ಟೆಸ್ಟ್ ಚಾಂಪಿಯನ್ಷಿಪ್ ಆಧಾರದ ಮೇಲೆ ವಿಶ್ವ ಶ್ರೇಷ್ಠ ತಂಡ ರಚಿಸಿದ ಬ್ರಾಡ್ ಹಾಗ್, ಆಯ್ಕೆಯಾದ ಭಾರತೀಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಆಸ್ಟ್ರೇಲಿಯಾ ದ ಖ್ಯಾತ ಎಡಗೈ ಚೈನಾಮನ್ ಸ್ಪಿನ್ನರ್ ಈಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬಿಗ್ ಶಾಕ್ ನೀಡಿದ್ದಾರೆ. ಇತ್ತಿಚೆಗಷ್ಟೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ನ್ಯೂಜಿಲೆಂಡ್ ವಿರುದ್ದ ಹೀನಾಯವಾಗಿ ಸೋತಿರುವ ನಾಯಕ ಕೋಹ್ಲಿ ಈಗ ಟೀಕೆಗಳ ಸುರಿಮಳೆ ಎದುರಿಸುತ್ತಿದ್ದಾರೆ. ಈ ನಡುವೆ ಬ್ರಾಡ್ ಹಾಗ್ ಮತ್ತೊಂದು ಶಾಕ್ ನೀಡಿದ್ದಾರೆ. ಹೌದು ಸ್ನೇಹಿತರೇ. ಇದು ಒಂದು ರೀತಿ ವಿರಾಟ್ ಕೊಹ್ಲಿ ರವರಿಗೆ ಶಾಕ್ ಎಂದೇ ಹೇಳಬಹುದು.

ಬ್ರಾಡ್ ಹಾಗ್ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಪ್ರದರ್ಶನ ನೋಡಿಕೊಂಡು ವಿಶ್ವ ಇಲೆವೆನ್ ತಂಡವನ್ನು ರಚಿಸಿದ್ದಾರೆ. ಇದರಲ್ಲಿ ಟೂರ್ನಿಯಲ್ಲಿ ಉತ್ತಮ ರನ್ ಗಳಿಸಿದ್ದ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಹಾಗೂ ಇಂಗ್ಲೆಂಡ್ ನ ಜೋ ರೂಟ್ ರವರನ್ನ ತಂಡದಿಂದ ಕೈ ಬಿಟ್ಟಿದ್ದಾರೆ. ವಿಶೇಷವಾಗಿ ಭಾರತದ ವಿಕೇಟ್ ಕೀಪರ್ ರಿಷಭ್ ಪಂತರನ್ನ ಹೊಗಳಿರುವ ಬ್ರಾಡ್ ಹಾಗ್, ಅವರು ಗಬ್ಬಾದಲ್ಲಿ ಗಳಿಸಿದ್ದ ಇನ್ನಿಂಗ್ಸ್ ನನ್ನ ಬೆಸ್ಟ್ ಇನ್ನಿಂಗ್ಸ್ ಎಂದು ಹೇಳಿದ್ದಾರೆ.

ಅತಿರಥ ಮಹಾರಥರನ್ನ ತಂಡದಿಂದ ಕೈ ಬಿಟ್ಟಿರುವ ಬ್ರಾಡ್ ಹಾಗ್ ರವರನ್ನ ಕೋಹ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದು, ಆ ಕಮೆಂಟುಗಳೆಲ್ಲಾ ಸದ್ಯ ವೈರಲ್ ಆಗಿವೆ. ಬ್ರಾಡ್ ಹಾಗ್ ರಚಿಸಿದ ವಿಶ್ವ ಇಲೆವೆನ್ ತಂಡ ಹೀಗಿದೆ – ರೋಹಿತ್ ಶರ್ಮಾ, ದಿಮುತೆ ಕರುಣಾರತ್ನೆ (ಓಪನರ್ಸ), ಕೇನ್ ವಿಲಿಯಮ್ಸನ್ (ನಾಯಕ), ಸ್ಟೀವ್ ಸ್ಮಿತ್, ಬಾಬರ್ ಅಝಮ್, ಬೆನ್ ಸ್ಟೋಕ್ಸ್, ರಿಷಭ್ ಪಂತ್, ಕೈಲ್ ಜೇಮಿಸನ್, ಆರ್.ಅಶ್ವಿನ್, ಸ್ಟುವರ್ಟ್ ಬ್ರಾಡ್, ಮಹಮದ್ ಶಮಿ. ಮಾರ್ನಸ್ ಲಬುಶೇನ್ ಈ ತಂಡದ 12 ನೇ ಆಟಗಾರರಾಗಿದ್ದಾರೆ.