ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಹುಬಲಿ ಪ್ರಭಾಸ್ ಇಷ್ಟಪಡುವ ಕನ್ನಡದ 4 ನಟರು ಯಾರ್ಯಾರು ಗೊತ್ತೇ??

Cinema

ನಮಸ್ಕಾರ ಸ್ನೇಹಿತರೇ ಇಡೀ ಭಾರತೀಯ ಚಿತ್ರರಂಗದಲ್ಲಿ ಒಂದು ಚಿತ್ರದ ಮೂಲಕ ಭಾರತೀಯ ಚಿತ್ರರಂಗದ ಸ್ಟ್ಯಾಂಡರ್ಡ್ ಅನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದ ಚಿತ್ರವೆಂದರೆ ಅದು ಬಾಹುಬಲಿ ಸರಣಿ ಚಿತ್ರಗಳು. ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಂತಹ ಈ ಚಿತ್ರಗಳು ಕೇವಲ ಬಾಕ್ಸಾಫೀಸ್ ನಲ್ಲಿ ಸಾವಿರಾರು ಕೋಟಿಯನ್ನು ಕೊಳ್ಳೆಹೊಡೆದು ಮಾತ್ರವಲ್ಲದೆ ದೇಶ-ವಿದೇಶದ ವೀಕ್ಷಕರ ಮನಸ್ಸನ್ನು ಗೆದ್ದು ಸ್ಮರಣೀಯ ಚಿತ್ರವಾಗಿ ಮೂಡಿಬಂದಿದೆ. ಈ ಚಿತ್ರದ ನಾಯಕ ನಟ ನಮ್ಮ ನಿಮ್ಮೆಲ್ಲರ ನೆಚ್ಚಿನ ಡಾರ್ಲಿಂಗ್ ಖ್ಯಾತಿಯ ಪ್ರಭಾಸ್.

ಹೌದು ತೆಲುಗು ಚಿತ್ರರಂಗದ ರೆಬಲ್ ಸ್ಟಾರ್ ಎಂದೇ ಖ್ಯಾತರಾಗಿರುವ ಪ್ರಭಾಸ್ ಈ ಚಿತ್ರಕ್ಕಾಗಿ ಅದೆಷ್ಟು ಪರಿಶ್ರಮ ಪಟ್ಟಿದ್ದಾರೆ ಎಂದರೆ ಅದರ ವಿಡಿಯೋ ತುಣುಕು ನೋಡಿದವರಿಗೆ ಗೊತ್ತು. ರಾಜಮೌಳಿ ಅವರು ಬಾಹುಬಲಿ ಪಾತ್ರಕ್ಕಾಗಿ ಪ್ರಭಾಸ್ ರವರಿಗೆ ಅತ್ಯಂತ ಕಠಿಣ ಕಸರತ್ತನ್ನು ಮಾಡುವ ಕೆಲಸವನ್ನು ನೀಡಿದ್ದರು. ಕೇವಲ ದೈಹಿಕವಾಗಿ ಮಾತ್ರ ಪರಿಪೂರ್ಣ ರಾಗ್ ಅದೆ ಪ್ರಭಾಸ್ ರವರು ಪಾತ್ರಕ್ಕೆ ಕೂಡ ಹಂಡ್ರೆಡ್ ಪರ್ಸೆಂಟೇಜ್ ನ್ಯಾಯವನ್ನು ನೀಡಿದ್ದಾರೆ. ಇದಕ್ಕಾಗಿ ಇಂದಿಗೂ ಭಾರತವನ್ನು ಕೆಲ ವಿದೇಶಿಗರು ಬಾಹುಬಲಿ ಚಿತ್ರದ ನಾಡೆಲ್ಲವೇ ಎಂದು ಕರೆಯುತ್ತಾರೆ. ಬನ್ನಿ ಇಂದು ಪ್ರಭಾಸ್ ಅವರ ಕುರಿತಂತೆ ಕೆಲ ವಿಚಾರಗಳನ್ನು ನಾವು ಹೇಳಲು ಹೊರಟಿದ್ದೇವೆ.

