ರಶ್ಮಿಕ ಮಂದಣ್ಣ ವಿಜಯ್ ದೇವರಕೊಂಡ ರವರ ಗರ್ಲ್ ಫ್ರೆಂಡ್ ಅಲ್ಲವೇ ಅಲ್ಲವಂತೆ ಹಾಗಿದ್ದರೆ ಬೇರೆ ಯಾರು ಗೊತ್ತಾ??

22

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಕೆಲವು ನಟ-ನಟಿಯರ ನಡುವೆ ಯಶಸ್ಸಿನ ನಂತರ ಪ್ರೇಮ ಸಂಬಂಧದ ಗುಸುಗುಸು ಗಾಸಿಪ್ ಗಳು ಮೂಡಲು ಪ್ರಾರಂಭವಾಗುತ್ತದೆ. ಇದು ನಾವು ಹೇಳಲು ಹೊರಟಿರುವ ನಟ-ನಟಿಯರ ಕುರಿತಂತೆ ಕೂಡ ಹೀಗೆ ಆಗಿದೆ. ಹೌದು ಸ್ನೇಹಿತರೆ ಇವರಿಬ್ಬರ ಕಾಂಬಿನೇಷನ್ ಅಲ್ಲಿ ಬಂದ ಒಂದು ಚಿತ್ರ ಅಭೂತಪೂರ್ವ ಯಶಸ್ಸನ್ನು ಕಂಡ ನಂತರ ಇವರ ನಡುವೆ ಪ್ರೇಮ ಸಂಬಂಧವಿದೆ ಎಂಬ ಗಾಸಿಪ್ ಗಳು ದೇಶಾದ್ಯಂತ ಮಾಧ್ಯಮಗಳಲ್ಲಿ ಹರಡಲು ಆರಂಭವಾಯಿತು. ಬನ್ನಿ ಆ ನಟ ಹಾಗೂ ನಟಿ ಯಾರೆಂದು ತಿಳಿಯೋಣ ಬನ್ನಿ.

ಅವರು ಇನ್ಯಾರು ಅಲ್ಲ ಈಗಾಗಲೇ ಅಲ್ಪ ವಯಸ್ಸಿನಲ್ಲಿ ಅತ್ಯಂತ ಹೆಚ್ಚಿನ ಯಶಸ್ಸನ್ನು ಪಡೆದ ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ. ಹೌದು ಸ್ನೇಹಿತರೆ ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಚಿತ್ರದ ಅಭೂತಪೂರ್ವ ಯಶಸ್ಸನ್ನು ಪಡೆದ ರಶ್ಮಿಕ ಮಂದಣ್ಣ ರವರು ಅದಾದ ನಂತರವೇ ಟಾಲಿವುಡ್ ಗೆ ಹಾರಿದರು. ಇದಾದನಂತರ ವಿಜಯ್ ದೇವರಕೊಂಡ ರವರೊಂದಿಗೆ ಗೀತ ಗೋವಿಂದಂ ಚಿತ್ರದಲ್ಲಿ ನಟಿಸಿದ ಮೇಲಂತೂ ಇವರ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬುದಾಗಿ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗಿತ್ತು.

ವಿಜಯ್ ದೇವರಕೊಂಡ ಅವರೊಂದಿಗಿನ ಲಿಪ್ ಲಾಕ್ ಕಿಸ್ ಅಂತೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯನ್ನು ಉಂಟುಮಾಡಿ ಇವರಿಬ್ಬರ ನಡುವೆ ಖಂಡಿತವಾಗಿಯೂ ಪ್ರೇಮ ಸಂಬಂಧ ಇದೆ ಎಂಬುದನ್ನು ಸಾಬೀತು ಪಡಿಸುವಂತೆ ಮಾಡಿತ್ತು. ಇವರಿಬ್ಬರೂ ಕೂಡ ಜೊತೆಯಾಗಿ ಹಲವು ಬಾರಿ ಕಾಣಿಸಿಕೊಂಡಿದ್ದು ತುಂಬಾ ಕ್ಲೋಸ್ ಆಗಿ ವರ್ತಿಸುತ್ತಿದ್ದರು. ಇನ್ನು ಇದರ ಎಲ್ಲರ ಮಧ್ಯೆ ರಶ್ಮಿಕ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿಯವರ ನಡುವಿದ್ದ ಎಂಗೇಜ್ಮೆಂಟ್ ಕೂಡ ಮುರಿದುಬಿತ್ತು ಶೀಘ್ರದಲ್ಲೇ ಮದುವೆಯಾಗುತ್ತೇವೆ ಎಂದು ಹೇಳಿದ್ದ ಜೋಡಿ ಮದುವೆಯನ್ನು ಮರೆತು ಬೇರೆ ಆದರು. ಎಲ್ಲ ಬೆಳವಣಿಗೆಗಳು ರಶ್ಮಿಕ ಮಂದಣ್ಣ ಹಾಗು ವಿಜಯ್ ದೇವರಕೊಂಡ ನಡುವಿನ ಸಂಬಂಧವನ್ನು ಇನ್ನಷ್ಟು ಪುಷ್ಟಿಗೊಳಿಸುತ್ತದೆ.

