿದ್ದರು. ಇವರ ಜೋಡಿ ಕೂಡಾ ಸಾಕಷ್ಟು ಅನ್ಯೋನ್ಯವಾಗಿತ್ತು ಎಲ್ಲರಿಗೂ ಮುಂದಿನ ದಿನಗಳಲ್ಲಿ ವಿವಾಹವಾಗುತ್ತಾರೆ ಎಂಬುದಾಗಿ ಅಂದುಕೊಂಡಿದ್ದರು.
ಆದರೆ ಶರತ್ ಕುಮಾರ್ ಅವರೊಂದಿಗೆ ಇವರ ಭಿನ್ನಾಭಿಪ್ರಾಯಗಳು ಇವರನ್ನು ಒಬ್ಬರಿಂದ ಒಬ್ಬರನ್ನು ದೂರ ಮಾಡಿತು. ಮಾತ್ರವಲ್ಲದೆ ಶರತ್ ಕುಮಾರ್ ಅವರು ನಟಿ ರಾಧಿಕಾ ರವರನ್ನು ಮದುವೆಯಾಗಿ ಬಿಟ್ಟರು. ಇದರಿಂದಾಗಿಯೇ ನಗ್ಮಾ ರವರು ಮದುವೆಯಾಗದೆ ಹಾಗೇ ಉಳಿದುಕೊಂಡು ಬಿಟ್ಟರು. ಕೆಲಕಾಲ ಇವರ ಹೆಸರು ಭಾರತ ಕ್ರಿಕೆಟ್ ತಂಡದ ಕಪ್ತಾನ ರಾಗಿದ್ದ ಸೌರವ್ ಗಂಗೂಲಿ ಅವರ ಜೊತೆಗೆ ತಳುಕು ಹಾಕಿಕೊಂಡಿದ್ದು.
ಇದಕ್ಕೆ ಪ್ರತಿಕ್ರಿಯಿಸಿದ ಸೌರವ್ ಗಂಗೂಲಿ ಹಾಗೂ ನಗ್ಮಾ ರವರು ನಾವಿಬ್ಬರೂ ಕೇವಲ ಸ್ನೇಹಿತರಷ್ಟೇ ಬೇರೆ ಏನು ಇಲ್ಲ ಎಂಬುದಾಗಿ ಈ ವಿಷಯವನ್ನು ಮುಚ್ಚಿ ಹಾಕಿದ್ದರು. ಇಂದಿಗೂ ಕೂಡ ಮದುವೆ ಆಗದಿದ್ದರೂ ಸಹ ನಗ್ಮಾ ರವರು ಚಿರ ಯುವತಿಯಂತೆ ಕಾಣುತ್ತಿದ್ದು ಸುಖ ಶಾಂತಿಯಿಂದ ಜೀವನವನ್ನು ಚಿತ್ರರಂಗದಿಂದ ದೂರ ಆಗಿ ಕಳೆಯುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.