ಪ್ರಕೃತಿಯ ಮಡಿಲಿನಲ್ಲಿ ಯಾವುದೇ ಸ್ವರ್ಗಕ್ಕಿಂತ ಕಮ್ಮಿ ಇಲ್ಲ, ಧೋನಿ ರವರ ರೆಸಾರ್ಟ್, ನೋಡಿ ಎಸ್ಕ್ಯೂಸಿವ್ ಫೋಟೋಸ್.

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ರಂಗದಲ್ಲಿ ಅಂದಿನಿಂದ ಇಂದಿನವರೆಗೂ ಅದೆಷ್ಟು ನಾಯಕರು ಬದಲಾಗಿ ಹೋಗಿದ್ದಾರೆ. ಆದರೆ ನಿವೃತ್ತಿಹೊಂದಿದರು ಸಹ ಇಂದಿಗೂ ಕೂಡ ಸುದ್ದಿಯಲ್ಲಿರುವ ಏಕೈಕ ಕಪ್ತಾನ ಎಂದು ಖಂಡಿತವಾಗಿಯೂ ಅದು ರಾಂಚಿಯ ಹೆಮ್ಮೆ ಭಾರತದ ಅತ್ಯಂತ ಯಶಸ್ವಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ. ಹೌದು ಸ್ನೇಹಿತರೆ ನಿವೃತ್ತಿಹೊಂದಿದರು ಸಹ ಇಂದಿಗೂ ಕೂಡ ಅದೇ ಅಭಿಮಾನಿ ಬಳಗವನ್ನು ಹೊಂದಿರುವ ಏಕೈಕ ಕ್ರಿಕೆಟಿಗೆ ಅಂದರೆ ಅದು ಮಹೇಂದ್ರ ಸಿಂಗ್ ಧೋನಿ. ತಂಡಕ್ಕಾಗಿ ಅದೆಷ್ಟೋ ಪರಿಶ್ರಮ ಹಾಗೂ ಕಷ್ಟಪಟ್ಟು ಇಂದು ಒಂದು ಒಳ್ಳೆಯತನ ನಿರ್ಮಾಣವಾಗಲು ಕಾರಣವಾಗಿರುವ ಎಂಎಸ್ ಧೋನಿ. ಇಂದು ಅವರ ಕುರಿತಂತೆ ವಿಶೇಷ ಎಕ್ಸ್ ಕ್ಲೂಸಿವ್ ಆಗಿ ಮಾತನಾಡೋಣ ಬನ್ನಿ.

ಹೌದು ಸ್ನೇಹಿತರೇ ರಾಂಚಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿಯಾಗಿದ್ದಾಗ ಫುಟ್ಬಾಲ್ ಗೋಲ್ಕೀಪರ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ ಅವರು ನಂತರದ ದಿನಗಳಲ್ಲಿ ಅವರ ಶಿಕ್ಷಕರ ಸಲಹೆ ಮೇರೆಗೆ ಕ್ರಿಕೆಟಿಗೆ ವರ್ಗಾವಣೆಗೊಂಡರು. ಕ್ರಿಕೆಟ್ ಗೆ ಬಂದ ನಂತರ ಕ್ರಿಕೆಟ್ ನಲ್ಲಿ ಕೂಡ ಯಶಸ್ವಿ ಕೀಪರ್ ಆಗಿ ಕಾಣಿಸತೊಡಗಿದರು. ನಂತರ ಹಲವಾರು ವರ್ಷಗಳ ಶ್ರಮಗಳ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಮಹೇಂದ್ರ ಸಿಂಗ್ ಧೋನಿ ಅವರು ಮೊದಲ ಪಂದ್ಯದಲ್ಲಿ 0 ರನ್ನಿಗೆ ರನೌಟ್ ಆದರು ಸಹ ಮುಂದಿನ ದಿನಗಳಲ್ಲಿ ಭಾರತದ ಯಶಸ್ವಿ ಬ್ಯಾಟ್ಸ್ ಮ್ಯಾನ್ ಆಗಿ ಕಾಣಿಸಿಕೊಳ್ಳ ತೊಡಗಿದರು.