ಅದಾದನಂತರ ರಶ್ಮಿಕ ಮಂದಣ್ಣ ರವರು ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದು ಎಲ್ಲ ಚಿತ್ರಗಳಲ್ಲಿ ಕೂಡ ಅವರಿಗೆ ಆಫರ್ ಗಳು ಮೇಲಿಂದ ಮೇಲೆ ಬರುತ್ತದೆ. ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿರುವ ರಶ್ಮಿಕ ಮಂದಣ್ಣ ಹಾಗುವ ವಿಜಯ್ ದೇವರಕೊಂಡ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಮೆಚ್ಚುವ ಜೋಡಿಗಳಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇವರು ಈಗಾಗಲೇ ಎರಡು ಚಿತ್ರಗಳಲ್ಲಿ ಒಟ್ಟಿಗೆ ನಡೆಸಿದ್ದು ಎರಡು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಪಟ್ಟವನ್ನು ಕಂಡಿದೆ.

ಆದರೆ ಇತ್ತೀಚಿಗೆ ಕೆಲಸ ಸುದ್ದಿಗಳು ಹರಿದಾಡುತ್ತಿದ್ದು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮನದಲ್ಲಿ ಯಾವುದೇ ಸಂಬಂಧವಿಲ್ಲ ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದಾರೆ ಎಂಬುದು ಎಲ್ಲ ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೌದು ಸ್ನೇಹಿತರೆ ರಶ್ಮಿಕ ಮಂದಣ್ಣ ರವರು ವಿಜಯ್ ದೇವರಕೊಂಡ ರವರ ಗರ್ಲ್ ಫ್ರೆಂಡ್ ಅಲ್ಲ ಅಂದಮೇಲೆ ಇನ್ಯಾರು ಹಾಗಾದರೆ ಎಂದು ತಿಳಿದು ತಿಳಿಯುವ ಕುತೂಹಲ ನಿಮಗಿದ್ದರೆ ನಿಮಗೆ ಆ ವಿಷಯವನ್ನು ಸಂಪೂರ್ಣ ವಿವರವಾಗಿ ಹೇಳುತ್ತೇವೆ ಬನ್ನಿ.

ಹೌದು ಸ್ನೇಹಿತರೆ ರಶ್ಮಿಕ ಮಂದಣ್ಣ ರವರು ಹಲವಾರು ಬಾರಿ ಸಂದರ್ಶನಗಳಲ್ಲಿ ನಾನು ಮತ್ತು ವಿಜಯ್ ದೇವರಕೊಂಡ ಉತ್ತಮ ಸ್ನೇಹಿತರು ಎಂಬುದಾಗಿ ಹಲವಾರು ಬಾರಿ ಹೇಳಿಕೊಂಡಿದ್ದರು. ಹಾಗಾದರೆ ವಿಜಯ್ ದೇವರಕೊಂಡ ಅವರ ಹೆಸರೊಂದಿಗೆ ತಳಕು ಹಾಕಿಕೊಂಡಿರುವ ಹೊಸ ಹೆಸರು ಯಾವುದೆಂದು ಗೊತ್ತೇ ಹೇಳುತ್ತೇವೆ ಬನ್ನಿ. ಹೌದು ಸ್ನೇಹಿತರೆ ವಿಜಯ್ ದೇವರಕೊಂಡ ರವರ ಮುಂದಿನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಲೈಗರ್ ನ ನಾಯಕನಟಿ ಯಾಗಿರುವ ಬಾಲಿವುಡ್ನ ಖ್ಯಾತ ನಟಿ ಅನನ್ಯ ಪಾಂಡೆ.

ಹೌದು ಸ್ನೇಹಿತರೇ ಬಾಲಿವುಡ್ನ ಖ್ಯಾತ ನಟರಾಗಿರುವ ಚಂಕಿ ಪಾಂಡೆ ಅವರ ಮಗಳಾದ ಅನನ್ಯ ಪಾಂಡವರ ಹೆಸರು ವಿಜಯ್ ದೇವರಕೊಂಡ ರವರೊಂದಿಗೆ ಕೇಳಿಬರುತ್ತಿದೆ. ಇಬ್ಬರೂ ಚಿತ್ರೀಕರಣ ಅವಲ್ಲದೆ ಬಹಳಷ್ಟು ಬಾರಿ ಜೊತೆಯಾಗಿ ಹೊರಗೆ ಕಾಣಿಸಿಕೊಂಡಿದ್ದು ಈ ಮಾತುಗಳಿಗೆ ಹಲವರು ಪುಷ್ಟಿ ನೀಡುವಂತೆ ಮಾಡಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.