ಮೂರು ಮದುವೆಯಾಗಿರುವ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಹಾಗೂ ನಟಿಯರು ಯಾರ್ಯಾರು ಗೊತ್ತೇ?? ಊಹಿಸದ ಹೆಸರುಗಳು ಲಿಸ್ಟಿನಲ್ಲಿ.

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಗೆ ಹೋಲಿಸಿದರೆ ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಗಾಸಿಪ್ ಗ್ರಾಮ ಹಾಗೂ ನಟ-ನಟಿಯರ ಸಾಂಸಾರಿಕ ತಾಪತ್ರಯಗಳು ಸ್ವಲ್ಪ ಕಡಿಮೆಯೇ. ಆದರೆ ಅದಕ್ಕಿಂತ ಕಮ್ಮಿಯಾಗಿದ್ದರೂ ಸಹ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ಇಂತಹ ಸಮಸ್ಯೆಗಳು ಇದ್ದಿದ್ದೆ. ಇಂದಿನ ವಿಷಯದಲ್ಲಿ ನಾವು ಮಾತನಾಡಲು ಹೊರಟಿರುವುದು ಏನೆಂದರೆ ಕೆಲ ನಟ ಹಾಗೂ ನಟಿಯರ ಮದುವೆಯ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಮದುವೆ ಎಂದರೆ ಕೇವಲ ಮಾಮೂಲಿ ಮದುವೆ ಅಂತ ಅನ್ಕೋಬೇಡಿ ನಾವು ಮಾತನಾಡಲು ಹೊರಟಿರುವುದು ಮೂರು ಮದುವೆಯಾಗಿರುವ ನಟ ಹಾಗೂ ನಟಿಮಣಿಯರ ಕುರಿತಂತೆ. ಹೌದು ಸ್ನೇಹಿತರೆ ಇಂದಿನ ವಿಷಯದಲ್ಲಿ ಮೂರು ವಿವಾಹವಾಗಿರುವ ನಟ ಹಾಗೂ ನಟಿಯರ ಕುರಿತಂತೆ ಹೇಳಲು ಹೊರಟಿದ್ದೇವೆ ಬನ್ನಿ ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇವೆ ಈ ಕುರಿತಂತೆ.

ರಾಧಿಕಾ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯಾಗಿರುವ ರಾಧಿಕಾ ರವರು ಮೊದಲು ಪ್ರತಾಪ್ ಕೆ ಪೋತನ್ ಎಂಬವರನ್ನು ವಿವಾಹವಾಗಿದ್ದರು. ನಂತರ ಇವರಿಬ್ಬರೂ 1996 ರಲ್ಲಿ ಪರಸ್ಪರ ವಿವಾಹ ವಿಚ್ಛೇದನವನ್ನು ಪಡೆದುಕೊಂಡರು. ನಂತರ ರಿಚರ್ಡ್ ಹರ್ಡಿ ಎಂಬುವವರನ್ನು ಮದುವೆಯಾಗಿ ಕೆಲವೇ ವರ್ಷಗಳ ನಂತರ ಅವರಿಗೂ ಕೂಡ ವಿವಾಹ ವಿಚ್ಛೇದನವನ್ನು ನೀಡಿದರು. ನಂತರ ಖ್ಯಾತ ಚಿತ್ರನಟ ಶರತ್ ಕುಮಾರ್ ರವರನ್ನು ವಿವಾಹವಾದರು. ಸಿಂಗಲ್ ಅವರಿಬ್ಬರು ಜೊತೆಯಾಗಿ ಶಾಂತಿಯಾಗಿ ಸಂಸಾರ ನಡೆಸಿಕೊಂಡಿದ್ದಾರೆ.

ಲಕ್ಷ್ಮಿ ಬಹುಭಾಷಾ ನಟಿಯಾಗಿರುವ ಲಕ್ಷ್ಮಿಯವರು ಮೊದಲು ಭಾಸ್ಕರ್ ಎಂಬುವರನ್ನು ವಿವಾಹವಾದರು ನಂತರ ಇವರಿಗೆ ವಿವಾಹ ವಿಚ್ಛೇದನವನ್ನು ನೀಡಿದರು. ದಾಂಪತ್ಯದಲ್ಲಿ ಅವರಿಗೆ ಐಶ್ವರ್ಯ ಎಂಬ ಹೆಣ್ಣುಮಗಳು ಕೂಡ ಜನಿಸಿದ್ದಳು. ನಂತರ ಮೋಹನ್ ಎಂಬುವವರನ್ನು ಮದುವೆಯಾದರು. ಆದರೆ ನಿರೀಕ್ಷೆಯಂತೆ ಇದು ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಇವರಿಂದ ದೂರ ಆದ ನಂತರ ನಟ ಹಾಗೂ ನಿರ್ದೇಶಕ ರಾಗಿರುವ ಕೆಎಸ್ ಚಂದ್ರನ್ ಎಂಬುವರನ್ನು ಕೂಡ ಮದುವೆಯಾರು.