ತೆಲುಗು ಚಿತ್ರರಂಗದ ಮೂಲಕ ತನ್ನತನವನ್ನು ಆರಂಭಿಸಿದವರು ಈಗ ಬಾಲಿವುಡ್ ನಲ್ಲಿ ಕೂಡ ಬಿಗ್ ಬಜೆಟ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಒಂದು ಈಗ ಮೂಡಿಬರುತ್ತಿರುವ ರಾಮಾಯಣದ ಕುರಿತಂತೆ ಚಿತ್ರ. ಇಂದು ನಾವು ಪ್ರಭಾಸ್ ರವರ ಕುರಿತಂತೆ ಹೇಳಲು ಹೊರಟಿರುವ ವಿಚಾರ ಏನೆಂದರೆ ಪ್ರಭಾಸ್ ರವರಿಗೆ ಕನ್ನಡದಲ್ಲಿ ನಾಲ್ಕು ನಟರು ತುಂಬಾ ಇಷ್ಟವಂತೆ. ಆ ನಾಲ್ಕು ನಟರು ಯಾರೆಂಬುದನ್ನು ನಾವು ನಿಮಗೆ ಹೇಳುತ್ತೇನೆ.

ಉಪೇಂದ್ರ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟರಾದ ರಿಯಲ್ ಸ್ಟಾರ್ ಉಪೇಂದ್ರ ರವರು ಪ್ರಭಾಸ್ ರವರಿಗೆ ತುಂಬಾ ಇಷ್ಟವಂತೆ. ರಿಯಲ್ ಸ್ಟಾರ್ ಉಪೇಂದ್ರ ರವರು ಕೂಡ ತೆಲುಗಿನಲ್ಲಿ ಅತ್ಯಂತ ಮೆಚ್ಚುಗೆಯನ್ನು ಪಡೆದಿರುವ ಕನ್ನಡದ ಏಕೈಕ ನಟ ಎಂದೇ ಹೇಳಬಹುದು. ರೆಬಲ್ ಸ್ಟಾರ್ ಪ್ರಭಾಸ್ ರವರು ಕೂಡ ರಿಯಲ್ ಸ್ಟಾರ್ ಉಪೇಂದ್ರ ಅವರ ತೆಲುಗು ಚಿತ್ರಗಳ ನಟನೆ ನೋಡಿ ಫಿದಾ ಆಗಿದ್ದಾರೆ. ಹಾಗಾಗಿ ಈ ರಿಯಲ್ ಸ್ಟಾರ್ ಉಪೇಂದ್ರ ಅಂದರೆ ಪ್ರಭಾಸ್ ರವರಿಗೆ ಕನ್ನಡದಲ್ಲಿ ಇಷ್ಟವಾದ ನಟರಲ್ಲಿ ಒಬ್ಬರು.

ಡಾ ರಾಜಕುಮಾರ್ ಕನ್ನಡ ಚಿತ್ರರಂಗದ ದೊಡ್ಡಣ್ಣ ಅಥವಾ ನಟ ಸಾರ್ವಭೌಮ ಎಂದೇ ಖ್ಯಾತಿಯಾಗಿರುವ ಡಾಕ್ಟರ್ ರಾಜಕುಮಾರ್ ಅವರು ಕೂಡ ಕೆಳಗಿನ ರೆಬೆಲ್ ಸ್ಟಾರ್ ಪ್ರಭಾಸ್ ರವರಿಗೆ ತುಂಬಾನೇ ಇಷ್ಟ. ರೆಬೆಲ್ ಸ್ಟಾರ್ ಪ್ರಭಾಸ್ ಅವರ ಹೇಳುವಂತೆ ರಾಜಕುಮಾರ್ ರವರ ಚಿತ್ರಗಳನ್ನು ಅವರು ಬಾಲ್ಯದಿಂದಲೂ ನೋಡಿದ್ದಾರಂತೆ. ರೆಬಲ್ ಸ್ಟಾರ್ ಪ್ರಭಾಸ್ ರವರಿಗೆ ಬಾಲ್ಯದಿಂದಲೂ ಕನ್ನಡದಲ್ಲಿ ಗಾನಗಂಧರ್ವ ನಟಸಾರ್ವಭೌಮ ರಾಜಕುಮಾರ್ ಎಂದರೆ ತುಂಬಾನೇ ಇಷ್ಟವಂತೆ. ಹಾಗಾಗಿ ರೆಬಲ್ ಸ್ಟಾರ್ ಪ್ರಭಾಸ್ ರವರಿಗೆ ಕನ್ನಡದಲ್ಲಿ ಎರಡನೇ ಅತಿ ಹೆಚ್ಚು ಇಷ್ಟವಾದ ನಟ ಎಂದರೆ ಅದು ಡಾಕ್ಟರ್ ರಾಜಕುಮಾರ್.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗಾನಗಂಧರ್ವ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಕಿರಿಯ ಪುತ್ರ ಕನ್ನಡ ಚಿತ್ರರಂಗದ ಆಲ್-ರೌಂಡರ್ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅವರಿಗೆ ಕನ್ನಡದಲ್ಲಿ ಇಷ್ಟವಾಗಿರುವ ಮೂರನೇ ನಟ ಎಂದು ಹೇಳಬಹುದು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಡ್ಯಾನ್ಸ್ ಹಾಗೂ ಸಾಹಸ ದರ್ಶಿಗಳು ಎಂಥವರನ್ನು ಕೂಡ ಅವರತ್ತ ಆಕರ್ಷಿಸುವಂತೆ ಮಾಡುತ್ತದೆ. ಇದೇ ರೀತಿಯಾಗಿ ರೆಬೆಲ್ ಸ್ಟಾರ್ ಪ್ರಭಾಸ್ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಡ್ಯಾನ್ಸ್ ಸಾಹಸ ದೃಶ್ಯಗಳು ಹಾಗೂ ನಟನೆಗೆ ಫಿದಾ ಆಗಿದ್ದಾರೆ.

