ಬಿಗ್ ನ್ಯೂಸ್: ಬಿಗ್ ಬಾಸ್ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಅಧಿಕೃತ ಸಿಹಿ ಸುದ್ದಿ, ಮರು ಪ್ರಾರಂಭ ಯಾವಾಗ ಗೊತ್ತಾ?

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಸಿನಿಮಾ ರಂಗ ಗಳಿಗಿಂತ ಈಗ ಕಿರುತೆರೆಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳು ಕನ್ನಡಿಗರ ಮನದಾಳವನ್ನು ಮುಟ್ಟಿ ಈಗ ಅತ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಧಾರವಾಹಿಗಳು ಕೆಲವು ರಿಯಾಲಿಟಿ ಶೋಗಳು ಅಂತೂ ಪ್ರೇಕ್ಷಕರಿಂದ ಅಪಾರ ಮಟ್ಟದ ಜನಮನ್ನಣೆಗಳಿಸಿ ಕೊಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅದರಲ್ಲಿ ಒಂದು ರಿಯಾಲಿಟಿ ಶೋ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ.

ಹೌದು ನಾವು ಮಾತನಾಡಲು ಹೊರಟಿರುವುದು ಕನ್ನಡ ಕಿರುತೆರೆ ಇತಿಹಾಸದಲ್ಲಿ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದೆನಿಸಿಕೊಂಡಿರುವ ಬಿಗ್ ಬಾಸ್ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಬಿಗ್ ಬಾಸ್ ಕನ್ನಡದ ಕಿರುತೆರೆ ಇತಿಹಾಸದಲ್ಲೇ ಅತ್ಯಂತ ಶ್ರೀಮಂತ ರಿಯಾಲಿಟಿ ಶೋ. ಇದನ್ನು ನಿರೂಪಣೆ ಮಾಡುತ್ತಿರುವುದು ಕೂಡ ಅತ್ಯಂತ ಯಶಸ್ವಿ ನಟ ಕಿಚ್ಚ ಸುದೀಪ್ ರವರು. ಈಗಾಗಲೇ ಇಲ್ಲಿಯವರೆಗೆ 8 ಸೀಸನ್ ಗಳನ್ನು ಕಂಡಿದೆ.

ಈ ಬಾರಿಯ ಬಿಗ್ ಬಾಸ್ ಸೀಸನ್ 8 ಈ ಮಹಾಮಾರಿಯ ಕಾರಣದಿಂದಾಗಿ ಲಾಕ್ ಡೌನ್ ಕಠಿಣ ನಿಯಮಗಳಿಂದಾಗಿ ಅರ್ಧಕ್ಕೆ ನಿಂತು ಹೋಗಿದೆ ಎಂಬುದು ನಿಮಗೆ ಈಗಾಗಲೇ ಗೊತ್ತಿದೆ. ಹೌದು ಈ ಬಾರಿಯ ಕಠಿಣ ನಿಯಮಗಳಿಂದಾಗಿ ಬಿಗ್ ಬಾಸ್ ಕನ್ನಡ ಸೀಸನ್ 8 72ನೇ ದಿನಕ್ಕೆ ನಿಂತು ಸ್ಪರ್ಧಿಗಳು ತಮ್ಮ ಮನೆಗೆ ಹೋಗು ವಂತಾಗಿತ್ತು. ಬಿಗ್ ಬಾಸ್ ಅನ್ನು ದಿನಾಲು ನೋಡುತ್ತಿದ್ದ ಪ್ರೇಕ್ಷಕರು ಅರ್ಧಕ್ಕೆ ನಿಂತಿದ್ದನ್ನು ನೋಡಿ ತುಂಬಾ ಬೇಸರವಾದರೂ. ವಾರಪೂರ್ತಿ ಸ್ಪರ್ಧಿಗಳ ಟಾಸ್ಕ್ ಹಾಗೂ ಅವರ ನಿಜ ಜೀವನವನ್ನು ನೋಡುತ್ತಿದ್ದ ವೀಕ್ಷಕರು ವಾರಾಂತ್ಯದಲ್ಲಿ ಕಿಚ್ಚನ ನಿರೂಪಣ ಶೈಲಿಯನ್ನು ನೋಡಲು ಕಾತರರಾಗಿದ್ದರು.

ಆದರೆ ಇದು ಅರ್ಧಕ್ಕೆ ಮುಗಿಯುತ್ತಿದ್ದಂತೆ ಅವರ ಕನಸುಗಳೆಲ್ಲ ನುಚ್ಚುನೂರಾಗಿದ್ದವು. ಬಿಗ್ ಬಾಸ್ ಸ್ಪರ್ಧಿಗಳು ಕೂಡ ಮನೆಯಿಂದ ಹೊರ ಬಂದ ನಂತರ ಸಾಕಷ್ಟು ಬೇಸರದಿಂದ ಇದ್ದರು. ಯಾಕೆಂದರೆ ಬಿಗ್ ಬಾಸ್ ಎಂದರೆ ಅದೊಂದು ದೊಡ್ಡ ವೇದಿಕೆ ಅದರಿಂದ ಅವರು ಸಾಕಷ್ಟು ಜನಪ್ರಿಯತೆ ಹಾಗೂ ಆರ್ಥಿಕ ಲಾಭವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಆದರೆ ಈ ಕನಸು ಅರ್ಧದಾರಿಯಲ್ಲೇ ನಿಂತು ವಾಪಸ್ ಆಗಿರುವುದು ಕಂಡು ಅವರಿಗೆ ಮಾತ್ರವಲ್ಲದೆ ಅವರ ಮನೆಯವರಿಗೂ ಕೂಡ ಬೇಸರವಾಗಿದೆ. ಆದರೆ ಈಗ ಬಂದಿರುವ ಮಾಹಿತಿಯ ಪ್ರಕಾರ ಈ ಕನಸು ಇನ್ನೂ ಕೂಡ ನನಸಾಗುವ ಸಾಧ್ಯತೆ ಇದೆ ಎಂಬುದು ತಿಳಿದು ಬಂದಿದೆ.

