ಅಸಲಿಗೆ ಅನುಷ್ಕಾ ಶೆಟ್ಟಿ ರವರು ಮೊದಲು ನಟಿಸಿದ್ದು ಕನ್ನಡದ ಧಾರಾವಾಹಿಯಲ್ಲಿ ನಿಮಗೆ ಗೊತ್ತೇ? ಯಾವ ಧಾರವಾಹಿ ಹಾಗೂ ಹೇಗಿದ್ದಾರೆ ನೋಡಿ.

Cinema

ನಮಸ್ಕಾರ ಸ್ನೇಹಿತರೇ ನೀವು ಅರುಂಧತಿ, ಬಿಲ್ಲಾ, ಬಾಹುಬಲಿ ಸಿನಿಮಾ ನೋಡಿರುತ್ತಿರಿ. ಅದರಲ್ಲಿ ಅನುಷ್ಕಾ ಶೆಟ್ಟಿಯವರೇ ನಿಮ್ಮ ನೆಚ್ಚಿನ ಹಿರೋಯಿನ್ ಆಗಿರುತ್ತಾರೆ. ಆದರೇ ಅನುಷ್ಕಾ ಶೆಟ್ಟಿ ಕನ್ನಡದವರು ಎಂದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಟಾಲಿವುಡ್ ನಲ್ಲಿ ಅವಕಾಶ ಸಿಗುವುದಕ್ಕಿಂತ ಮುಂಚೆ ಅನುಷ್ಕಾ ನೆಟ್ಟಿ ಸ್ಯಾಂಡಲ್ ವುಡ್ ನಲ್ಲಿ ಅವಕಾಶಗಳಿಗಾಗಿ ಹಲವಾರು ಜನರ ಮನೆಯ ಬಾಗಿಲು ತಟ್ಟಿದ್ದ ಇಂಟರೆಸ್ಟಿಂಗ್ ಸುದ್ದಿ ಈಗ ಹೊರ ಬಂದಿದೆ. ಪುತ್ತೂರು ಮೂಲದ ಕುಟುಂಬದಲ್ಲಿ ಜನಿಸಿದ್ದ ಅನುಷ್ಕಾ ಪದವಿ ಮುಗಿಸಿ, ಬೆಂಗಳೂರಿಗೆ ಸಿನಿಮಾ ನಟಿಯಾಗಬೇಕೆಂದು ಬರುತ್ತಾರೆ.

ಆದರೇ ಇಲ್ಲಿ ನೂರಾರು ಆಡಿಷನ್ ಗಳಲ್ಲಿ ಭಾಗವಹಿಸಿದರೂ, ಒಂದು ಅವಕಾಶವೂ ಸಹ ಸಿಗುವುದಿಲ್ಲ. ಈ ಮಧ್ಯೆ ಚಿಕ್ಕಂದಿನಲ್ಲಿಯೇ ಯೋಗಪಟುವಾಗಿದ್ದ ಅನುಷ್ಕಾ, ಜೀವನ ನಿರ್ವಹಣೆಗಾಗಿ ಬೆಂಗಳೂರಿನಲ್ಲಿ ಯೋಗ ಟೀಚರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ಈ ಮಧ್ಯೆ 2004 ರಲ್ಲಿ ಕನ್ನಡದ ಹೊಸ ಧಾರವಾಹಿಯೊಂದು ಸೆಟ್ಟೆರುತ್ತದೆ. ಆ ಧಾರವಾಹಿ ಹೊಸ ಹಿರೋಯಿನ್ ರನ್ನು ಹುಡುಕುತ್ತಿರುತ್ತಾರೆ. ಕೊನೆಗೆ ಆ ಧಾರವಾಹಿಯಲ್ಲಿ ಒಂದು ತನಿಖಾಧಿಕಾರಿಯ ಪಾತ್ರವಿತ್ತಂತೆ. ಕೊನೆಗೆ.ನಿರ್ದೇಶಕರು ಆ ಪಾತ್ರವನ್ನು ಅನುಷ್ಕಾ ಶೆಟ್ಟಿಯವರ ಬಳಿ ಮಾಡಿಸಲು ತೀರ್ಮಾನಿಸಿದರಂತೆ.

ಈ ಧಾರವಾಹಿಯ ಲೀಡ್ ರೋಲ್ ಮಾಡುತ್ತಿದ್ದು ಕನ್ನಡದ ನಟಿ ನಿಶಿತಾ ಗೌಡ. ಧಾರವಾಹಿಯ ಸೆಟ್ ನಲ್ಲಿ ಅನುಷ್ಕಾ ರನ್ನ ಸಹನಾ ಶೆಟ್ಟಿ ಎಂದು ಹೆಸರು ಬದಲಾಯಿಸಿದ್ದರಂತೆ. ಅಷ್ಟಕ್ಕೂ ಆ ಧಾರವಾಹಿಯ ಹೆಸರು ಬಣ್ಣ ಎಂದು. ಕೆಲವೇ ಎಪಿಸೋಡುಗಳಲ್ಲಿ ಆ ಧಾರವಾಹಿಯ ಶೂಟಿಂಗ್ ಅರ್ಧಕ್ಕೆ ನಿಂತಿತಂತೆ. ಧಾರವಾಹಿ ಚಿತ್ರೀಕರಣ ವೇಳೆ ನಿಶಿತಾ ಗೌಡ ಸಂಪರ್ಕದಲ್ಲಿದ್ದ ಅನುಷ್ಕಾ ನಂತರ ಸಂಪರ್ಕಕ್ಕೆ ಸಿಗಲಿಲ್ಲವಂತೆ. ಈ ಮಧ್ಯೆ ಹಲವು ಧಾರವಾಹಿ, ಸಿನಿಮಾಗಳಲ್ಲೂ ಅನುಷ್ಕಾ ಗೆ ಚಾನ್ಸ್ ಸಿಗಲಿಲ್ಲ.

ಕೊನೆಗೆ ಒಂದು ದಿನ ಮುಂಬೈನಲ್ಲಿ ಇರುವಾಗ ತೆಲುಗಿನ ಸೂಪರ್ ಸಿನಿಮಾ ಹಿರೋಯಿನ್ ಆಫರ್ ಬಂದಿತಂತೆ. ಆದರೆ ಮೊದಲು ನಟಿ ಅನುಷ್ಕಾ ಆ ಆಫರ್ ನ್ನ ರಿಜೆಕ್ಟ್ ಮಾಡಿದರಂತೆ. ಕೊನೆಗೆ ಆ ಸಿನಿಮಾದ ನಾಯಕ ನಾಗಾರ್ಜುನರೇ ಬಂದು ಅನುಷ್ಕಾರನ್ನ ಒಪ್ಪಿಸಿದರಂತೆ. ಸೂಪರ್ ನಿಂದ ಶುರುವಾದ ಅನುಷ್ಕಾ ಶೆಟ್ಟಿ ಹವಾ ಇದುವರೆಗೂ ತೆಲುಗು ಇಂಡಸ್ಟ್ರಿಯಲ್ಲಿ ನಿಂತಿಲ್ಲ. ಒಬ್ಬ ಅದ್ಭುತ ನಟಿಯನ್ನ ಕನ್ನಡದ ನಿರ್ದೇಶಕರು ಸರಿಯಾಗಿ ಗುರುತಿಸದೇ ಕಳೆದುಕೊಂಡೆವಾ ಅನಿಸುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Leave a Reply

Your email address will not be published. Required fields are marked *