ಎಬಿ ಡಿ ವಿಲಿಯರ್ಸ್ ರವರ ಮೇಲೆ ಗಂಭೀರ ಆರೋಪ ಮಾಡಿದ ಸೌತ್ ಆಫ್ರಿಕಾ ಆಟಗಾರ ಯಾರು ಮತ್ತು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಅಬ್ರಹಾಂ ಡಿ ವಿಲಿಯರ್ಸ್. ವಿಶ್ವ ಕಂಡ ಶ್ರೇಷ್ಠ ಕ್ರಿಕೇಟ್ ಆಟಗಾರ. ಈ ಆಟಗಾರನಿಗೆ ಸೌತ್ ಆಫ್ರಿಕಾದಲ್ಲಿರೋ ಅಭಿಮಾನಿಗಳಿಗಿಂತ ಕರ್ನಾಟಕದಲ್ಲಿ ಜಾಸ್ತಿ ಅಭಿಮಾನಿಗಳು ಎನ್ನಬಹುದು. ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡನ್ನು ಭಾರಿಸುವ ವಿಶೇಷ ಸಾಮರ್ಥ್ಯದಿಂದ ಈ ಆಟಗಾರನಿಗೆ ಅಭಿಮಾನಿಗಳು ಪ್ರೀತಿಯಿಂದ ಮಿಸ್ಟರ್ 360 ಡಿಗ್ರಿ, ಆಪತ್ಭಾಂಧವ ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಈಗ ಅಂತಹ ಸವ್ಯಸಾಚಿ ಎಬಿಡಿ ಬಗ್ಗೆ ಒಂದು ಗುರುತರ ಆರೋಪ ಕೇಳಿ ಬಂದಿದೆ.

ಎಬಿ ಡಿ ವಿಲಿಯರ್ಸ್ ಒಬ್ಬ ವಿಕೇಟ್ ಕೀಪರ್ ಬ್ಯಾಟ್ಸಮನ್. 2004 ರಲ್ಲಿ ಸೌತ್ ಆಫ್ರಿಕಾ ತಂಡದ ಪರ ಪದಾರ್ಪಣೆಗೈದ ಎಬಿಡಿ ನಂತರ ಹಿಂತಿರುಗಿ ನೋಡಲೇ ಇಲ್ಲ. ಮಾರ್ಕ್ ಬೌಚರ್ ನಿವೃತ್ತಿಯ ನಂತರ ಸೌತ್ ಆಫ್ರಿಕಾ ತಂಡದ ಖಾಯಂ ವಿಕೇಟ್ ಕೀಪರ್ ಆಗಿ ಸೇವೆ ಸಲ್ಲಿಸಿದರು. ಈ ಮಧ್ಯೆ ಸೌತ್ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಮೇಲೆ ಒಂದು ಗುರುತರ ಆರೋಪ ಮಾಡಿದ್ದಾರೆ. ಹೌದು ಸೌತ್ ಆಫ್ರಿಕಾ ತಂಡದ ಮಾಜಿ ವಿಕೇಟ್ ಕೀಪರ್ ಥಮಿ ತ್ಸೊಲೆಕಿಲೆ, ಎಬಿಡಿ ನನ್ನ ಅವಕಾಶವನ್ನ ಕಿತ್ತುಕೊಂಡರು ಎಂಬ ಗಂಭೀರ ಆರೋಪ ಮಾಡಿದ್ದಾರೆ.

ತಂಡದಲ್ಲಿ ಮಾರ್ಕ್ ಬೌಚರ್ ಇರುವ ತನಕವೂ ಎಬಿ ಡಿ ವಿಲಿಯರ್ಸ್ ವಿಕೇಟ್ ಕೀಪಿಂಗ್ ಮಾಡಲು ಅಷ್ಟೇನೂ ಆಸಕ್ತಿ ತೋರುತ್ತಿರಲಿಲ್ಲ. ಆದರೇ ನಾನು ತಂಡಕ್ಕೆ ಬಂದಾಗ ಮಾತ್ರ , ತಾನೇ ವಿಕೇಟ್ ಕೀಪಿಂಗ್ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಹೀಗಾಗಿ ನನ್ನ ಅಂತರಾಷ್ಟ್ರೀಯ ಕ್ರಿಕೇಟ್ ವೃತ್ತಿ ಜೀವನ ಕೊನೆಯಾಗಬೇಕಾಯಿತು. ಮಾರ್ಕ್ ಬೌಚರ್ ಸ್ಥಾನಕ್ಕೆ ನನ್ನನ್ನ ಬ್ಯಾಕ್ ಅಪ್ ವಿಕೇಟ್ ಕೀಪರ್ ಆಗಿ ಸೇರಿಸಿಕೊಳ್ಳಲಾಗಿತ್ತು. ಆದರೇ ಎಬಿ ಡಿ ವಿಲಿಯರ್ಸ್ ತಾನೇ ತಂಡದ ವಿಕೇಟ್ ಕೀಪಿಂಗ್ ಜವಾಬ್ದಾರಿ ಹೊರುತ್ತೇನೆ ಎಂಬ ಕಾರಣಕ್ಕೆ ನನ್ನ ಅವಕಾಶ ಹಾಳಾಯಿತು. 2004ರಲ್ಲಿ ಎಬಿಡಿ ಇಂಗ್ಲೆಂಡ್ ವಿರುದ್ದ ಟೆಸ್ಟ್ ಕ್ರಿಕೇಟ್ ಗೆ ಪದಾರ್ಪಣೆ ಮಾಡಿದರು. ಅದು ಅವರ ಮೊದಲ ಪಂದ್ಯವಾಯಿತು. ಆದರೇ ಅದೆ ನನಗೆ ಕೊನೆಯ ಪಂದ್ಯವಾಯಿತು ಎಂದು ಬೇಸರದ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ತಂಡದಲ್ಲಿದ್ದ ಕಪ್ಪು ಬಣ್ಣದ ಆಟಗಾರರು ಈ ಕುರಿತು ಪ್ರಶ್ನೆ ಮಾಡಲಿಲ್ಲ. ನಾನು ದೇಶಿ ಕ್ರಿಕೇಟ್ ಲೀಗ್ ನಲ್ಲಿ ಹೆಚ್ಚು ರನ್ ಗಳಿಸಿದರೂ, ಎಬಿ ಡಿ ವಿಲಿಯರ್ಸ್ ಕೀಪಿಂಗ್ ಮಾಡುತ್ತಿದ್ದ ಕಾರಣಕ್ಕೆ ನನಗೆ ತಂಡದಲ್ಲಿ ಸ್ಥಾನ ಕೊನೆಗೂ ದೊರೆಯಲೇ ಇಲ್ಲ ಎಂದು 40 ವರ್ಷದ ಥಮಿ ತ್ಸೊಲೆಕಿಲೆ ಗಂಭೀರ ಆರೋಪ ಮಾಡಿದ್ದಾರೆ. ಥಮಿ ತ್ಸೊಲೆಕಿಲೆ ಆರೋಪದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.