ನಮ್ಮನೆ ಯುವರಾಣಿ ಖ್ಯಾತಿಯ ಅಂಕಿತ ಅಮರ್ ಅವರ ಕ್ರಶ್ ಯಾರು ಗೊತ್ತಾ? ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ.

Cinema

ನಮಸ್ಕಾರ ಸ್ನೇಹಿತರೇ ಇಂದಿನ ದಿನಗಳಲ್ಲಿ ಹೆಚ್ಚಿನ ವೀಕ್ಷಕರು ಧಾರಾವಾಹಿಯತ್ತ ಮುಖ ಮಾಡಿದ್ದಾರೆ. ಹೌದು ಲಾಕ್ ಡೌನ್ ಕಾರಣದಿಂದಾಗಿ ಚಿತ್ರಮಂದಿರಗಳು ಮುಚ್ಚಿದ್ದರಿಂದ ಇದೀಗ ಸಾಕಷ್ಟು ಜನರಿಗೆ ಧಾರಾವಾಹಿಗಳ ಪ್ರತಿದಿನ ಮನರಂಜನೆ ನೀಡುತ್ತವೆ. ಇನ್ನು ಇಂತಹ ಧಾರವಾಹಿಗಳ ಸಾಲಿನಲ್ಲಿ ‘ನಮ್ಮನೆ ಯುವರಾಣಿ’ ಧಾರಾವಾಹಿ ಕೂಡ ಒಂದು.

ಹೌದು ಕನ್ನಡದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಸಾಕಷ್ಟು ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ಇದರಲ್ಲಿ ಸಾಕಷ್ಟು ಕಲಾವಿದರು ತಮ್ಮದೇ ಆದ ಪಾತ್ರಗಳಿಗೆ ಜೀವ ತುಂಬಿ ಅಮೋಘವಾಗಿ ನಟಿಸಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ನಾಯಕ ನಟಿ ಮೀರಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅಂಕಿತಾ ಅಮರ್. ತಮ್ಮ ಅಮೋಘವಾದ ನಟನೆಯ ಮೂಲಕ ಇವರು ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ನಟಿ ಅಂಕಿತಾ ಅಮರ್ ಅವರು ಹುಟ್ಟಿ ಬೆಳೆದಿದ್ದು ಎಲ್ಲ ಮೈಸೂರಿನಲ್ಲಿ. ಇದೀಗ ಅವರಿಗೆ 23 ವರ್ಷ ವಯಸ್ಸು. ಇನ್ನು ನಟಿಸುವುದು ಮಾತ್ರವಲ್ಲದೆ ಅವರು ಕನ್ನಡದ ಹಲವಾರು ಹಾಡುಗಳನ್ನು ಕೂಡ ಹಾಡಿ ಉತ್ತಮ ಹಾಡುಗಾರ್ತಿ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರರಾಗಿದ್ದಾರೆ. ಇನ್ನೂ ಅವರು ಭರತನಾಟ್ಯದಲ್ಲಿ ಹೆಸರು ಮಾಡಬೇಕೆಂದು ಸಾಕಷ್ಟು ಆಸೆಯನ್ನು ಹೊಂದಿದ್ದಾರಂತೆ. ನಟಿ ಅಂಕಿತ ಅಮರ್ ಅವರು ಕನ್ನಡ ಕಿರುತೆರೆಯ ಪುಟ್ಟಗೌರಿ ಮದುವೆ ಎಂಬ ಧಾರಾವಾಹಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಬಂದವರು.

ನಂತರ ಅವರು ಕನ್ನಡ ಕಿರುತೆರೆ ಮತ್ತೊಂದು ಧಾರವಾಹಿಯಾದ ಕುಲವಧು ಎಂಬ ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದರು. ಆದರೆ ಅವರಿಗೆ ಕೀರ್ತಿ ಹವಿಸ್ಸನ್ನು ತಂದುಕೊಟ್ಟಿದ್ದು ಮಾತ್ರ ನಮ್ಮನೆ ಯುವರಾಣಿ ಧಾರಾವಾಹಿ. ಹೌದು ಈ ಧಾರಾವಾಹಿಯಲ್ಲಿ ಮೀರಾ ಪಾತ್ರದಲ್ಲಿ ಮಿಂಚಿದ ನಟಿ ಅಂಕಿತಾ ಅಮರ್ ಅವರು ಇದೀಗ ಕಿರುತೆರೆಯ ಸ್ಟಾರ್ ನಟಿಯರಲ್ಲಿ ಒಬ್ಬರು. ಇನ್ನು ಅಂಕಿತ ಅಮರ್ ಅವರು ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ.

