ಕನ್ನಡದ ಬಿಗ್ ಬಾಸ್ ಕುರಿತು ಶಾಕ್ ಹೇಳಿಕೆ ನೀಡಿದ ಮಾಜಿ ಸ್ಪರ್ದಿ ಜಯಶ್ರೀ, ಶೋ ಸ್ಕ್ರಿಪ್ಟ್ ಆಗಿರುತ್ತಾ?? ಬಯಲಾಯಿತು ಅಸಲಿ ಕರಾಳ ಮುಖ.

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡದಲ್ಲಿ ಅತ್ಯಂತ ಚೆನ್ನಾಗಿ ನಡೆಯುತ್ತಿರೋ, ಅತೀ ಹೆಚ್ಚಿನ ಟಿ ಆರ್ ಪಿ ಗಳಿಸೋ ಮನೋರಂಜನಾ ಕಾರ್ಯಕ್ರಮ ಎಂದರೆ ಅದುವೇ ಬಿಗ್ ಬಾಸ್. ಇದುವರೆಗೆ 7 ಸೀಸನ್ ಗಳು ನಡೆದಿದ್ದು ಇದೀಗ 8 ನೇ ಸೀಸನ್ ನ 2ನೇ ಇನ್ನಿಂಗ್ಸ್ ಕೂಡ ನಡೆಯುತ್ತಿದೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪ್ರೇಕ್ಷಕ ವರ್ಗವೂ ಕೂಡ ಅಷ್ಟೇ ಹೆಚ್ಚಿನ ಸಂಖ್ಯೆಯಲ್ಲಿದೆ. ಬಿಗ್ ಬಾಸ್ ಮನೆಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳು, ಅಲ್ಲಿನ ಟಾಸ್ಕ್ ಗಳು ಸಾಕಷ್ಟು ಕುತೂಹಲವನ್ನೂ ಕೂಡ ಸೃಷ್ಟಿ ಮಾಡುತ್ತವೆ.

ಕಳೆದವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದವರು ನಿಧಿ ಸುಬ್ಬಯ್ಯ. ಆದ್ರೆ ಅವರ ಬದಲು ಚರ್ಕವರ್ತಿ ಹೋಗಬೇಕು, ಹೋಗುತ್ತಾರೆ ಎಂದು ಬಹಳ ಜನರಿಗೆ ಅನ್ನಿಸಿತ್ತು. ಆದರೆ ಜನರ ನಿರೀಕ್ಷೆ ಸುಳ್ಳಾಯ್ತು. ಚಕ್ರವರ್ತಿ ಚಂದ್ರಚೂಡ ಅವರಿಗಿಂತ ಅತ್ಯಂತ ಹೆಚ್ಚಿನ ವೋಟ್ ಗಳಿಸಿದ್ದರೂ ಕೂಡ ನಿಧಿ ಸುಬ್ಬಯ್ಯ ಮನೆಯಿಂದ ಹೊರನಡೆದಿದ್ದಾರೆ ಎಂದು ಸಾಕಷ್ಟು ಜನ ಮಾತನಾಡಿಕೊಂಡಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳು ಬಿಗ್ ಬಾಸ್ ಕಾರ್ಯಕ್ರಮದ ರೂಲ್ಸ್ ಅಥವಾ ಅರ್ಗಿಮೆಂಟ್ ಬಗ್ಗೆ ಯಾರಿಗೂ ಹೇಳುವಂತಿಲ್ಲ. ಹಾಗಾಗಿ ಬಿಗ್ ಬಾಸ್ ಕಾರ್ಯಕ್ರಮ ಹೇಗೆ ನಡೆಯುತ್ತದೆ ಎಂಬ ಕುತೂಹಲ ಜನರಲ್ಲಿದ್ದರೂ ಕುಡ ಅದರ ಬಗ್ಗೆ ಯಾರಿಗೂ ಸರಿಯಾಗಿ ತಿಳಿದಿಲ್ಲ. ಇಲ್ಲಿನ ಕೆಲವೊಂದು ಘಟನೆಗಳು ಸ್ಕ್ರಿಪ್ಡೆಡ್ ತರ ಕಾಣಿಸಿದರೆ ಇನ್ನೂ ಕೆಲವು ಸಹಯವಾಗಿಯೇ ನಡೆಯುವಂತಿರುತ್ತದೆ. ಹಾಗಾಗಿ ಈ ಬಗ್ಗೆ ಸರಿಯಾದ ಮಾಹಿತಿಯನ್ನು ಯಾವುದಾದರೂ ಸ್ಪರ್ಧಿ ನೀಡುತ್ತಾರಾ ಎಂದು ಜನ ಕಾಯುತ್ತಿದ್ದ ಹಿನ್ನೆಲೆಯಲ್ಲೇ ಬಿಗ್ ಬಾಸ್ ನ ಕಳೆಯ ಸ್ಪರ್ಧಿಯೊಬ್ಬರು ಸತ್ಯ ಒಂದನ್ನು ಬಿಚ್ಚಿಟ್ಟಿದ್ದಾರೆ.

