ಹುಡುಕಿಕೊಂಡು ಹೋಗಿ ವಿಚ್ಚೇದನ ಪಡೆದುಕೊಂಡವರನ್ನೇ ಮದುವೆಯಾದ ಟಾಪ್ ನಟಿಯರು ಯಾರ್ಯಾರು ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಹಲವಾರು ಖ್ಯಾತ ನಟಿಮಣಿಯರು ಇದ್ದಾರೆ. ಒಮ್ಮೆ ಅವರು ಚಿತ್ರರಂಗದಲ್ಲಿ ಯಶಸ್ವಿಯಾದ ನಂತರ ಅವರ ಮದುವೆ ಕುರಿತಂತೆ ಸಾಕಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಪದೇಪದೇ ಪ್ರಸಾರವಾಗುತ್ತಿರುತ್ತದೆ ಹಾಗೂ ಚರ್ಚೆಯಲ್ಲಿ ಇರುತ್ತೆ. ಕೇವಲ ನಟಿಯರು ಮಾತ್ರವಲ್ಲ ನಟರ ಕುರಿತಂತೆ ಕೂಡ ಈ ವಿಷಯಗಳು ಸಾಕಷ್ಟು ಸುದ್ದಿಯಲ್ಲಿರುತ್ತದೆ.

ಆದರೆ ಇಂದಿನ ವಿಷಯದಲ್ಲಿ ನಾವು ಈಗಾಗಲೇ ಮದುವೆಯಾಗಿ ಇರುವಂತಹ ಗಂಡಸರನ್ನು ಮದುವೆಯಾಗಿರುವ ನಟಿಮಣಿಯರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಇದರಲ್ಲಿ ಕೆಲ ಹೆಸರುಗಳು ನಿಮಗೆ ಗೊತ್ತಿರಬಹುದು ಕೆಲ ಹೆಸರುಗಳು ನಿಮಗೆ ಆಶ್ಚರ್ಯವನ್ನು ಉಂಟು ಮಾಡಬಹುದು. ಬನ್ನಿ ಲಿಸ್ಟ್ ನಲ್ಲಿ ಯಾರಿದ್ದಾರೆ ಎಂದು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಶಿಲ್ಪ ಶೆಟ್ಟಿ ಮಂಗಳೂರು ಮೂಲದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇಂದಿಗೂ ಕೂಡ ತಮ್ಮ ಸೌಂದರ್ಯ ಹಾಗೂ ಫಿಟ್ನೆಸ್ ಗಾಗಿ ಹೆಸರಾಗಿದ್ದಾರೆ. ಇಂದಿಗೂ ಕೂಡ ನಲವತ್ತರ ಮೇಲೆ ವಯಸ್ಸಾಗಿದ್ದರೂ ಕೂಡ ಇಪ್ಪತ್ತರ ಹದಿಹರೆಯದ ಯುವತಿಯಂತೆ ಕಾಣಿಸುವ ಶಿಲ್ಪ ಶೆಟ್ಟಿ ರಾಜ್ ಕುಂದ್ರಾ ಎಂಬ ಯುಕೆ ಮೂಲದ ಬಿಸಿನೆಸ್ ಮ್ಯಾನ್ ನ್ನು ಮದುವೆಯಾದರು. ಇನ್ನು ರಾಜ್ ಕುಂದ್ರಾ ಈ ಹಿಂದೆಯೇ ಕವಿತ ಕುಂದ್ರ ಎನ್ನುವವರನ್ನು ಮದುವೆಯಾಗಿ ಒಬ್ಬ ಹೆಣ್ಣು ಮಗಳನ್ನು ಕೂಡ ಪಡೆದಿದ್ದರು. ರಾಜಕುಮಾರ ಕವಿತಾ ಕುಮಾರ್ ಅವರಿಗೆ ವಿವಾಹ ವಿಚ್ಛೇದನ ನೀಡುವ ಹೊತ್ತಿಗೆ ಅವರ ಮಗಳಿಗೆ ಎರಡು ತಿಂಗಳಾಗಿತ್ತು. ಈಗ ಶಿಲ್ಪಶೆಟ್ಟಿ ಯವರೊಂದಿಗೆ ಮದುವೆಯಾಗಿ ಈಗಾಗಲೇ ಒಂದು ಗಂಡು ಮಗುವನ್ನು ಕೂಡ ಹೊಂದಿದ್ದಾರೆ. ಮಾತ್ರವಲ್ಲದೆ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಎಂಬ ಕ್ರಿಕೆಟ್ ತಂಡದ ಮಾಲೀಕತ್ವವನ್ನು ಕೂಡ ಹೊಂದಿದ್ದಾರೆ.