ಸಂಗೀತ, ಸಿನಿಮಾ, ಧಾರಾವಾಹಿ, ನಟನೆ, ಶಿಕ್ಷಣ, ನೃತ್ಯ, ಸೌಂದರ್ಯ ಹೀಗೆ ಹಲವಾರು ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದ ಸಂದರ್ಶನಗಳಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳುತ್ತಾ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಇನ್ನು ಅವರ ತಂದೆ-ತಾಯಿ ರಂಗಭೂಮಿ ಕಲಾವಿದರಾದರಿಂದ ಅಂಕಿತ ಅಮರ್ ಅವರಿಗೆ ಬಾಲ್ಯದಿಂದಲೇ ನಟನೆಯ ಬಗ್ಗೆ ಆಸಕ್ತಿ ಇತ್ತು.

ಇನ್ನು ಅಂಕಿತ ಅಮರ್ ಅವರು ಕ್ರಶ್ ಕುರಿತಾದ ವಿಷಯದ ಬಗ್ಗೆ ಮಾತನಾಡಿದ್ದು, ಅವರು ಯಾರು ಎಂಬುದನ್ನು ಕೂಡ ಅವರು ಹೇಳಿದ್ದಾರೆ. ಹೌದು ಅಂಕಿತ ಅಮರ್ ಅವರು ಪಿಯುಸಿಯಲ್ಲಿ ಓದುತ್ತಿದ್ದಾಗ ಒಬ್ಬರು ಪ್ರಾಧ್ಯಾಪಕರು ಕ್ರಶ್ ಆಗಿದ್ದರಂತೆ. ಅಷ್ಟೇ ಅಲ್ಲದೆ ಅವರೆಂದರೆ ಎಲ್ಲ ಹುಡುಗಿಯರಿಗೂ ಕೂಡ ಇಷ್ಟವಾಗಿದ್ದರಂತೆ. ಇನ್ನು ಆ ಸಮಯದಲ್ಲಿ ಮೊಗ್ಗಿನ ಮನಸ್ಸು ಸಿನಿಮಾ ತೆರೆಕಂಡಿದ್ದು ಎಲ್ಲ ಹುಡುಗಿಯರು ಕೂಡ ರಾಧಿಕಾ ಪಂಡಿತ್ ಎಂದು ತಿಳಿದು ಹಾಡು ಹಾಡುತ್ತಾ ಸರ್ ಅವರನ್ನು ನೋಡುತ್ತಿದ್ದೆವು ಎಂದು ಹೇಳಿದ್ದಾರೆ.

ಇನ್ನೂ ಅವರು ಕೂಡ ಚೆನ್ನಾಗಿ ಪಾಠ ಮಾಡುತ್ತಿದ್ದು ಆ ಸರ್ ಕ್ಲಾಸ್ ಇವತ್ತು ಇರ್ಲಪ್ಪಾ ಎಂದು ಬೇಡಿಕೊಳ್ಳುತ್ತಿದ್ದರು ಅಂತೆ. ಅಷ್ಟರಮಟ್ಟಿಗೆ ಆ ಪ್ರಾಧ್ಯಾಪಕರು ಹುಡುಗಿಯರ ಮೇಲೆ ಪ್ರಭಾವ ಬೀರಿದಂತೆ. ಇನ್ನು ಆ ಅಧ್ಯಾಪಕರು ಯಾರು ಎಂಬುದನ್ನು ಅಂಕಿತ ಅಮರ್ ಅವರು ಬಹಿರಂಗಪಡಿಸಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದ್ದು ಸಾಕಷ್ಟು ಅಭಿಮಾನಿಗಳು ಆ ಸರ್ ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರಂತೆ? ಇನ್ನು ಅವರು ಯಾರು ಎಂಬುದನ್ನು ಅಂಕಿತ ಅಮರ ಅವರೇ ಹೇಳಬೇಕಾಗಿದೆ.

Leave a Reply

Your email address will not be published. Required fields are marked *