ಹೌದು, ಕನ್ನಡ ಬಿಗ್ ಬಾಸ್ ನ ಸೀಸನ್ 6ರ ಸ್ಪರ್ಧಿ ಜಯಶ್ರೀ ಸಂದರ್ಶನವೊಂದರಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆಯುವ ವಿಷಯದ ಬಗ್ಗೆ ಹೇಳಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ಸ್ಕ್ರಿಪ್ಡೆಡ್ ಹೌದು ಎಂದಿದ್ದಾರೆ! ಬಿಗ್ ಬಾಸ್ ನ ಎಲಿಮಿನೇಶನ್, ವಿನ್ನರ್ ಎಲ್ಲವೂ ಮೊದಲೇ ನಿರ್ಧಾರವಾಗಿರುತ್ತದೆ. ಎಲಿಮಿನೇಶನ್ ಕೂಡ ಟಿ ಆರ್ ಪಿ ಆಧಾರದ ಮೇಲೆ ನಿರ್ಧಾರಿತವಾಗುತ್ತದೆ.

ಇನ್ನು ಯುವ ಸ್ಪರ್ಧಿಗಳಿದ್ದರೆ ಅವರಲ್ಲಿ ಪ್ರೀತಿಯಂಥ ವಿಷಯಗಳ ಬಗ್ಗೆ ಟಾಸ್ಕ್ ನ್ನು ನೀಡುವುದು ಅಥವಾ ಬೇರೆ ಚಟುವಟಿಕೆಗಳ ಮೂಲಕ ಅವರು ಹತ್ತಿರವಾಗುವಂತೆ ಮಾಡಲಾಗುತ್ತದೆ. ಇಂಥ ಕಂಟೆಂಟ್ ಇದ್ದಾಗ ಜನರೂ ಕೂಡ ಹೆಚ್ಚಾಗಿ ಈ ಕಾರ್ಯಕ್ರಮವನ್ನು ನೋಡುತ್ತಾರೆ, ಆದರೆ ಇದು ತಪ್ಪಲ್ಲ, ಅವರವರ ನಿಯಮ, ಅವರ ಕಾರ್ಯಕ್ರಮ ಅವರಿಗೆ ಬೇಕಾದ ಹಾಗೆ ಕಾರ್ಯಕ್ರಮ ಅವರು ನಡೆಸಬಹುದು ಎಂದೂ ಕೂಡ ಜಯಶ್ರೀ ಹೇಳಿದ್ದಾರೆ. ಜಯಶ್ರೀ ಕನ್ನಡದ ಸಾಕಷ್ಟು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ದಿನನಿತ್ಯದ ಚಟುಚಟಿಕೆಗಳು ಸಹಜವಾಗಿಯೇ ನಡೆಯಬಹುದು, ಆದರೆ ಎಲಿಮಿನೇಶನ್ ಪ್ರಕ್ರಿಯೆ ಜನರ ವೋಟ್ ನ ಆಧಾರದ ಮೇಲೆ ಇರುವುದಿಲ್ಲ. ಅದು ಕೇವಲ ಟಿ ಆರ್ ಪಿಯನ್ನು ಅವಲಂಬಿಸಿರುತ್ತದೆ. ನಮ್ಮ ವೋಟ್ ಗೆ ಇಲ್ಲಿ ಯಾವುದೇ ಬೆಲೆಯಿಲ್ಲ ಎಂದು ಕೂಡ ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಇನ್ನು ಬಿಗ್ ಬಾಸ್ ನಲ್ಲಿ ಜನರ ವೋಟ್ ಸಂಖ್ಯೆಗಳನ್ನು ಪರದೆಯ ಮೇಲೆ ತೋರಿಸಬೇಕು, ಕಾರ್ಯಕ್ರಮದಲ್ಲಿ ಪಾರದರ್ಶಕತೆ ಇರಬೇಕು ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಜನರ ಅನಿಸಿಕೆಯಂತೆಯೇ ಬಿಗ್ ಬಾಸ್ ನಲ್ಲಿ ವೋಟ್ ವಿಷಯದಲ್ಲಿ ಪಾರದರ್ಶಕತೆ ಇರತ್ತಾ ಅಂತ ಕಾದು ನೋಡಬೇಕಿದೆ.

Get real time updates directly on you device, subscribe now.