ಕೆ ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ರವರ ಸಂಬಂಧದ ಕುರಿತು ಷಾಕಿಂಗ್ ಹೇಳಿಕೆ ನೀಡಿದ ಸುನಿಲ್ ಶೆಟ್ಟಿ, ರಾಹುಲ್ ಗೆ ಬಾರಿ ಶಾಕ್. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಟೀಂ ಇಂಡಿಯಾದಲ್ಲಿ ಜೋಡಿ ಹಕ್ಕಿಗಳಿಗೇನು ಕೊರತೆಯಿಲ್ಲ. ಈಗ ಕೋರೋನಾ ಕಾರಣ ಬಿಸಿಸಿಐ ಈಗಲಂತೂ ತನ್ನ ಕುಟುಂಬ ಹಾಗೂ ಪ್ರೇಯಸಿ ಜೊತೆಗೆ ಪ್ರವಾಸ ಹೋಗಲು ಅವಕಾಶ ನೀಡಿದೆ. ಬಾಲಿವುಡ್ ಗೂ ಹಾಗೂ ಕ್ರಿಕೇಟ್ ಗಂತೂ ಒಂದು ರೀತಿಯ ಅವಿನಾಭಾವ ಸಂಭಂಧ. ಕ್ರಿಕೇಟ್ ನಲ್ಲಿ ಮಿಂಚಿದವರಾಗಲಿ ಅಥವಾ ಬಾಲಿವುಡ್ ನಲ್ಲಿ ಮಿಂಚಿದವರಾಗಲಿ, ಒಂದಿಲ್ಲ ಒಂದು ರೀತಿಯಲ್ಲಿ ಅವರ ಹೆಸರುಗಳು ಗಾಸಿಪ್ ಕಾಲಂನಲ್ಲಿ ಬಂದೇ ಬರುತ್ತದೆ.

ಈ ಸಾಲಿಗೆ ಸೇರ್ಪಡೆಯಾಗಿರುವ ಬ್ಯಾಟ್ಸಮನ್ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ಬೆಡಗಿ ಅಥಿಯಾ ಶೆಟ್ಟಿ ಎಂಬ ಜೋಡಿಹಕ್ಕಿಗಳು ಡೇಟಿಂಗ್ ನಡೆಸುತ್ತಿರುವುದು ಈಗ ಜಗಜ್ಜಾಹೀರಾಗಿದೆ. ಇತ್ತಿಚೆಗಷ್ಟೇ ಐಷಾರಾಮಿ ಜಾಹೀರಾತಿನಲ್ಲಿ ಈ ಇಬ್ಬರೂ ಜೋಡಿಯಾಗಿ ನಟಿಸಿ ಎಲ್ಲರ ಗಮನಸೆಳೆದಿದ್ದರು. ಈಗ ಸದ್ಯ ಇಂಗ್ಲೇಂಡ್ ಪ್ರವಾಸದಲ್ಲಿರುವ ಕೆ.ಎಲ್.ರಾಹುಲ್ ಜೊತೆ ಅವರ ಗೆಳತಿ ಅಥಿಯಾ ಶೆಟ್ಟಿ ಸಹ ಲಂಡನ್ ಗೆ ತೆರಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಈ ಬಗ್ಗೆ ಮೊದಲ ಭಾರಿ ಮೌನ ಮುರಿದಿರುವ ಅಥಿಯಾ ಶೆಟ್ಟಿ ತಂದೆ, ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ ಈ ವಿಷಯವನ್ನ ಸಂಪೂರ್ಣ ಅಲ್ಲಗಳೆದಿದ್ದಾರೆ. ಅಥಿಯಾ ಶೆಟ್ಟಿ ಸಹ ಬಾಲಿವುಡ್ ನಲ್ಲಿ ತನ್ನ ನಟನೆಯಿಂದ ಗುರುತಿಸಿಕೊಂಡಿದ್ದಾರೆ. ಹೀರೋ ಸೇರಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆ.ಎಲ್.ರಾಹುಲ್ ಅವರ ಉತ್ತಮ ಗೆಳೆಯರಲ್ಲೊಬ್ಬ ಅಷ್ಟೇ. ಆದರೇ ಅಥಿಯಾ ಶೆಟ್ಟಿ ಅವರ ಜೊತೆ ಇಂಗ್ಲೆಂಡ್ ತೆರಳಿಲ್ಲ. ಅಥಿಯಾ ಶೆಟ್ಟಿ ಅವರ ಸಹೋದರನಾದ ಅಹಾನ್ ಶೆಟ್ಟಿ ಜೊತೆಗೆ ಲಂಡನ್ ಗೆ ತೆರಳಿದ್ದಾರೆ ಎಂದು ಸುನೀಲ್ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ.

ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಗೆಂದು ಭಾರತ ತಂಡ ಇಂಗ್ಲೆಂಡ್ ಗೆ ತೆರಳಿತ್ತು. ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಕ್ಕೆ ಅಂತಿಮ 15 ರೊಳಗೆ ಸ್ಥಾನ ಪಡೆಯದ ಆಟಗಾರರಿಗೆ ಬಯೋಬಬಲ್ ನಿಂದ ವಿನಾಯಿತಿ ನೀಡಲಾಗಿತ್ತು. ಆಗ ಹೊರಬಂದ ಕೆ.ಎಲ್.ರಾಹುಲ್ ಜೊತೆ ಲಂಡನ್ ನ ಪ್ರವಾಸಿ ಸ್ಥಳಗಳಲ್ಲಿ ಗೆಳತಿ ಅಥಿಯಾ ಶೆಟ್ಟಿ ಓಡಾಡಿದ್ದು ಬಹಳಷ್ಟು ಸುದ್ದಿಯಾಗಿತ್ತು. ಸುನೀಲ್ ಶೆಟ್ಟಿಯವರ ಅನಿಸಿಕೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.