ಕನ್ನಡದ ಬ್ರಹ್ಮನಂದಂ, 600 ಕ್ಕೂ ಹೆಚ್ಚಿನ ಸಿನೆಮಾಗಳಲ್ಲಿ ನಟಿಸಿರುವ ಟೆನಿಸ್ ಕೃಷ್ಣ ಮಗಳು ಹೇಗಿದ್ದಾರೆ ಗೊತ್ತಾ?? ಹೀರೋಯಿನ್ ಗೆ ಕಮ್ಮಿ ಇಲ್ಲ.

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಅಂದಿನ ದಿನಗಳಲ್ಲಿ ಹಲವಾರು ಕಾಮಿಡಿ ನಟರು ನಮ್ಮ ಚಿತ್ರರಂಗದಲ್ಲಿ ಪ್ರೇಕ್ಷಕರ ಮನ ರಂಜಿಸುವುದಕ್ಕಾಗಿ ಇದ್ದರು. ಇಂದಿನ ದಿನಗಳಲ್ಲಿ ಡಬಲ್ ಮೀನಿಂಗ್ ಡೈಲಾಗ್ ಗಳಿಂದಾಗಿ ಪ್ರೇಕ್ಷಕರ ಮನಸ್ಸನ್ನು ರಂಜಿಸಲು ಅದೆಷ್ಟು ಹಾಸ್ಯ ನಟರು ಇರಬಹುದು ಆದರೆ ಅಂದಿನ ದಿನಗಳಲ್ಲಿ ನಮ್ಮ ಮುಖ ಭಾವನೆಯಿಂದ ಅಷ್ಟೇ ಪ್ರೇಕ್ಷಕರ ಮನದಲ್ಲಿ ಮಗುವಿನ ಹೊಳೆಯನ್ನೇ ಹರಿಸುತ್ತಿದ್ದ ಹಾಸ್ಯ ನಟರು ಇದ್ದರು.

ಹೌದು ಸ್ನೇಹಿತರೆ ಇಂದು ನಾವು ಅವರಲ್ಲಿ ನಾವು ಮಾತನಾಡಲು ಹೊರಟಿರುವುದು ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರ ಬಗ್ಗೆ. 90ರ ದಶಕದಲ್ಲಿ ಒಂದು ಟೆನಿಸ್ ಕೃಷ್ಣರವರಿಗೆ ಇದ್ದಂತಹ ಬೇಡಿಕೆ ಯಾವ ಹಾಸ್ಯನಟರ ಆಗಲಿ ಯಾವ ನಟರಿಗೆ ಆಗಲಿ ಇಲ್ಲವಾಗಿತ್ತು. ಅಷ್ಟರಮಟ್ಟಿಗೆ ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕಾದುಕುಳಿತಿದ್ದರು. ಕನ್ನಡ ಪ್ರೇಕ್ಷಕರು ಕೂಡ ಟೆನಿಸ್ ಕೃಷ್ಣ ಅವರ ಹಾಸ್ಯವಿದೆ ಎಂದರೆ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಮಾಡಿಬಿಡುತ್ತಿದ್ದರು. ನಾಯಕನಷ್ಟೇ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ ಟೆನ್ನಿಸ್ ಕೃಷ್ಣ ಅವರು ಪ್ರಭಾವ ಬೀರಿದ್ದರು.

1990 ರಲ್ಲಿ ಟೆನಿಸ್ ಕೃಷ್ಣ ಅವರು ರಾಜ ಕೆಂಪು ರೋಜ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದಾದ ನಂತರ ಅವರ ನಟನೆಗೆ ಪ್ರೇಕ್ಷಕರಿಂದ ಮನ್ನಣೆ ಸಿಕ್ಕಿ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸಲು ಪ್ರಾರಂಭಿಸಿದರು. ರಾಜಕುಮಾರ್ ವಿಷ್ಣುವರ್ಧನ್ ಅಂಬರೀಶ್ ಅನಂತನಾಗ್. ಇಂದಿನ ಕಾಲದ ಸೂಪರ್ ಸ್ಟಾರ್ ಗಳ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೀರೋ ಶಿವಣ್ಣ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವಿಚಂದ್ರನ್ ಹೀಗೆ ಎಲ್ಲಾ ನಟರ ಚಿತ್ರಗಳಲ್ಲಿ ನಟಿಸಿದ ಅನುಭವ ಟೆನ್ನಿಸ್ ಕೃಷ್ಣರವರಿಗೆ ಇದೆ.