ಹೇಮಮಾಲಿನಿ ಅಂದಿನ ಕಾಲದ ಹುಡುಗರ ಮನಸ್ಸಿನ ಗೆದ್ದಂತಹ ನಟಿ ಹೇಮಾಮಾಲಿನಿ. ಅಂದಿನ ಕಾಲದಲ್ಲಿ ಬಾಲಿವುಡ್ನಲ್ಲಿ ಡ್ರೀಮ್ ಗರ್ಲ್ ಎಂಬ ಖ್ಯಾತಿಯನ್ನು ಪಡೆದಂತಹ ನಟಿ. ಹೇಮಮಾಲಿನಿ ಅವರನ್ನು ಮದುವೆಯಾಗಲು ಅದೆಷ್ಟು ಸ್ಟಾರ್ ನಟರು ಹಾಗೂ ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದರು. ಆದರೆ ಹೇಮಮಾಲಿನಿ ಅವರ ಮನಸ್ಸು ಮಾತ್ರ ಬಿದ್ದಿದ್ದು ಸ್ಟಾರ್ ನಟ ಧರ್ಮೇಂದ್ರ ಅವರ ಮೇಲೆ. ಧರ್ಮೇಂದ್ರ ರವರು ಈಗಾಗಲೇ ಮದುವೆಯಾಗಿದ್ದರು. ಧರ್ಮೇಂದ್ರ ಹಾಗೂ ಹೇಮಾ ಮಾಲಿನಿಯವರ ನಡುವೆ ಪ್ರೇಮ ಸಂಬಂಧ ಗಾಢವಾಗಿ ಬೆಳೆದಿತ್ತು. ಆದರೆ ಇವರಿಬ್ಬರ ಮದುವೆಗೆ ಧರ್ಮೇಂದ್ರ ರವರ ಮೊದಲ ಹೆಂಡತಿಯ ತೊಡಕಾಗಿದ್ದರು. ಇದಕ್ಕಾಗಿ ಇವರಿಬ್ಬರೂ ತಮ್ಮ ಧರ್ಮವನ್ನು ಇಸ್ಲಾಂ ಧರ್ಮಕ್ಕೆ ಬದಲಾಯಿಸಿಕೊಂಡು 1980 ರಲ್ಲಿ ಮದುವೆಯಾಗಿ ಒಬ್ಬ ಹೆಣ್ಣು ಮಗಳನ್ನು ಕೂಡ ಪಡೆದು ಈಗ ಸುಖ ಶಾಂತಿಯಿಂದ ಸಂಸಾರ ನಡೆಸುತ್ತಿದ್ದಾರೆ.

