ಆರ್ಸಿಬಿ ತಂಡಕ್ಕೆ ಬಾರಿ ಕಹಿ ಸುದ್ದಿ ನೀಡಿದ ಎಬಿಡಿ, ಅಭಿಮಾನಿಗಳು ಮನವಿ ಮಾಡಿದರೂ ಒಪ್ಪಲಿಲ್ಲ ಎಬಿಡಿ. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ಎಂದರೆ ಎಬಿಡಿ, ಎಬಿಡಿ ಎಂದರೆ ಆರ್ಸಿಬಿ ಎಂಬಂತಾಗಿದೆ. ಏಕ ಪಕ್ಷೀಯವಾಗಿ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟು, ತಂಡಕ್ಕೆ ತನ್ನ ಅಗತ್ಯವಿದೆ ಎಂದು ತಿಳಿದ ಪ್ರತಿಬಾರಿ, ಅಗತ್ಯಕ್ಕಿಂತ ಹೆಚ್ಚಿನದನ್ನು ನೀಡಿ ಆರ್ಸಿಬಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಎಬಿಡಿ ರವರು, ಕಳೆದ 10 ವರ್ಷಗಳಿಂದ ಆರ್ಸಿಬಿ ತಂಡದಲ್ಲಿ ನಮ್ಮ ನಿಮ್ಮೆಲ್ಲರನ್ನು ಮನರಂಜಿಸಿ, ಅಭಿಮಾನಿಗಳ ಆರಾಧ್ಯ ದೈವವಾಗಿದ್ದ ಎಬಿಡಿ ರವರು ಇದೀಗ ಎಲ್ಲರಿಗೂ ಒಮ್ಮೆಲೇ ಶಾಕ್ ನೀಡಿದ್ದಾರೆ.

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡದಲ್ಲಿ ಎಂದಿಗೂ ಬ್ಯಾಟಿಂಗ್ ವಿಭಾಗದಲ್ಲಿ ಬಲವಿಲ್ಲ ಎಂಬ ಮಾತುಗಳು ಕೇಳಿ ಬಂದಿಲ್ಲ, ಯಾಕೆಂದರೆ ವಿಶ್ವ ಕ್ರಿಕೆಟ್ ಕಂಡ ಇಬ್ಬರು ಶ್ರೇಷ್ಠ ಬ್ಯಾಟ್ಸಮನ್ ಗಳಾದ ಎಬಿಡಿ ಹಾಗೂ ಕೊಹ್ಲಿ ರವರು ನಮ್ಮ ತಂಡದಲ್ಲಿದ್ದಾರೆ. ಇವರಿಬ್ಬರಲ್ಲಿ ಒಬ್ಬರು ಆಡಿದರೂ ಕೂಡ ಆರ್ಸಿಬಿ ತಂಡಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ. ಅದೇ ಕಾರಣಕ್ಕಾಗಿ ಎಬಿಡಿ ರವರನ್ನು ನಮ್ಮ ಆರ್ಸಿಬಿ ಅಭಿಮಾನಿಗಳು ಆರಾಧ್ಯ ದೈವ ಮಾಡಿಕೊಂಡಿದ್ದಾರೆ.

ಹೀಗೆ ಹೇಳುತ್ತಾ ಹೋದರೆ ಎಬಿಡಿ ರವರ ಕುರಿತು ಪದಗಳು ಸಾಕಾವುದಿಲ್ಲ ಹಾಗೂ ಹೇಳುತ್ತಾ ಹೋದರೆ ಸಮಯವೂ ಸಾಕಾಗುವುದಿಲ್ಲ. ಈಗ ಯಾಕೆ ಈ ವಿಷಯ ಎಂದು ಕೊಂಡೀರಾ, ಯಾಕೆಂದರೆ ಕೊನೆಗೂ ಇವೆಲ್ಲವೂ ಕೊನೆಗೊಳ್ಳುವ ಸಮಯದ ಬಂದಾಗಿದೆ. ಹೌದು ಸ್ನೇಹಿತರೇ, ಎಬಿಡಿ ರವರು ಐಪಿಎಲ್ ನಿಂದ ದೂರ ಉಳಿಯುವ ನಿರ್ಧಾರ ಮಾಡಿರುವುದಾಗಿ ಹಾಗೂ ಅದಕ್ಕೆ ಸರಿಯಾದ ಸಮಯ ಕೂಡ ನಿಗದಿ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಸಂದರ್ಶನದಲ್ಲಿ ಮಾತನಾಡಿರುವ ಎಬಿಡಿ ರವರು, ಮುಂಡಿಯಾನ್ 2022 ಐಪಿಎಲ್ ನನ್ನ ಕೊನೆಯ ಐಪಿಎಲ್ ಆಗಲಿದೆ ಎಂದು ಹೇಳಿದ್ದಾರೆ, ಆರ್ಸಿಬಿ ತಂಡ ಬಿಟ್ಟು ಬೇರೆ ಆಡುತ್ತೀರಾ ಎಂದಾಗ ಐಪಿಎಲ್ ಆಡುತ್ತೇನೆ ಎಂದರೆ ಅದು ಆರ್ಸಿಬಿ ಗೆ ಮಾತ್ರ. ಆರ್ಸಿಬಿ ಅಲ್ಲಿ ಇಲ್ಲ ಎಂದರೆ ಐಪಿಎಲ್ ಕೊನೆ ಎಂದರ್ಥ. ನಾನು ಯೋಚನೆ ಮಾಡಿ ಐಪಿಎಲ್ ಅನ್ನು ಆಡದೆ ಇರಲು ನಿರ್ಧರಿಸಿದ್ದೇನೆ ಎಂದು ಹೇಳಿಕ್ಕೆ ನೀಡಿದ್ದಾರೆ.