ಇನ್ನು ಕೊನೆಯದಾಗಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಎಂದೇ ಖ್ಯಾತರಾಗಿರುವ ನಟ ಕಿಚ್ಚ ಸುದೀಪ್ ರವರು ಪ್ರಭಾಸ್ ರವರ ಅವರಲ್ಲಿ ಕೂಡ ಒಬ್ಬರು. ಕಿಚ್ಚ ಸುದೀಪ್ ರವರ ತಮ್ಮ ಅಭಿನಯದಿಂದಲೇ ಕನ್ನಡ ತೆಲುಗು ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಂಡ ಅಂತಹ ಅಪರೂಪದ ಕಲಾವಿದ. ಅಲ್ಲದೆ ಪ್ರಭಾಸ್ ಅವರ ಬಾಹುಬಲಿ ಚಿತ್ರದಲ್ಲಿ ಕೂಡ ಅಸ್ಲಾಂ ಖಾನ್ ಎಂಬ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರು ಕಾಣಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಹಾಗೂ ರೆಬಲ್ ಸ್ಟಾರ್ ಪ್ರಭಾಸ್ ರವರ ನಡುವೆ ಸ್ನೇಹ ಸಂಬಂಧ ಉತ್ತಮವಾಗಿದೆ. ಹೀಗಾಗಿ ರೆಬೆಲ್ ಸ್ಟಾರ್ ರವರ ಫೇವರಿಟ್ ನಟರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಒಬ್ಬರು.

ನೋಡಿದ್ರಲ್ಲ ಸ್ನೇಹಿತರೇ ಇಡಿ ವಿಶ್ವವೇ ಮೆಚ್ಚಿ ಕೊಂಡಾಡುತ್ತಿರುವ ರೆಬೆಲ್ ಸ್ಟಾರ್ ಪ್ರಭಾಸ್ ರವರ ನೆಚ್ಚಿನ ನಾಲ್ಕು ಕನ್ನಡ ನಟರನ್ನು ನಾವು ನಿಮಗೆ ಇಂದು ಹೇಳಿದ್ದೇವೆ. ಈಗಾಗಲೇ ಕೇವಲ 21 ಚಿತ್ರಗಳನ್ನಷ್ಟೇ ಮಾಡಿರುವ ಪ್ರಭಾಸ್ ಅವರು ಭಾರತ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ರಲ್ಲಿ ಒಬ್ಬರಾಗಿದ್ದಾರೆ. ಇನ್ನೂ ಅವರ ಪ್ರತಿ ಚಿತ್ರಗಳು ಪ್ಯಾನ್ ಇಂಡಿಯಾ ಆಗಿ ಬಿಡುಗಡೆ ಆಗುತ್ತಿರುವುದರಿಂದ ಅವರ ಚಿತ್ರಗಳ ಮಾರುಕಟ್ಟೆ ಕೂಡ ವಿದೇಶಗಳನ್ನು ಮೀರಿ ಬೆಳೆಯುತ್ತಿದೆ. ಇನ್ನು ನಾವು ನೀಡಿರುವ ಮಾಹಿತಿ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡು ಮೂಲಕ ತಿಳಿಸಿ.

Leave a Reply

Your email address will not be published. Required fields are marked *