ಶ್ರೀದೇವಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರಸಿದ್ಧಿಯನ್ನು ಪಡೆದು ನಂತರದ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ನಟಿ ಆಗಿ ಮೆರೆದವರು ಶ್ರೀದೇವಿ. ಆದರೆ ಅವರು ಮದುವೆಯಾಗಿದ್ದು ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರನ್ನು. ಬೋನಿಕಪೂರ್ ಅವರು ತಮ್ಮ ಮೊದಲನೇ ಹೆಂಡತಿ ಹಾಗೂ ಮನೆಯವರ ವಿರೋಧವಾಗಿ ಶ್ರೀದೇವಿ ಅವರನ್ನು ಮದುವೆಯಾಗಿದ್ದರು. ಇದೆಲ್ಲರ ವಿರುದ್ಧವಾಗಿ ಹೋರಾಡಿ ಕೊಂಡೆ ಶ್ರೀದೇವಿ ಅವರು ತಮ್ಮ ಸಂಸಾರವನ್ನು ನಡೆಸಿದ್ದರು. ಬೋನಿ ಕಪೂರ್ ಆಗುವ ಶ್ರೀದೇವಿ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇತ್ತೀಚಿನ ಕೆಲ ವರ್ಷಗಳ ಹಿಂದಷ್ಟೇ ಶ್ರೀದೇವಿಯವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಹಲೋಕ ವನ್ನು ತ್ಯಜಿಸಿದ್ದಾರೆ.

ರಾಣಿ ಮುಖರ್ಜಿ ಬಾಲಿವುಡ್ ಹೆಸರಾಂತ ನಟರಲ್ಲಿ ಒಬ್ಬರಾಗಿರುವ ರಾಣಿ ಮುಖರ್ಜಿ ಕೂಡ ಭಾರತ ದೇಶದ ನಂಬರ್ 1 ಶ್ರೀಮಂತ ಸಿನಿ ನಿರ್ಮಾಣ ಸಂಸ್ಥೆಯಾಗಿರುವ ಯಶ್ ರಾಜ್ ಫಿಲಂಸ್ ಸಂಸ್ಥೆಯ ಮಾಲೀಕರಾಗಿರುವ ಆದಿತ್ಯ ಚೋಪ್ರಾ ಅವರನ್ನು ಮದುವೆಯಾಗಿದ್ದರು. ಆದಿತ್ಯ ಚೋಪ್ರಾ ರವರು ಕೂಡ ಹಿಂದೆ ಮದುವೆಯಾಗಿ ಅವರಿಗೆ ವಿವಾಹ ವಿಚ್ಛೇದನ ನೀಡಿ ರಾಣಿ ಮುಖರ್ಜಿ ಅವರನ್ನು ವಿವಾಹವಾಗಿದ್ದರು.

ಕರೀನಾ ಕಪೂರ್ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ರವರ ಮದುವೆ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ತಮ್ಮ ಮೊದಲ ಹೆಂಡತಿಗೆ ವಿವಾಹ ವಿಚ್ಛೇದನ ನೀಡಿದ ನಂತರ ನಟ ಸೈಫ್ ಅಲಿ ಖಾನ್ ತಮ್ಮ ವಯಸ್ಸಿಗಿಂತಲೂ ಅರ್ಧದಷ್ಟು ಕಡಿಮೆ ವಹಿಸಿರುವ ನಟಿ ಕರೀನಾ ಕಪೂರ್ ಅವರನ್ನು ಮದುವೆಯಾಗಿದ್ದರು. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕಾಪ್ರಹಾರ ಗಳು ನಡೆದರೂ ಕೂಡ ಇಂದಿಗೂ ಈ ಜೋಡಿ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ.

ನೋಡಿದ್ರಲ್ಲ ಸ್ನೇಹಿತರೆ ಭಾರತೀಯ ಚಿತ್ರರಂಗದಲ್ಲಿ ಯಾವೆಲ್ಲ ನಟಿಯರು ಈಗಾಗಲೇ ಮದುವೆಯಾಗಿರುವ ಪುರುಷರನ್ನು ಮದುವೆಯಾಗಿದ್ದಾರೆ ಎಂಬುದನ್ನು ಈ ವಿಷಯದ ಮೂಲಕ ನಿಮಗೆ ಸಂಪೂರ್ಣ ವಿವರವಾಗಿ ತಿಳಿಸಿದ್ದೇವೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Get real time updates directly on you device, subscribe now.