ನಂತರ 2007 ರ ಪ್ರಥಮ ಟಿ-20ವಿಶ್ವಕಪ್ ಗೆ ಭಾರತ ತಂಡದ ಕಪ್ತಾನನಾಗಿ ಆಯ್ಕೆಗೊಂಡರು. ಅತಿ ಚಿಕ್ಕ ವಯಸ್ಸಿನಲ್ಲೇ ವರ್ಲ್ಡ್ ಕಪ್ ಗೆದ್ದಂತಹ ಕಪ್ತಾನನಾಗಿ ಮೆರೆದರು. ನಂತರದ ದಿನಗಳಲ್ಲಿ ಹಿರಿಯ ಕ್ರಿಕೆಟಿಗರ ವಿರೋಧವನ್ನು ಕಟ್ಟಿಕೊಂಡು ಯುವ ಆಟಗಾರರಿಗೆ ಮಣೆ ಹಾಕಿದರು. ಇಂದು ಭಾರತೀಯ ಕ್ರಿಕೆಟ್ ತಂಡ ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಬಲಿಷ್ಠವಾಗಿ ಕಾಣಿಸುತ್ತದೆ ಎಂದರೆ ಅದಕ್ಕೆ ಮುಖ್ಯ ಕಾರಣ ನಿಸ್ಸಂಶಯವಾಗಿ ಮಹೇಂದ್ರ ಸಿಂಗ್ ಧೋನಿ. ಒಂದು ಮಹೇಂದ್ರ ಸಿಂಗ್ ಧೋನಿ ಯುವ ಆಟಗಾರರಿಗೆ ಅವಕಾಶ ಕೊಟ್ಟಿದ್ದರ ಸಲುವಾಗಿ ಇಂದು ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ರವೀಂದ್ರ ಜಡೇಜಾ ರಂತಹ ಅದೆಷ್ಟು ಆಟಗಾರರು ಭಾರತೀಯ ಕ್ರಿಕೆಟ್ ತಂಡದಲ್ಲಿ ಯಶಸ್ವಿಯಾಗಿ ಪ್ರದರ್ಶನ ಮಾಡಲು ಸಾಧ್ಯವಾಗಿದೆ.

2011 ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಅಂತಹ ಮಹತ್ತರ ಸಾಧನೆಯನ್ನು ಮಾಡಿದಂತಹ ಭಾರತೀಯ ಕ್ರಿಕೆಟ್ ತಂಡದ ಏಕೈಕ ನಾಯಕನೆಂದರೆ ಅದು ಮಹೇಂದ್ರ ಸಿಂಗ್ ಧೋನಿ. ಇಷ್ಟೆಲ್ಲಾ ಸಾಧನೆ ಮಾಡಿದನಂತರ ಮಹೇಂದ್ರ ಸಿಂಗ್ ಧೋನಿ ತಂಡದಿಂದ ಸೈಲೆಂಟಾಗಿ ನಿರ್ಗಮಿಸಿದರು. ಈಗೆಲ್ಲಾ ಐಪಿಎಲ್ನಲ್ಲಿ ಕಂಡುಬಂದರೂ ಸಹ ಭಾರತೀಯ ಕ್ರಿಕೆಟ್ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿಯವರ ಅನುಪಸ್ಥಿತಿ ಈಗಲೂ ಪ್ರೇಕ್ಷಕರಿಗೆ ಕಾಡುತ್ತಿದೆ. ಇತ್ತೀಚಿಗಷ್ಟೇ ಮಹೇಂದ್ರ ಸಿಂಗ್ ಧೋನಿಯವರ ಲೇಟೆಸ್ಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಬಹಳಷ್ಟು ಸುದ್ದಿ ಮಾಡುತ್ತಿದೆ.

ಹೌದು ಸ್ನೇಹಿತರೆ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಪತ್ನಿ ಸಾಕ್ಷಿ ಹಾಗೂ ಮಗಳು ಜೀವ ಸಮೇತ 12 ಜನರೊಂದಿಗೆ ಸಿಮ್ಲಾಗೆ ಪ್ರವಾಸದಲ್ಲಿದ್ದು ತಮ್ಮದೇ ಆದ ರೆಸ್ಪೋರ್ಟ್ ನಲ್ಲಿ ಉಳಿದುಕೊಂಡಿದ್ದಾರೆ. ಪರ್ವತ ಕಣಿವೆ ಗಳಲ್ಲಿರುವ ಈ ಸುಂದರ ಪ್ರಾಕೃತಿಕ ಪ್ರದೇಶ ಮಹೇಂದ್ರ ಸಿಂಗ್ ಧೋನಿಯವರ ಕುಟುಂಬಕ್ಕೆ ಇಷ್ಟವಾಗಿದ್ದು ಇಲ್ಲಿ ಸಾಕಷ್ಟು ದಿನಗಳಿಂದ ಉಳಿದು ಕೊಂಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ತಮ್ಮ ಮಗಳು ಜೀವಾ ಅವರೊಂದಿಗಿರುವ ಫೋಟೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇನ್ನು ಈ ಫೋಟೋದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಅವರು ಕೂಡ ಇದ್ದಾರೆ. ಮಹೇಂದ್ರ ಸಿಂಗ್ ಕುಟುಂಬದ ಈ ಸುಂದರ ಕ್ಷಣಗಳ ಫೋಟೋಗಳು ನೀವು ನೋಡಿಲ್ಲ ಅಂದ್ರೆ ನೋಡಿ ಇಲ್ಲೇ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.