ಕೊನೆಗೂ ಸಿಕ್ಕವು ಯಶ್ ರಾಧಿಕಾ ಹೊಸ ಮನೆಯ ಫೋಟೋಗಳು, ಹೇಗಿದೆ ಗೊತ್ತಾ?? ಎಕ್ಸ್ಕ್ಲೂಸಿವ್ ಫೋಟೋಸ್. ನಮ್ಮಲ್ಲಿ ಮಾತ್ರ.

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ವಿಯಾದ ಮೇಲೆ ಹೆಂಡತಿ ಮಕ್ಕಳು ಒಳ್ಳೆಯ ಮನೆ ಕಾರು ಹೀಗೆ ಹಲವಾರು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಇನ್ನು ನಾವು ನಮ್ಮ ಕನ್ನಡ ಚಿತ್ರರಂಗದ ನಟರ ಕೊಡುತ್ತದೆ ಹೇಳಲು ಹೊರಟರೆ,ನಟರ ಮನೆಗಳನ್ನು ನೋಡಲು ಕೂಡ ನಾವು ಸಾಕಷ್ಟು ಕಾತರರಾಗಿ ಇರುತ್ತೇವೆ. ಇದು ನಾನು ಹೇಳಲು ಹೊರಟಿರುವುದು ಕನ್ನಡ ಚಿತ್ರರಂಗದ ಪ್ಯಾನ್ ಇಂಡಿಯಾ ಸ್ಟಾರ್ ಎಂದು ಖ್ಯಾತರಾಗಿರುವ ರಾಕಿಂಗ್ ಸ್ಟಾರ್ ಯಶ್ ರವರ ಕುರಿತಂತೆ.

ಹೌದು ಸ್ನೇಹಿತರೆ ರಾಕಿಂಗ್ ಸ್ಟಾರ್ ಯಶ್ ಅವರು ಯಾರ ಸಹಾಯವಿಲ್ಲದೆ ಚಿತ್ರರಂಗಕ್ಕೆ ಬಂದು ಇಂದು ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗನು ಕೂಡ ಕಾಲರ್ ಎತ್ತುವಂತೆ ಹೆಮ್ಮೆಯಿಂದ ಇರುವಂತೆ ಮಾಡಿರುವ ಪ್ರತಿಭಾನ್ವಿತ ನಟ. ಒಂದು ರಾಕಿಂಗ್ ಸ್ಟಾರ್ ಯಶ್ ರವರು ಯಾವುದೋ ಸೀರಿಯಲ್ನಲ್ಲಿ ಚಿಕ್ಕ ಪಾತ್ರದ ಮೂಲಕ ಈ ಲೋಕಕ್ಕೆ ಪರಿಚಿತರಾಗಿ ಇಂದು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಪರಿಚಿತರಾಗಿರುವ ಬಹುಬೇಡಿಕೆಯ ನಟ ಎಂದೇ ಹೇಳಬಹುದು.

ಒಂದು ಅವಕಾಶಕ್ಕಾಗಿ ಒದ್ದಾಡುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ರವರು ಇಂದು ಅದೆಷ್ಟೋ ಜನರಿಗೆ ಅವಕಾಶ ನೀಡಿ ತಮ್ಮ ಚಿತ್ರಗಳ ಮೂಲಕ ಅವರಿಗೊಂದು ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುತ್ತಿದ್ದಾರೆ. ಇತ್ತೀಚಿಗಷ್ಟೇ ಲಾಕ್ಡೌನ್ ಸಮಯದಲ್ಲಿ ಕನ್ನಡ ಚಿತ್ರರಂಗದ ಮೂರು ಸಾವಿರ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಸಾವಿರ ರೂಪಾಯಿಯಂತೆ ಒಟ್ಟು ಮತ್ತು 1.5 ಕೋಟಿ ಮೊತ್ತವನ್ನು ತನ್ನ ಸ್ವಂತ ದುಡಿಮೆಯಿಂದ ಕೊಟ್ಟು ಅವರ ಜೀವನಕ್ಕೆ ಆಧಾರವಾಗಿ ನಿಂತರು.

ಅಂದು ಕಷ್ಟಪಟ್ಟು ಜೀವನದ ಉತ್ತುಂಗಕ್ಕೆ ಬಂದವರು ಈಗ ಅದೆಷ್ಟು ಜನ ಕಷ್ಟಪಡುತ್ತಿರುವ ಅವರ ಜೀವನಕ್ಕೆ ಆಸರೆಯಾಗಿ ನಿಂತಿದ್ದಾರೆ. ತಾವು ಕಷ್ಟಪಟ್ಟು ದುಡಿದು ಜೀವನದ ಯಶಸ್ವಿ ಹಂತಕ್ಕೆ ಬಂದ ಮೇಲೆ ತಾವು ಮೆಚ್ಚಿದ ಹುಡುಗಿಯನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದು ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಆದವರು ನಮ್ಮ ರಾಕಿಂಗ್ ಸ್ಟಾರ್ ಯಶ್. ಅದೆಷ್ಟೇ ವಿವಾದಗಳು ಇವರನ್ನು ಮೇಲೆ ಬಂದರೂ ಸಹ ಅದ್ಯಾವುದಕ್ಕೂ ಕಿವಿಗೊಡದೆ ತಮ್ಮನ್ನು ಪ್ರೀತಿಸುವವರ ಪ್ರೀತಿಗೆ ಧ ಕ್ಕೆ ತರದಂತೆ ಚಿತ್ರರಂಗದಲ್ಲಿ ದೃವತಾರೆ ಅಂತೆ ಮಿಂಚುತ್ತಿರುವವರು.

ಈಗ ರಾಕಿಂಗ್ ಸ್ಟಾರ್ ಯಶ್ ರವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಯಾವುದು ಚಿತ್ರವು ಅಥವಾ ಯಾವುದೇ ಸಾಧನೆ ಅಲ್ಲ ಅದಕ್ಕಿಂತ ಮಿಗಿಲಾದದ್ದು. ಹೌದು ಸ್ನೇಹಿತರೆ ನೆನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ರವರ ಹೊಸ ಮನೆಯ ಗ್ರಹಪ್ರವೇಶ ಸರಳವಾಗಿ ನಡೆದಿದೆ. ಹೌದು ಸ್ನೇಹಿತರೆ ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಮನೆ ರೇಸ್ ಕೋರ್ಸ್ ರಸ್ತೆಯ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಅಲ್ಲಿ ಇದೆ. ಈ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ಇದ್ದಂತಹ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ಮನೆಯನ್ನು ಖರೀದಿಸಿ ನೆನ್ನೆ ಮನೆಯ ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಶಾಸ್ತ್ರೋಕ್ತವಾಗಿ ಪ್ರವೇಶವನ್ನು ಮಾಡಿದ್ದಾರೆ.

ದಿನೇದಿನೇ ತಮ್ಮ ಪರಿಶ್ರಮದ ಮೂಲಕ ಒಂದೊಂದೇ ಹಂತವಾಗಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಿರುವ ರಾಕಿಂಗ್ ಸ್ಟಾರ್ ಯಶ್ ರವರಿಗೆ ನಮ್ಮೆಲ್ಲರ ಹಾರ್ದಿಕ ಶುಭಾಶಯಗಳು ಕೋರುತ್ತಾ ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.