ಊರ್ವಶಿ ನಟ ಮನೋಜ್ ಕೆ ಜಯನ್ ಎಂಬುವರನ್ನು ಮೊದಲಿಗೆ 2000ರಲ್ಲಿ ಮದುವೆ ಆದಂತಹ ಬಹುಭಾಷಾ ನಟಿ ಪೂರ್ವಶಿ ಯವರು ನಂತರದ ಕೆಲವು ವರ್ಷಗಳಲ್ಲಿ ಅವರಿಗೂ ಕೂಡ ವಿವಾಹ ವಿಚ್ಛೇದನ ನೀಡಿದರು. ಇದಾದ ನಂತರ ಕೆಲವೇ ವರ್ಷಗಳಲ್ಲಿ ಚೆನ್ನೈ ಮೂಲದ ಬಿಲ್ಡರ್ ಶಿವಪ್ರಸಾದ್ ಎಂಬುವರನ್ನು ವಿವಾಹವಾದರು. ಈ ಮದುವೆಯಿಂದಲೂ ಕೂಡ ಊರ್ವಶಿ ಅವರು ಒಂದು ಗಂಡು ಮಗು ಪಡೆದಿದ್ದಾರೆ.

ಪವನ್ ಕಲ್ಯಾಣ್ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಎಂದೇ ಖ್ಯಾತರಾಗಿರುವ ಪವನ್ ಕಲ್ಯಾಣ್ ರವರು ಕೂಡ ಈ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಮೊದಲಿಗೆ 1997 ರಲ್ಲಿ ನಂದಿನಿ ಎಂಬವರನ್ನು ಮದುವೆಯಾದರು. ಆದರೆ ಈ ಮದುವೆಸಂಬಂಧ 2007ಕ್ಕೆ ವಿವಾಹ ವಿಚ್ಛೇದನ ದೊಂದಿಗೆ ಅಂತ್ಯವಾಯಿತು. ನಂತರ ಪವನ್ ಕಲ್ಯಾಣ್ ರವರು ನಟಿ ರೇಣು ದೇಸಾಯಿ ಅವರನ್ನು ಪ್ರೀತಿಸಿ ಮದುವೆಯಾದರು ಹಾಗೂ ಈ ದಾಂಪತ್ಯದಲ್ಲಿ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಜನಿಸಿತು. ಆದರೆ ಈ ದಾಂಪತ್ಯ ಕೂಡ 2013 ಕ್ಕೆ ಅಂತ್ಯವಾಗಿ ಮೂರನೇ ವಿವಾಹವಾದರು.

ಶರತ್ ಬಾಬು ದಕ್ಷಿಣ ಭಾರತದ ಖ್ಯಾತ ನಟ ಶರತ್ ಬಾಬು ರವರು ಜಾತ ನಟಿ ರಮಪ್ರಭ ರವರನ್ನು 1981 ರಲ್ಲಿ ವಿವಾಹವಾದರು. ನಂತರ ಇವರೊಂದಿಗೆ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಸ್ನೇಹಲತಾ ನಂಬಿಯಾರ್ ಎಂಬುವವರನ್ನು ಮದುವೆಯಾದರು. ಇದಾದ ನಂತರ ಕೆಲವು ಸುದ್ದಿಮಾಧ್ಯಮಗಳಲ್ಲಿ ಅವರೇ ಹೇಳಿರುವಂತೆ ಅವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಈಗ ಬೇರೆಯವರೊಂದಿಗೆ ಲಿವಿಂಗ್ ಟುಗೆಗೆದರ್ ರೆಲೇಶನ್ಶಿಪ್ ನಲ್ಲಿ ಇದ್ದೀನಿ ಎಂಬುದಾಗಿ ಹೇಳಿಕೊಂಡಿದ್ದರು.