2010 ರ ನಂತರ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸೇರ್ಪಡೆಯೊಂದಿಗೆ ಟೆನ್ನಿಸ್ ಕೃಷ್ಣ ಅವರಿಗಿದ್ದ ಜನಪ್ರಿಯತೆ ಕಾಲ ಕ್ರಮೇಣ ಕಡಿಮೆಯಾಗಿ ಅವರು ಚಿತ್ರರಂಗದಿಂದ ದೂರ ಉಳಿದರು. ಅದಾಗಲೇ ಕನ್ನಡ ಚಿತ್ರರಂಗದಲ್ಲಿ ಟೆನಿಸ್ ಕೃಷ್ಣ ರವರು 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ಮಹಾನ್ ಕಲಾವಿದರಾಗಿದ್ದರು. ಅಂದಿನ ದಿನಗಳಲ್ಲಿ ಹಾಸ್ಯ ಕಲಾವಿದರ ಸ್ಥಾನಕ್ಕೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪೈಪೋಟಿ ಇದ್ದರು ಸಹ ಟೆನ್ನಿಸ್ ಕೃಷ್ಣರವರು ತಮ್ಮ ವಿಭಿನ್ನ ಶೈಲಿಯ ಹಾಸ್ಯದ ಮೂಲಕ ಕನ್ನಡ ಪ್ರೇಕ್ಷಕರನ್ನು ತನ್ನೆಡೆ ಸೆಳೆಯಲು ಯಶಸ್ವಿಯಾದರು.

ಇನ್ನು ಅಂದಿನ ಕಾಲದಲ್ಲಿ ಟೆನ್ನಿಸ್ ಕೃಷ್ಣ ಹಾಗೂ ದೊಡ್ಡಣ್ಣವರ ಜೋಡಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ವಿಯಾಗಿ ಜನಮೆಚ್ಚುಗೆಯನ್ನು ಪಡೆದಿತ್ತು. ಇನ್ನು ಈಗಲೂ ಸಹ ಟೆನ್ನಿಸ್ ಕೃಷ್ಣರವರ ಗಡಿಬಿಡಿ ಗಂಡ ಚಿತ್ರದ ಮಾರಮ್ಮನ ಡಿಸ್ಕೋ ಡೈಲಾಗ್ ಇಂದಿಗೂ ಕೂಡ ಸಖತ್ ಫೇಮಸ್ ಆಗಿದೆ. ಇತ್ತೀಚಿಗಷ್ಟೇ ಇದೆ ಡೈಲಾಗ್ ನಲ್ಲಿ ಅಲೋಕ್ ರವರು ಒಂದು ರಾಪ್ ಸಾಂಗ್ ಕೂಡ ಮಾಡಿದ್ದಾರೆ. ಇನ್ನು ಟೆನ್ನಿಸ್ ಕೃಷ್ಣರವರ ಮಗಳ ಬಗ್ಗೆ ಹೇಳುವುದಾದರೆ ಅವರು ಕೂಡ ಸುರಸುಂದರಿ.

ಹೌದು ಸ್ನೇಹಿತರೆ ಟೆನ್ನಿಸ್ ಕೃಷ್ಣ ಅವರ ಮಗಳು ಎಷ್ಟು ಸುಂದರಿ ಎಂದರೆ ಕನ್ನಡ ಚಿತ್ರರಂಗದಲ್ಲಿ ಈಗಿರುವ ನಟಿಯರು ಅವರನ್ನು ನೋಡಿ ನಾಚಿ ಕೊಳ್ಳಬೇಕು ಅಷ್ಟು ಸುಂದರಿಯಾಗಿದ್ದಾರೆ. ಇಂಥವರಿಗೆ ನಾವು ಮೊದಲೇ ನಾವು ಅವಕಾಶ ಕೊಡಬೇಕಾಗಿತ್ತು ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿ ಮಿಂಚುತ್ತಿದ್ದರು. ಆದರೆ ಟೆನಿಸ್ ಕೃಷ್ಣ ಅವರ ಪುತ್ರಿ ರಂಜಿತಾ ಒಂದು ದೊಡ್ಡ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ಮದುವೆಯಾಗಿ ಮಗು ಕೂಡ ಇದೆ. ಈಗಲೂ ಸಹ ಅವರಿಗೆ ಸಿನಿಮಾ ಹಾಗೂ ಧಾರಾವಾಹಿಗಳಿಂದ ಅವಕಾಶಗಳು ಹುಡುಕಿಕೊಂಡು ಬಂದಿದ್ದು ಮುಂದಿನ ದಿನಗಳಲ್ಲಿ ಅವರು ನಟಿಸಿದ್ದಾರೆ ಅವರ ನಟನ ಜೀವನಕ್ಕೆ ಶುಭವಾಗಲಿ ಎಂದು ಹಾರೈಸೋಣ. ಇನ್ನು ಟೆನ್ನಿಸ್ ಕೃಷ್ಣರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.