ನಿಖಿಲ್ ಪತ್ನಿ ರೇವತಿ 5 ತಿಂಗಳ ಗರ್ಭಿಣಿಯಾಗಿದ್ದರೂ ಸಹ ಸಂತೋಷದ ಸುದ್ದಿಯನ್ನು ಇಲ್ಲಿಯವರೆಗೂ ಹಂಚಿಕೊಂಡಿರಲಿಲ್ಲ ಯಾಕೆ ಗೊತ್ತಾ??

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಡಿಮೆ ಸಿನಿಮಾ ಮಾಡಿದರೂ ಸಹ ಜನಪ್ರಿಯರಾಗಿರುವ ನಟರಲ್ಲಿ ನಿಖಿಲ್ ಕುಮಾರ್ ಮುಂಚೂಣಿ ಸ್ಥಾನದಲ್ಲಿರುತ್ತಾರೆ. ತಂದೆ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು ಸಹ ತಮ್ಮ ಸ್ವಂತ ಪರಿಶ್ರಮದ ಮೂಲಕ ನಿಖಿಲ್ ಕುಮಾರ್ ರವರು ನಾಯಕರಾಗಿ ಬಂದವರು.

ಮೊದಲ ಚಿತ್ರದಲ್ಲೇ ಅದ್ಭುತ ಸಾಹಸ ದೃಶ್ಯಗಳು ಹಾಗೂ ಡ್ಯಾನ್ಸಿಂಗ್ ಹಾಗೂ ನಟನೆಯ ಮೂಲಕ ಕನ್ನಡ ಜನತೆಯ ಮನವನ್ನು ಗೆದ್ದವರು. ಈಗಾಗಲೇ ಕೇವಲ ಎರಡು ಚಿತ್ರಗಳಷ್ಟೇ ನಟಿಸಿರುವ ನಿಖಿಲ್ ಕುಮಾರ್ ಅವರು ಎರಡನೇ ವರ್ಗದ ಹೀರೋ ಆಗಿ ಆಗಲೇ ಗುರುತಿಸಿಕೊಂಡಿದ್ದಾರೆ. ಇನ್ನು ಕಳೆದ ಲಾಕ್ಡೌನ್ ನಲ್ಲಷ್ಟೇ ನಿಖಿಲ್ ಕುಮಾರ್ ರವರು ರೇವತಿ ಅವರನ್ನು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಅದ್ದೂರಿಯಾಗಿ ಮದುವೆಯಾಗಲು ಪ್ಲಾನ್ ಮಾಡಿದ್ದ ನಿಖಿಲ್ ಕುಮಾರ್ ರವರಿಗೆ ಅನಿರೀಕ್ಷಿತ ಲಾಕ್ಡೌನ್ ಸರಳವಾಗಿ ತೋಟದ ಮನೆಯಲ್ಲಿ ಮದುವೆ ಮಾಡುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು. ಸರಳವಾಗಿ ವಿವಾಹ ಮಹೋತ್ಸವ ನಡೆದರೂ ಕೂಡ ಇಬ್ಬರೂ ಕೂಡ ಇಷ್ಟಪಟ್ಟು ಈ ಮದುವೆ ಮಾಡಿಕೊಂಡರು. ಇದಾದ ನಂತರ ಗಂಡ-ಹೆಂಡತಿ ಇಬ್ಬರು ವಿದೇಶಕ್ಕೆ ಹನಿಮೂನ್ಗೆ ಕೂಡ ತೆರಳುವಂತೆ ಆಗಲಿಲ್ಲ.