ಜೆಮಿನಿ ಗಣೇಶನ್ ತಮಿಳು ಚಿತ್ರರಂಗದ ಖ್ಯಾತ ನಟ ಜೆಮಿನಿ ಗಣೇಶನ್ ತಮ್ಮ 19 ನೇ ವಯಸ್ಸಿನಲ್ಲಿ ಅಲಮೇಲು ಎಂಬುವರನ್ನು ಮದುವೆಯಾಗಿದ್ದರು. ಇದಾದನಂತರ ಪುಷ್ಪವಲ್ಲಿ ಎಂಬವರನ್ನು ಮದುವೆಯಾದರು ನಂತರ ತೆಲುಗು ಚಿತ್ರರಂಗದ ಖ್ಯಾತ ನಟಿಯಾಗಿದ್ದ ಸಾವಿತ್ರಿ ಅವರನ್ನು ಕೂಡ ವಿವಾಹವಾಗಿ ಮಕ್ಕಳನ್ನು ಪಡೆದರು.

ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗದ ದೈತ್ಯ ಪ್ರತಿಭೆಯಾಗಿದ್ದ ಟೈಗರ್ ಪ್ರಭಾಕರ್ ಅವರು ಮೊದಲು ಅಲ್ಫಾನ್ಸೋ ಎಂಬುವರನ್ನು ಮದುವೆಯಾಗಿದ್ದರು. ಈ ದಾಂಪತ್ಯದಲ್ಲಿ ಅವರಿಗೆ ವಿನೋದ್ ಪ್ರಭಾಕರ್ ಹಾಗೂ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. ಇದಾದ ನಂತರ ನಟಿ ಜಯಮಾಲ ರವರನ್ನು ಎರಡನೇ ಮದುವೆಯಾದರು ಜಾನಪದದಲ್ಲಿ ಸೌಂದರ್ಯ ಎಂಬ ಹೆಣ್ಣು ಮಗಳು ಹುಟ್ಟಿದಳು. ಇದಾದ ನಂತರ ಮಲಯಾಳಂನ ಖ್ಯಾತ ನಟಿ ಅಂಜು ಎಂಬುವವರನ್ನು ಮದುವೆಯಾದರು ದಾಂಪತ್ಯದಲ್ಲಿ ಇವರಿಗೆ ಅರ್ಜುನ್ ಎಂಬ ಗಂಡುಮಗ ಜನಿಸಿದನು.

ಕಮಲ್ ಹಾಸನ್ ಕನ್ನಡ ಚಿತ್ರರಂಗದಿಂದ ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿ ಈಗ ತಮಿಳು ಚಿತ್ರರಂಗದ ಮಹಾನ್ ಕಲಾವಿದರಾಗಿರುವ ಕಮಲ್ ಹಾಸನ್ ಅವರು ಮೊದಲಿಗೆ ನೃತ್ಯಕಲಾವಿದೆ ವಾಣಿ ಎಂಬವರನ್ನು ಮದುವೆಯಾದರು. ಹತ್ತು ವರ್ಷಗಳ ತುಂಬು ದಾಂಪತ್ಯದ ನಂತರ ಅವರಿಗೂ ಕೂಡ ವಿವಾಹ ವಿಚ್ಛೇದನವನ್ನು ನೀಡಿದರು. ನಂತರ 1988 ರಲ್ಲಿ ನಟಿ ಸಾರಿಕಾ ಎಂಬುವವರನ್ನು ವಿವಾಹವಾದರು. ಇವರ ಮಕ್ಕಳ ನಟಿ ಶ್ರುತಿ ಹಾಸನ್ ಆಗುವ ಅಕ್ಷರ ಹಾಸನ್. ಇದಾದ ನಂತರ ಆ ನಟಿ ಗೌತಮಿ ಅವರೊಂದಿಗೆ ಲಿವಿಂಗ್ ಟುಗೆದರ್ ರಿಲೇಷನ್ಶಿಪ್ ನಲ್ಲಿ ಕಮಲ್ ಹಾಸನ್ ಅವರು ಇದ್ದರು.

ನೋಡಿದ್ರಲ್ಲ ಸ್ನೇಹಿತರೆ ದಕ್ಷಿಣ ಭಾರತ ಚಿತ್ರರಂಗದ ಯಾವೆಲ್ಲಾ ಖ್ಯಾತ ನಟ ಹಾಗೂ ನಟಿಯರು ಎರಡಕ್ಕಿಂತ ಹೆಚ್ಚಿನ ಮದುವೆಯಾಗಿ ಸಂಸಾರ ನಡೆಸಿದ್ದರು ಎಂಬುವುದನ್ನು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.