ಹೌದು ಬಿಗ್ ಬಾಸ್ ಕನ್ನಡ ಸೀಸನ್ 8 ಮತ್ತೊಮ್ಮೆ ಮರು ಚಾಲನೆಗೊಳ್ಳುವ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ. ಹೌದು ಸ್ನೇಹಿತರೆ ಈಗಾಗಲೆ ಹಲವಾರು ಬಿಗ್ ಬಾಸ್ ನ ಸ್ಪರ್ಧಿಗಳು ತಮ್ಮ ಲೈವ್ ವಿಡಿಯೋದಲ್ಲಿ ಬಿಗ್ ಬಾಸ್ನ ಜರ್ನಿಯನ್ನು ನಾವು ಮತ್ತೊಮ್ಮೆ ಪ್ರಾರಂಭಿಸಲು ನಾವು ಕಾತರರಾಗಿದ್ದೇವೆ ಎಂಬ ಸುಳಿವುಗಳನ್ನು ನೀಡುತ್ತಿದ್ದಾರೆ. ಈ ಪ್ರಕಾರ ಕಲರ್ಸ್ ಕನ್ನಡ ವಾಹಿನಿ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8 ಮತ್ತೊಮ್ಮೆ ಅತ್ಯಂತ ಶೀಘ್ರದಲ್ಲೇ ಪ್ರಾರಂಭ ಮಾಡುವ ಸಿದ್ಧತೆ ನಡೆಸಲಾಗುತ್ತಿದೆ ಎಂಬುದು ತಿಳಿದು ಬಂದಿದೆ.

ಎಲ್ಲಾ ಅಂದುಕೊಂಡಂತೆ ನಡೆದರೆ ಲಾಕ್ ಡೌನ್ ಮುಗಿಯುತ್ತಿದ್ದಂತೆ, ಬಿಗ್ ಬಾಸ್ ನ ಮುಂದುವರಿದ ಸೀಸನ್ ಕಿಚ್ಚ ಸುದೀಪ್ ರವರ ನಿರೂಪಣೆಯೊಂದಿಗೆ ಪ್ರಾರಂಭವಾಗುವುದು ನಾವು ನೋಡಬಹುದಾಗಿದೆ. ಈಗಾಗಲೇ ಕಿರುತೆರೆ ವೀಕ್ಷಕರು ಈ ಸುದ್ದಿ ಕೇಳುತ್ತಿದ್ದಂತೆ ಸಂತೋಷಗೊಂಡಿದ್ದಾರೆ. ವಾರಂತ್ಯ ಸ್ಪರ್ಧಿಗಳಿಂದ ಮನೋರಂಜನೆ ಹಾಗೂ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ರವರು ಒಂದು ತಮ್ಮ ನಿರೂಪಣೆಯ ಶೈಲಿಯ ಮೂಲಕ ವೀಕ್ಷಕರ ಮನಗೆಲ್ಲಲು ವಾಪಸಾಗಲಿದ್ದಾರೆ.

ನಾವಂತೂ ಈ ಹೊಸ ಸೀಸನ್ ನ್ನು ಅಲ್ಲಲ್ಲ ಹಳೆ ಸೀಸನ್ ನ ಹೊಸ ಅವತಾರವನ್ನು ವೀಕ್ಷಿಸಲು ಕಾತರರಾಗಿದ್ದೇವೆ ನೀವು ಕೂಡ ಅದೇ ಎಗ್ಸೈಟ್ಮೆಂಟ್ ಅಲ್ಲಿ ಇದ್ದೀರಾ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನೀವು ಎಷ್ಟೊಂದು ಬಿಗ್ ಬಾಸ್ ಸೀಸನ್ ಎಂಟರ ಮರು ಪ್ರಾರಂಭಕ್ಕೆ ಎಷ್ಟೊಂದು ಕಾತರರಾಗಿದ್ದರು ಎಂದು ಹಂಚಿಕೊಳ್ಳಿ. ಹಾಗೆ ಬಿಗ್ ಬಾಸ್ ಸೀಸನ್ 8 ಮರು ಪ್ರಾರಂಭವಾದರೆ ಯಾವ ತಿಂಗಳ ಯಾವ ತಾರೀಕಿಗೆ ಸ್ಟಾರ್ಟ್ ಆಗಬಹುದು ಎಂದು ಗೆಸ್ ಮಾಡಿ ಕಾಮೆಂಟ್ ಮಾಡಿ.

Get real time updates directly on you device, subscribe now.