ನಟಿ ಸೌಂದರ್ಯ ರವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಕನ್ನಡದ ನಟಿ ಯಾರು ಗೊತ್ತೆ?? ಇವರು ನಮ್ಮ ಆಯ್ಕೆ ಏನ್ ಅಂತೀರಾ??

ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರರಂಗದಲ್ಲಿ ಕನ್ನಡತಿಯರು ನಟಿಯರಾಗಿ ಅದೆಷ್ಟೋ ಜನರು ಸೂಪರ್ ಸ್ಟಾರ್ ಗಳಾಗಿ ಮಿಂಚಿ ಈಗಾಗಲೇ ಜನರ ಮನದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಅಂತಹ ಕೆಲವೇ ಕೆಲವು ಕನ್ನಡ ಮೂಲದ ನಟಿ ಮಣಿಯರಲ್ಲಿ ನಮ್ಮ ನೆನಪಿನಲ್ಲಿ ಅವರು ಇರೋದೇ ಹೋದರು ಇಂದಿಗೂ ನೆನಪು ಉಳಿದುಕೊಂಡಿರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇಂದು ನಾನು ಅದೇ ಲಿಸ್ ನಲ್ಲಿ ಇರುವ ಅಗ್ರಗಣ್ಯ ನಟಿಯನ್ನು ಅವರ ಕುರಿತಂತೆ ಹೇಳಲು ಹೊರಟಿದ್ದೇವೆ.

ಬನ್ನಿ ಯಾರು ಅವರು ಹಾಗೂ ಇಂದಿನ ಕಾಲದಲ್ಲಿ ಅವರ ಸ್ಥಾನವನ್ನು ತುಂಬಬಲ್ಲ ನಟಿ ಯಾರೆಂದು ಹೇಳುತ್ತೇವೆ ಬನ್ನಿ. ಹೌದು ನಾವು ಮಾತನಾಡಲು ಹೊರಟಿರುವುದು ಕನ್ನಡ ಮೂಲದಿಂದ ಬಂದು ದಕ್ಷಿಣ ಭಾರತದಾದ್ಯಂತ ತನ್ನ ಛಾಪನ್ನು ಮೂಡಿಸಿ ಹೇಳಿದ ಹಾಗೆ ಮಾಯವಾಗಿ ಹೋದ ನಟಿ ಸೌಂದರ್ಯ ರವರ ಬಗ್ಗೆ. 1972 ರಲ್ಲಿ ಕರ್ನಾಟಕದ ಮುಳುಬಾಗಿಲು ನಲ್ಲಿ ಜನಿಸಿದ ಇವರು, ತಮ್ಮ 20ನೇ ವಯಸ್ಸಿನಲ್ಲಿ ಅಂದರೆ 1992 ರಲ್ಲಿ ಕನ್ನಡದ ಗಂಧರ್ವ ಎಂಬ ಚಿತ್ರದ ಮೂಲಕ ಚಿತ್ರ ಲೋಕಕ್ಕೆ ಪಾದಾರ್ಪಣೆ ಮಾಡಿದರು.

ನಂತರದ ದಿನಗಳಲ್ಲಿ ತೆಲುಗು ಹಾಗೂ ಹಿಂದಿ ತಮಿಳು ಚಿತ್ರರಂಗಗಳಲ್ಲಿ ಕೂಡ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡರು. ತೆಲುಗು ಚಿತ್ರರಂಗದ ವೆಂಕಟೇಶ್ ಹಾಗೂ ಸೌಂದರ್ಯ ಜೋಡಿ ಎಲ್ಲರ ಮನಗೆದ್ದು ಸೂಪರ್ ಜೋಡಿ ಆಗಿ ಕಾಣಿಸಿಕೊಂಡಿತ್ತು. ಹೀಗೆ ಸೌಂದರ್ಯಂ ಅವರು ಕನ್ನಡ ತಮಿಳು ತೆಲುಗು ಹಿಂದಿ ಹೀಗೆ ಎಲ್ಲಾ ಚಿತ್ರರಂಗಗಳ ಟಾಪ್ ನಟರೊಂದಿಗೆ ನಟಿಸಿ ಭಾರತೀಯ ಚಿತ್ರಲೋಕದ ಅಂದಿನ ದಿನಗಳ ಅನಭಿಷಿಕ್ತ ರಾಣಿಯಾಗಿ ಮೆರೆದರು. ಕಮಲ್ ಹಾಸನ್ ಚಿರಂಜೀವಿ ವೆಂಕಟೇಶ್ ಪ್ರಭುದೇವ ವಿಷ್ಣುವರ್ಧನ್ ಹೀಗೆ ಎಲ್ಲರೊಂದಿಗೂ ಪರದೆಯನ್ನು ಹಂಚಿಕೊಂಡಿದ್ದಾರೆ. ಅವರ ನಟನೆಯನ್ನು ನೋಡಿ ಹೊಗಳದವರು ಇಲ್ಲ.