ಮತ್ತೆ ಅದೇ ಕಾರಣ ಲಾಕ್ ಡೌನ್. ಲಾಕ್ಡೌನ್ ನಲ್ಲಿ ರಾಮನಗರದ ಬಳಿ ಇರುವ ಫಾರ್ಮಸ್ ಅಲ್ಲಿ ಗಂಡ-ಹೆಂಡತಿ ಇಬ್ಬರು ಕೃಷಿ ಮಾಡುತ್ತ ಜೀವನವನ್ನು ಕಳೆಯುತ್ತಿದ್ದರು. ಇತ್ತೀಚಿಗಷ್ಟೇ ನಿಖಿಲ್ ಕುಮಾರ್ ರವರು ತಮ್ಮ ಪತ್ನಿ ರೇವತಿ ಅವರ ವಿಚಾರವಾಗಿ ಒಂದು ಸಂತೋಷ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೌದು ಸ್ನೇಹಿತರೆ ಇದನ್ನು ಲೇಟಾಗಿ ಹೇಳಿದರೂ ಲೇಟೆಸ್ಟ್ ಆಗಿ ಹೇಳಿ ಅಭಿಮಾನಿಗಳಲ್ಲಿ ಸಂತೋಷದ ಮನೆ ಮೂಡಿಸಿದ್ದಾರೆ.

ಹೌದು ಸ್ನೇಹಿತರೆ ನಿಖಿಲ್ ಕುಮಾರ್ ರವರ ಪತ್ನಿ ರೇವತಿ ಈಗಾಗಲೇ ಐದು ತಿಂಗಳ ಗರ್ಭಿಣಿಯಾಗಿದ್ದಾರೆ. ಇದನ್ನು ಲೇಟಾಗಿ ಹೇಳಲು ಕೂಡ ಒಂದು ಕಾರಣವಿದೆಯಂತೆ ಸ್ನೇಹಿತರೆ. ಕಳೆದ ಬಾರಿ ನಿಖಿಲ್ ಕುಮಾರ್ ಹಾಗೂ ರೇವತಿ ಅವರ ಮದುವೆ ವಾರ್ಷಿಕೋತ್ಸವದ ಒಂದು ವರ್ಷದ ಸಂಭ್ರಮದ ಆಚರಣೆಯಲ್ಲಿ ಇದನ್ನು ಅನಾವರಣಗೊಳಿಸುವ ಪ್ಲಾನ್ ಇತ್ತಂತೆ. ಆದರೆ ಈಗಾಗಲೇ ಮಹಾಮಾರಿ ಜನರ ಜೀವನವನ್ನು ಕಷ್ಟದಲ್ಲಿ ದೂಡಿರುವುದರಿಂದ ಈ ಕಷ್ಟದ ಸಂದರ್ಭದಲ್ಲಿ ನಮ್ಮ ಸಂತೋಷದ ಸುದ್ದಿಯನ್ನು ಹೇಳುವುದು ಬೇಡ ಎಂದು ಅದನ್ನು ಅಲ್ಲಿಗೆ ನಿಲ್ಲಿಸಿದರಂತೆ.

ನಂತರ ಇಬ್ಬರು ಕೂಡ ನಟನೆ ಹಾಗೂ ನಿಖಿಲ್ ಕುಮಾರ್ ಅವರ ಪತ್ನಿ ಆರ್ಕಿಟೆಕ್ಟ್ ಆಗಿ ತಮ್ಮ ಪ್ರಫೆಷನಲ್ಲಿ ಮುಂದುವರೆದರು. ಈ ನಡುವಲ್ಲಿ ಮತ್ತೊಮ್ಮೆ ಲಾಕ್ಡೌನ್ ಬಂದು ಇಬ್ಬರು ಮತ್ತೊಮ್ಮೆ ತಮ್ಮ ತೋಟದ ಮನೆಗೆ ಹಿಂದಿರುಗುವಂತೆ ಆಯಿತು. ಈ ನಡುವಲ್ಲಿ ನಟ ನಿಖಿಲ್ ಕುಮಾರ್ ರವರ ಪತ್ನಿ ರೇವತಿ ಅವರು ತೋಟದ ಮನೆಯಲ್ಲಿ ಪರಿಸರಸ್ನೇಹಿ ಮನೆಯನ್ನು ಕಟ್ಟುವ ಯೋಜನೆಯನ್ನು ರೂಪಿಸಿಕೊಂಡರು. ಇದಕ್ಕೆ ಪತಿ ನಿಖಿಲ್ ಕುಮಾರ್ ಅವರು ಕೂಡ ಸಾಥ್ ನೀಡಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ ಇವರಿಬ್ಬರ ಕನಸಿನ ಪರಿಸರ ಸ್ನೇಹಿ ಮನೆ ಈ ವರ್ಷದ ಅಂತ್ಯದೊಳಗೆ ಮುಗಿಯಲಿದೆ.

ಇನ್ನು ಲಾಕ್ಡೌನ್ ನಲ್ಲಿ ಇವರಿಗೆ ಮಹಾಮಾರಿ ಕೂಡ ಬಂದಿತ್ತು. ಇದು ಇವರ ತಾತ ಹಾಗೂ ಅಜ್ಜಿಗೂ ಕೂಡ ಹರಡಿದ್ದರಿಂದ ಆ ಸಮಯದಲ್ಲಿ ಗರ್ಭಿಣಿಯಾಗಿ ದ್ದರಿಂದ ಇದು ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಲು ಉತ್ತಮ ಸಮಯವೆಂದು ಮುಂದಿನ ದಿನಗಳಲ್ಲಿ ಇದನ್ನು ಹಂಚಿಕೊಳ್ಳೋಣ ಎಂದು ನಿಖಿಲ್ ಕುಮಾರ್ ಸಹಿತ ಕುಟುಂಬ ಸದಸ್ಯರು ಅಂದುಕೊಂಡಿದ್ದರು.

ಇನ್ನು ಇತ್ತೀಚಿಗಷ್ಟೇ ನಿಖಿಲ್ ಕುಮಾರ್ ರವರು ತಮ್ಮ ಪತ್ನಿ ರೇವತಿ ಅವರ ಜನ್ಮದಿನಾಚರಣೆಯನ್ನು ವಿಕಲಚೇತನ ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ತಾವು ತಂದೆ ಯಾಗುತ್ತಿರುವ ಕುರಿತಂತೆ ಒಪ್ಪಿಕೊಂಡಿದ್ದಾರೆ. ಹೌದು ಸ್ನೇಹಿತರೆ ಜನ್ಮ ದಿನಾಚರಣೆಯ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ. ಹಲೋ ಈ ಕುರಿತಂತೆ ಅವರ ತಂದೆ ಕೂಡ ಮಾಧ್ಯಮದಲ್ಲಿ ಇನ್ನೇನು ನಾಲ್ಕು ತಿಂಗಳಲ್ಲಿ ಮೊಮ್ಮಗ ಬರಲಿದ್ದಾನೆ ಎಂಬ ಸಂತೋಷದ ಸುದ್ದಿಯನ್ನು ಕೂಡ ಹಂಚಿಕೊಂಡಿದ್ದಾರೆ. ಹೌದು ಸ್ನೇಹಿತರೆ ನಿಖಿಲ್ ಕುಮಾರ್ ಅವರ ಪತ್ನಿ ರೇವತಿ ಅವರು ಈಗ ಐದು ತಿಂಗಳ ಗರ್ಭಿಣಿಯಾಗಿದ್ದಾರೆ. ನಟ ನಿಖಿಲ್ ಕುಮಾರ್ ರವರಿಗೆ ತಂದೆಯಾಗಿರುವ ನಿಖಿಲ್ ಕುಮಾರ್ ರವರಿಗೆ ಎಲ್ಲರೂ ಶುಭ ಹಾರೈಸೋಣ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಮಿಸ್ ಮಾಡದೆ ಹಂಚಿಕೊಳ್ಳಿ.

Get real time updates directly on you device, subscribe now.