ಪ್ರತಿಯೊಬ್ಬ ವೀಕ್ಷಕರ ಮನಸ್ಸಿನಲ್ಲಿ ಅಂದಿನಿಂದ ಇಂದಿನವರೆಗೂ ಅದೇ ತರಹದ ಗೌರವ ಹಾಗೂ ಅಭಿಮಾನವನ್ನು ಹೊಂದಿರುವಂತ ಏಕೈಕ ನಟಿಯೆಂದರೆ ಅದು ಸೌಂದರ್ಯ ಎಂದರೆ ತಪ್ಪಾಗಲಾರದು. ಸೌಂದರ್ಯ ರವರ ನಟಿ ಹಿಂದೆ ಬಂದಿಲ್ಲ ಮುಂದೆ ಬರೋದು ಚಾನ್ಸೇ ಇಲ್ಲ ಎಂಬ ಮಾತುಗಳು ಆಗಾಗ ಕೇಳಿಬರುತ್ತದೆ. 2003 ರಲ್ಲಿ ರಘು ಎಂಬುವರನ್ನು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಅವಧಿಗೆ ಇದು ಸಹಿಸಲು ಸಾಧ್ಯವಾಗಲಿಲ್ಲ ಅನಿಸುತ್ತೆ 2004 ರಲ್ಲಿ ಆಪ್ತಮಿತ್ರ ಎಂಬ ಬಹುನಿರೀಕ್ಷಿತ ಚಿತ್ರ ಬಿಡುಗಡೆಯ ವೇಳೆಗೆ ವಿಮಾನ ಅಪ್ಪಘಾತದಲ್ಲಿ ಭಾರತ ಕಂಡ ಅದ್ಭುತ ನಟರಲ್ಲಿ ಒಬ್ಬರಾದ ಸೌಂದರ್ಯ ಅವರು ನಮ್ಮನ್ನು ಬಿಟ್ಟು ಅಗಲಿದ್ದರು.

ಭಾರತ ಚಿತ್ರರಂಗ ಒಬ್ಬ ಧೀಮಂತ ನಟಿಯನ್ನು ಕಳೆದುಕೊಂಡು ಅನಾಥವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಒಬ್ಬ ನಟಿ ಇವರ ಸ್ಥಾನವನ್ನು ಸಮರ್ಥವಾಗಿ ತುಂಬಿಸಬೇಕು ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬ ಮಾತುಕತೆ ನಡೆಯುತ್ತಿದೆ. ಅವರ್ಯಾರು ಎಂದು ಹೇಳುತ್ತೇವೆ ಬನ್ನಿ. ಹೌದು ಸೌಂದರ್ಯದ ಅವರಂತೆ ನಟನೆ ನಾಟ್ಯ ಹಾಗೂ ಭಾವನೆಯನ್ನು ವ್ಯಕ್ತಪಡಿಸುವುದರಲ್ಲಿ ಅವರಂತೆ ಪ್ರತಿಭೆ ಹಾಗೂ ಸಾಮರ್ಥ್ಯವುಳ್ಳ ನಟಿಯೆಂದರೆ,

ಅದು ಇಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡುತ್ತಿರುವ ನಟಿ ಅದಿತಿ ಪ್ರಭುದೇವ. ನಟಿಸಿದ್ದು ಬೆರಳೆಣಿಕೆಯಷ್ಟು ಚಿತ್ರಗಳಾದರೂ ಸೌಂದರ್ಯ ರವರಂತೆ ಅದೇ ಚಾರ್ಮ್ ಹಾಗೂ ಲವಲವಿಕೆಯ ನಟನೆ ಅಧಿತಿ ಪ್ರಭುದೇವ್ ಅವರಲ್ಲಿ ಕೂಡ ಕಾಣಿಸುತ್ತದೆ. ಹಾಗಾಗಿ ಕೆಲ ಅಭಿಮಾನಿಗಳ ಪ್ರಕಾರ ನಟಿ ಸೌಂದರ್ಯ ರವರ ಸ್ಥಾನವನ್ನು ಕನ್ನಡ ಚಿತ್ರರಂಗದಲ್ಲಿ ಅದಿತಿ ಪ್ರಭುದೇವ ರವರು ಸಮರ್ಥವಾಗಿ ತುಂಬಿಸ ಬಲ್ಲರು ಎಂಬ ವಿಶ್ವಾಸವಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ ಹಾಗೂ ಈ ಕುರಿತಂತೆ ನಿಮ್ಮ ಪ್ರಶ್ನೆಗಳನ್ನು ಖಂಡಿತವಾಗಿ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಚರ್ಚಿಸಿ.